spot_img
spot_img

ಸಿಂದಗಿ ಅಧ್ಯಕ್ಷರಾಗಿ ಶಾಂತವೀರ, ಉಪಾಧ್ಯಕ್ಷರಾಗಿ ರಾಜಣ್ಣಿ ಆಯ್ಕೆ

Must Read

- Advertisement -

ಸಿಂದಗಿ; ಪಟ್ಟಣದ ಪುರಸಭೆಯ ಅಧ್ಯಕ್ಷ, ಉಪಾದ್ಯಕ್ಷರ ಅವಧಿ ಮುಗಿದು ಹಲವು ವರ್ಷಗಳು ಕಳೆದಿತ್ತು ಅದು ಅ. ೨೮ ರಂದು ಚುನಾವಣೆ ಪ್ರಕ್ರಿಯೆ ಪ್ರಾರಂಭಿಸಿ ಸೆ.೯ ದಿನಾಂಕ ನಿಗದಿ ಪಡಿಸಲಾಗಿತ್ತು ಇಂದು ನಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಶಾಂತವೀರ ಬಿರಾದಾರ, ಉಪಾಧ್ಯಕ್ಷರಾಗಿ ರಾಜಣ್ಣಿ ನಾರಾಯಣಕರ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ವ ತಹಶೀಲ್ದಾರ ಪ್ರದೀಪಕುಮಾರ ಹಿರೇಮಠ ಘೋಷಣೆ ಮಾಡಿದರು.

ಒಟ್ಟು ೨೩ ಸದಸ್ಯರು ಹಾಗೂ ಶಾಸಕರು, ಸಂಸದರು ಸೇರಿ ೨೫ ಚುನಾಯಿತ ಸದಸ್ಯರಲ್ಲಿ ಅಧ್ಯಕ್ಷರ ಸ್ಥಾನಕ್ಕೆ ಓರ್ವ ಸದಸ್ಯ ಶಾಂತವೀರ ಬಿರಾದಾರ, ಉಪಾದ್ಯಕ್ಷ ಸ್ಥಾನಕ್ಕೆ ರಾಜಣ್ಣಿ ನಾರಾಯಣಕರ ತಲಾ ಒಂದು ನಾಮಪತ್ರ ಸಲ್ಲಿಕೆಯಾಗಿದ್ದವು ಪರಿಶೀಲನೆ ಮಾಡಲಾಗಿ ಎಲ್ಲ ದಾಖಲೆಗಳು ಸರಿಯಿದ್ದ ಕಾರಣ ಅವಿರೋಧ ಆಯ್ಕೆಯಾಗಿದ್ದಾರೆ.

ಈ ಸಂದರ್ಭದಲ್ಲಿ ೨೩ ವಾರ್ಡಗಳ ಪೈಕಿ ೧೮ ಜನ ಸದಸ್ಯರು ಹಾಜರಿದ್ದು ೫ ಜನ ಸದಸ್ಯರು ಗೈರು ಉಳಿದಿದ್ದಾರೆ. ಕೋರಂ ಭರ್ತಿಯಾಗಿದ್ದರಿಂದ ಘೋಷಣೆ ಮಾಡಲಾಗಿದೆ ಎಂದು ತಿಳಿಸಿದರು.

- Advertisement -

ವಿಜಯೋತ್ಸವ; ಅಧ್ಯಕ್ಷರ ಹಾಗೂ ಉಪಾದ್ಯಕ್ಷರು ಅವಿರೋಧವಾಗಿ ಆಯ್ಕೆಯಾಗಿದ್ದರ ಪ್ರಯಕ್ತ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ವಿಜಯೋತ್ಸವ ಆಚರಿಸಿದರು.

ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಸಮಿತಿ ಅದ್ಯಕ್ಷ ಸುರೇಶ ಪೂಜಾರಿ ಮಾತನಾಡಿ, ಕಾಂಗ್ರೆಸ್ ಪಕ್ಷದ ಸಿದ್ದಾಂತದಂತೆ ಎಲ್ಲ ಸದಸ್ಯರು ಶಾಸಕ ಅಶೋಕ ಮನಗೂಳಿಯವರ ಮಾತಿಗೆ ಮನ್ನಣೆ ನೀಡಿ ಅವಿರೋಧವಾಗಿ ಆಯ್ಕೆಯಾಗುವಲ್ಲಿ ೨೩ ಸದಸ್ಯರು ಪಕ್ಷ ಭೇದ ಮರೆತು ಸಹಕರಿಸಿದ್ದಾರೆ ಅಲ್ಲದೆ ರಾಜಣ್ಣಿ ನಾರಾಯಣಕರ ಅವರು ಜೆಡಿಎಸ್ ಪಕ್ಷವನ್ನು ತೊರೆದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡಿದ್ದರಿAದ ಅವರಿಗೆ ಪಕ್ಷದಿಂದ ಅಭಿನಂದನೆ ಸಲ್ಲಿಸಿದರು.

ನೂತನ ಅಧ್ಯಕ್ಷ ಶಾಂತವೀರ ಬಿರಾದಾರ ಮಾತನಾಡಿ, ಸತತ ಮೂರು ಬಾರಿ ಆಯ್ಕೆಯಾಗಿದ್ದರು ಕೂಡಾ ಅಧ್ಯಕ್ಷರಾಗುವ ಕನಸ್ಸು ನೆನೆಗುದಿಗೆ ಬಿದ್ದಿತ್ತು ನನ್ನ ಬಹುದಿನಗಳ ಕನಸ್ಸು ನೆನಸಾಗಲು ಶಾಸಕರ ಹಾಗೂ ೨೩ ಜನ ಸದಸ್ಯರ ಬೆಂಬಲದಿಂದ ಅವಿರೋಧವಾಗಿ ಆಯ್ಕೆಯಾಗುವಲ್ಲಿ ಅನುಕೂಲವಾಗಿದೆ. ಕಾರಣ ೨೩ ವಾರ್ಡುಗಳ ಅಭಿವೃದ್ಧಿಗೆ ಶಾಸಕರ ಸಹಕಾರದಿಂದ ಎಲ್ಲ ಸಚಿವರಿಂದ ಅನುದಾನ ತಂದು ಅಭಿವೃದ್ಧಿ ಪಡಿಸಲು ಪ್ರಯತ್ನಿಸುತ್ತೇನೆ ಅದಕ್ಕೆ ಎಲ್ಲ ಸಹಕಾರ ನೀಡುವಂತೆ ಮನವಿ ಮಾಡಿಕೊಂಡರು.

- Advertisement -

ಉಪಾಧ್ಯಕ್ಷ ರಾಜಣ್ಣಿ ನಾರಾಯಣಕರ ಮಾತನಾಡಿ, ದಿ.ಎಂ.ಸಿ.ಮನಗೂಳಿ ಅವರು ನನಗೆ ಮೂರು ಬಾರಿ ಆಯ್ಕೆ ಮಾಡಲು ಸಹಕಾರ ನೀಡಿದ್ದರು. ನಾನು ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದು ಅವರು ಪ್ರತಿಫಲವಾಗಿದೆ. ಅವರ ಪುತ್ರ ಶಾಸಕ ಅಶೋಕ ಮನಗೂಳಿ ಅವರ ಪ್ರೇರಪಣೆಯಿಂದ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡಿದ್ದೇನೆ ಪಟ್ಟಣದ ಅಭಿವೃದ್ಧಿಯಲ್ಲಿ ಶಾಸಕರ ಹಾಗೂ ಅದ್ಯಕ್ಷರ ಜೊತೆಗೂಡಿ ಕಾರ್ಯನಿರ್ವಹಿಸುತ್ತೆನೆ ನನ್ನ ಆಯ್ಕೆಯಲ್ಲಿ ಸಹಕರಿಸಿದ ಶಾಸಕರಿಗೆ ಹಾಗೂ ೨೩ ವಾರ್ಡ ಸದಸ್ಯರಿಗೆ ಋಣಿಯಾಗುತ್ತೇನೆ ಎಂದರು.

ಈ ವೇಳೆ ಪುರಸಭೆ ಮಾಜಿ ಅಧ್ಯಕ್ಷರಾದ ಡಾ.ಶಾಂತವೀರ ಮನಗೂಳಿ, ಭಾಷಾಸಾಬ ತಾಂಬೋಳಿ, ಹಣಮಂತ ಸುಣಗಾರ ಉಪಾಧ್ಯಕ್ಷ ಹಾಸೀಂ ಆಳಂದ, ಸದಸ್ಯರಾದ ಬಸವರಾಜ ಯರನಾಳ, ಬೀಮಣ್ಣ ಕಲಾಲ, ಶರಣಗೌಡ ಬಿರಾದಾರ, ಗೊಲ್ಲಾಳ ಬಂಕಲಗಿ ಸೇರಿದಂತೆ ಎಲ್ಲ ಸದಸ್ಯರು ಹಾಗೂ ಕುಮಾರ ದೇಸಾಯಿ, ಶರಣಪ್ಪ ಸುಲ್ಪಿ, ತಿರುಪತಿ ಬಂಡಿವಡ್ಡರ, ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ವಿಜಯೋತ್ಸವದಲ್ಲಿ ಪಾಲ್ಗೊಂಡಿದ್ದರು.

- Advertisement -

LEAVE A REPLY

Please enter your comment!
Please enter your name here

- Advertisement -

Latest News

ಸಮುದ್ರ ವಿಹಾರ ತಂದಿತು ಜೀವಕ್ಕೆ ಕುತ್ತು; ನೋಡನೋಡುತ್ತಲೇ ಮುಳುಗಿದ ಬೋಟ್

ಗೋವಾದಂಥ ಪ್ರವಾಸಿ ತಾಣಗಳಿಗೆ ಪ್ರವಾಸಿಗರು ಭೇಟಿ ಕೊಟ್ಟಾಗ ಅಲ್ಲಿನ ಸಮುದ್ರದಲ್ಲಿ ವಿಹಾರ ಮಾಡುವುದು ಅತ್ಯಂತ ಹೆಚ್ಚಿನ ಬೇಡಿಕೆಯಾಗಿರುತ್ತದೆ. ಹಾಗೆಯೇ ಗೋವಾದಲ್ಲಿ ನಡೆದಿದೆಯೆಂದು ಹೇಳಲಾದ ಬೋಟ್ ಪಯಣ ಅದರ...
- Advertisement -

More Articles Like This

- Advertisement -
close
error: Content is protected !!
Join WhatsApp Group