Homeಸುದ್ದಿಗಳುಸಿಂದಗಿ: ಕಾಂಗ್ರೆಸ್ ನಿಂದ ಈಶ್ವರಪ್ಪ ವಿರುದ್ಧ ಪ್ರತಿಭಟನೆ

ಸಿಂದಗಿ: ಕಾಂಗ್ರೆಸ್ ನಿಂದ ಈಶ್ವರಪ್ಪ ವಿರುದ್ಧ ಪ್ರತಿಭಟನೆ

ಸಿಂದಗಿ: ಸಚಿವ ಕೆ.ಎಸ್ ಈಶ್ವರಪ್ಪನವರ ಹೇಳಿಕೆಯನ್ನು ಖಂಡಿಸಿ ಆಲಮೇಲ ತಾಲೂಕಿನ ಕಾಂಗ್ರೆಸ್ ಪದಾಧಿಕಾರಿಗಳು ಪಟ್ಟಣದ ಬಸ್ ನಿಲ್ದಾಣದ ಎದುರಿಗೆ ಪ್ರತಿಭಟನೆ ನಡೆಸಿ ಉಪ ತಹಸೀಲ್ದಾರ ಜೋತಿ ಮುಚ್ಚಂಡಿ ಅವರ ಮೂಲಕ ರಾಜಪಾಲರಿಗೆ ಮನವಿ ಸಲ್ಲಿಸಿದರು.

ಕಾಂಗ್ರೆಸ್ ಮುಖಂಡ ಅಶೋಕ ಮನಗೂಳಿ ಮಾತನಾಡಿ, ರಾಜ್ಯ ಸರ್ಕಾರದ ಜವಾಬ್ದಾರಿಯುತ ಸ್ಥಾನದ ಸಚಿವರಾಗಿರುವ ಕೆ.ಎಸ.ಈಶ್ವರಪ್ಪನವರು ಸ್ವಾಭಿಮಾನ, ದೇಶಾಭಿಮಾನದೊಂದಿಗೆ ಬಡವರ, ದಿನ ದಲಿತರ ಹಿಂದುಳಿದ ವರ್ಗಗಳ ಜನತೆಯ ಹಿತಕಾಪಾಡುವ ನಿಟ್ಟಿನಲ್ಲಿ ನಿರುದ್ಯೋಗ, ಬೆಲೆ ಏರಿಕೆಯ ಜೊತೆಗೆ ಅಭಿವೃದ್ಧಿ ವಿಷಯಗಳ ಚರ್ಚೆ ಮಾಡುವುದರ ಮೂಲಕ ಬಡವರ ಹಿತ ಕಾಪಾಡಬೇಕಾಗಿರುವ ಸಚಿವರು, ಇದನ್ನು ಬಿಟ್ಟು ಇಲ್ಲಸಲ್ಲದ ಹೇಳಿಕೆಗಳನ್ನು ನೀಡುತ್ತ ಮುಗ್ದ ಜನರ ಭಾವನೆಗಳನ್ನು ಕೆರಳಿಸುವಂತಹ ಹೇಳಿಕೆಯನ್ನು ನೀಡಿರುವ ಇದು ಅತ್ಯಂತ ಅಪಾಯಕಾರಿ ದೇಶದ್ರೋಹದ ಹೇಳಿಕೆಯಾಗಿದ್ದು, ಕೂಡಲೇ ರಾಜ್ಯಪಾಲರು ಇಂತಹ ದೇಶದ್ರೋಹಿ ಸಚಿವರನ್ನು ಸಂಪುಟದಿಂದ ವಜಾಗೊಳಿಸಿ ಅವರ ಮೇಲೆ ದೇಶದ್ರೋಹದ ಆರೋಪದಡಿಯಲ್ಲಿ ಪ್ರಕರಣ ದಾಖಲಿಸಬೇಕು ಎಂದು ಆಗ್ರಹಿಸಿದರು.

ಕಾಂಗ್ರೆಸ್ ಜಿಲ್ಲಾ ಪ್ರ-ಕಾರ್ಯದರ್ಶಿ ರಮೇಶ ಭಂಟನೂರ, ರಾಜು ಕೂಚಬಾಳ ಮಾತನಾಡಿ, ನಮ್ಮ ರಾಷ್ಟ್ರದ ಅಖಂಡತೆ, ಸಾರ್ವಭೌಮತೆ ಮತ್ತು ಸಂವಿಧಾನದ ಸಂಕೇತವಾಗಿರುವ ತ್ರಿವರ್ಣ ಧ್ವಜವನ್ನು ಸಚಿವರಾಗಿರುವ ಕೆ.ಎಸ.ಈಶ್ವರಪ್ಪನವರು ತೆಗೆದು ಕೇಸರಿ ಧ್ವಜವನ್ನು ಹಾರಿಸುತ್ತೇನೆ ಎಂದು ನೀಡಿರುವ ಹೇಳಿಕೆಯಿಂದ ನಮ್ಮ ದೇಶದ ಪ್ರಜೆಗಳಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ ಸಂವಿಧಾನದ ಆಶಯಗಳಿಗೆ ಯಾರೇ ಧಕ್ಕೆಯಾಗುವಂತಹ ಹೇಳಿಕೆಗಳನ್ನು ನೀಡಿದರೆ ಸಹಿಸಲಾಗದು ಇದನ್ನು ನಾವು ಖಂಡಿಸುತ್ತೇವೆ, ರಾಜಪಾಲರು ಮಧ್ಯೆ ಪ್ರವೇಶಿಸಿ ಕೆ.ಎಸ.ಈಶ್ವರಪ್ಪನವರಿಗೆ ತಕ್ಷಣವೇ ಸಚಿವ ಸಂಪುಟದಿಂದ ವಜಾಗೊಳಿಸಿ ಅವರನ್ನು ದೇಶದ್ರೋಹದ ಆರೋಪದದಡಿಯಲ್ಲಿ ಬಂಧಿಸಿ ರಾಷ್ಟ್ರಧ್ವಜದ ಗೌರವವನ್ನು ಎತ್ತಿ ಹಿಡಿಯಬೇಕು ಎಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಗ್ರಾಮ ಲೆಕ್ಕಾಧಿಕಾರಿ ಭೀಮಣ್ಣಾ ಜೇರಟಗಿ, ಗ್ರಾಮ ಸಹಾಯಕ ಸೈಪನ ವಾಲೀಕಾರ, ಸುಶಾಂತ ಪೂಜಾರ, ಸಂತೋಷ ಹರನಾಳ, ಪಪಂ ಸದಸ್ಯರಾದ ಸಾದೀಕ ಸುಂಬಡ, ಅಶೋಕ ಕೊಳ್ಳಾರಿ, ಸಂತೋಷ ಜರಕರ, ಭೀಮಶ್ಯಾ ಬಮ್ಮನಹಳ್ಳಿ, ಜೈಭೀಮ ನಾಯ್ಕೋಡಿ, ಭಾಗ್ಯವಂತ ಆಲಮೇಲ್ಕರ್, ಹಾಗೂ ದಾವಲಪ್ಪಾ ಕಲಬಾ, ಪುಂಡಲೀಕ ದೊಡಮನಿ, ಪರಶುರಾಮ ಕಾಂಬಳೆ, ಮುನ್ನಾ ತಾಂಬೊಳಿ, ಹುಸೇನ ವಾಲೀಕಾರ, ಬಸೀರ ತಾಂಬೊಳಿ, ರವಿ ಆಲಹಳ್ಳಿ, ರಮೇಶ ನಡುವಿನಕೇರಿ ಸೇರಿದಂತೆ ಹಲವರು ಇದ್ದರು.

RELATED ARTICLES

Most Popular

error: Content is protected !!
Join WhatsApp Group