spot_img
spot_img

ಸಿಂದಗಿ: 23 ನೇ ವಾರ್ಡ್ ನಾಗರಿಕರಿಂದ ಪ್ರತಿಭಟನೆ

Must Read

ಸಿಂದಗಿ: ಪುರಸಭೆ ಚುನಾವಣೆ ಮುಗಿದು 3 ವರ್ಷಗಳೇ ಕಳೆದಿವೆ ಇನ್ನೂವರೆಗೂ ಯಾವೊಬ್ಬ ಅಧಿಕಾರಿ 23ನೇ ವಾರ್ಡ ಕಡೆಗೆ ಕಣ್ಣೆತ್ತಿ ನೋಡಿಲ್ಲ ಏಕೆಂದರೆ ಇಲ್ಲಿನ ಜನ ಯಾರು ಪುರಸಭೆಗೆ ಹೋಗಿ ಓಣಿಯ ಸಮಸ್ಯೆಗಳನ್ನು ಹೇಳಿಕೊಳ್ಳುವಷ್ಟು ನಾವೇನು ಶ್ರೀಮಂತರಿಲ್ಲ ಇಲ್ಲಿ ಎಲ್ಲರು ನಿತ್ಯ ದುಡಿಯುವ ಜನ ಇದ್ದೀವಿ ಅಂತ ಈಗ ಪ್ರಚಾರ ತೆಗೆದುಕೊಳ್ಳಲು ಪೋಜು ಕೊಡಲು ಬಂದಿದ್ದಾರೆ ಅಂತ ಮುಖ್ಯಾಧಿಕಾರಿ ರಾಜಶ್ರೀ ತುಂಗಳ ಅವರಿಗೆ ಸಾರ್ವಜನಿಕರು ಘೆರಾವ್ ಹಾಕಿ ಮಾತಿನ ಚಕಮುಕಿ ನಡೆಸಿದರು. 

ಪಟ್ಟಣದ 23ನೇ ವಾರ್ಡನಲ್ಲಿ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಸ್ವಚ್ಚತಾ ಅಭಿಯಾನ ಹಮ್ಮಿಕೊಳ್ಳಲಾಗಿತ್ತು ಆ ಸಂದರ್ಭದಲ್ಲಿ ಸಾರ್ವಜನಿಕರು ಇಲ್ಲಿ ನಾವೇ ಗಟಾರ ತೆಗೆಯಬೇಕು, ಬೀದಿ ಲೈಟ್‍ಗಳಿಲ್ಲ ಸ್ವಚ್ಚತೆಯಂತೂ ಮೊದಲೇ ಇಲ್ಲ ಕಸ ವಿಲೇವಾರಿ ಗಾಡಿ ಗಟ್ಟಿ ಸೌಂಡ್ ಇಟ್ಟುಕೊಂಡು ಜೋರಾಗಿ ಹೋಗಿ ಬಿಡುತ್ತವೆ ಹೀಗೆ ಪುರಸಭೆ ಸಿಬ್ಬಂದಿ ಮನಬಂದಂತೆ ಕೆಲಸ ಮಾಡುತ್ತಾರೆ ಉಸ್ತಾದ ಅವರಿಗೆ ಪೋನ್ ಮಾಡಿದರೆ ಅವರು ಪೋನ ತೆಗೆದುಕೊಳ್ಳುವುದಿಲ್ಲ ಹಾಗಿದ್ದರೆ ನಾವ್ಯಾರು ಪುರಸಭೆಗೆ ಟ್ಯಾಕ್ಸ ಕಟ್ಟುದಿಲ್ಲವೋ ಹೇಗೆ ? ಶ್ರೀಮಂತರಿಗೊಂದು ಬಡವರಿಗೊಂದು ನ್ಯಾಯವೇ ? ಬಡವನ ಸಿಟ್ಟು ದವಡೆಗೆ ಮೂಲ ಎನ್ನುವಂತೆ ನಮ್ಮ ಪಾಡು ಆಗಿದೆ ಎಂದು ತಮ್ಮನ್ನು ತಾವು ಶಪಿಸಿಕೊಂಡು ಸಾರ್ವಜನಿಕರು ತೆಪ್ಪಗೆ ಕುಳಿತರೂ ಪುರಸಭೆ ಸಿಬ್ಬಂದಿ ಮಾತ್ರ ಸರಕಾರಿ ಯೋಜನೆಯನ್ನು ಪೂರೈಸುವ ನಿಟ್ಟಿನಲ್ಲಿ ತಮ್ಮ ಪಾಡಿಗೆ ತಾವು ಕೆಲಸ ಮುಗಿಸಿ ದೌಡಾಯಿಸಿದರು.

ಪುರಸಭೆ ಮುಖ್ಯಾಧಿಕಾರಿ ರಾಜಶ್ರೀ ತುಂಗಳ ಮಾತನಾಡಿ, ನಾನು ಕೆಲ ತಿಂಗಳ ಹಿಂದೆ ಸೇವೆಗೆ ಹಾಜರಾಗಿದ್ದೇನೆ ಹಂತ ಹಂತವಾಗಿ ಕೆಲಸ ಮಾಡುತ್ತೇನೆ. ಇಲ್ಲಿ 33 ಮಾತ್ರ ಸಿಬ್ಬಂದಿಯಿದೆ ಊರು ಮಾತ್ರ ದೊಡ್ಡದಿದೆ ಅದಕ್ಕೆ ಸ್ವಚ್ಚತೆ ಮಾಡಲು ತೊಂದರೆಯಾಗುತ್ತಿದೆ ಸಾರ್ವಜನಿಕರು ಗಟಾರಗಳ ಮೇಲೆ ಮನೆ, ಅಥವಾ ಕಟ್ಟೆಗಳನ್ನು ಕಟ್ಟಿಕೊಂಡರೆ ಸ್ವಚ್ಚ ಮಾಡಲು ಸಾಧ್ಯವಿಲ್ಲ. ಒಮ್ಮೆಲೆ ಸುಧಾರಣೆ ಮಾಡಲಿಕ್ಕೆ ಆಗದು ಎಲ್ಲರು ಸಹಕರಿಸಿದರೆ ಮಾತ್ರ ಒಂದೊಂದಾಗಿ ಕೆಲಸ ಮಾಡಲು ಅನುಕೂಲವಾಗುತ್ತದೆ ಎಂದು ಹೇಳಿದರು.

ಪುರಸಭೆ ಅಧ್ಯಕ್ಷ ಡಾ. ಶಾಂತವೀರ ಮನಗೂಳಿ ಮಾತನಾಡಿ, ಕಳೆದ 15 ವರ್ಷಗಳಿಂದ ಅಧಿಕಾರ ನಡೆಸಿದ್ದಾರೆ ಅವರನ್ನು ಯಾರು ಪ್ರಶ್ನೆ ಮಾಡಿಲ್ಲ ನಾವೇ ನಿಮ್ಮ ಓಣಿಗೆ ಬಂದು ಸ್ವಚ್ಚ ಮಾಡುತ್ತಿದ್ದೇವೆ. ಈ ಮೂರು ವಾರ್ಡುಗಳ ಸದಸ್ಯರಿಗೆ ಲೈಟ್‍ಗಳನ್ನು ಪೂರೈಸಿದ್ದೇವೆ ಮತ್ತೆ ಯಾವ ಕಂಬದಲ್ಲಿ ಲೈಟ್ ಇಲ್ಲವೋ ಅಲ್ಲಿ ಅಳವಡಿಸುವಂತೆ ನಿರ್ದೆಶನ ನೀಡುತ್ತೇನೆ ಪುರಸಭೆ ಸಿಬ್ಬಂದಿಯ ಜೊತೆ ಸಹಕಾರವಿರಲಿ ಎಂದರು. 

ಸದಸ್ಯರ ಪ್ರತಿನಿಧಿ ಮಹಾಂತೇಶ ನಾಯ್ಕೋಡಿ ಮಾತನಾಡಿ, ಚುನಾವಣೆ ಮುಗಿದು 2020ರಿಂದ ಇಲ್ಲಿಯವರೆಗೆ ಒಂದೂ ಅನುದಾನ ನನ್ನ ವಾರ್ಡಿಗೆ ಬಂದಿಲ್ಲ ಇಲ್ಲಿಯವರೆಗೆ 145 ಲೈಟುಗಳನ್ನು ಹಾಕಿದ್ದೇನೆ ಪುರಸಭೆ ಮಾತ್ರ ಒಮ್ಮೆ 5 ಇನ್ನೊಮ್ಮೆ 4 ಹೀಗೆ 9 ಲೈಟುಗಳನ್ನು ಮಾತ್ರ ಕೊಟ್ಟಿದೆ ಅದಕ್ಕೆ ಪುರಸಭೆ ಕಡೆ ಹೋಗುವುದನ್ನೇ ಬಿಟ್ಟಿದ್ದೇನೆ ಅಧಿಕಾರಿಗಳು ಮನಸ್ಸಿಗೆ ಬಂದಂತೆ ಮಾಡಲಿ ಎಂದು ದೂರಿದರು.

ಜೆಡಿಎಸ್ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಮಹಿಬೂಬ ಗಿರಣಿ ಮಾತನಾಡಿ, 21, 22, 23, ಈ ಮೂರು ವಾರ್ಡುಗಳ ಸ್ಲಂ ಏರಿಯಾಗಳಿಗೆ ಇಲ್ಲಿ ಎಲ್ಲರು ದುಡಿದು ತಿನ್ನುವವರೆ ಇಲ್ಲಿನ ಹೆಣ್ಣು ಮಕ್ಕಳಿಗೆ ಶೌಚಾಲಯವಿಲ್ಲ ಬಯಲು ಶೌಚಾಲಯವೇ ಗತಿ ಇದರಿಂದ ಹೆಣ್ಣು ಮಕ್ಕಳಿಗೆ ಮರ್ಯಾದೆ ಇಲ್ಲದಂತಾಗಿದೆ ನೀವು ಒಬ್ಬ ಹೆಣ್ಣು ಮಗಳಾಗಿ ನ್ಯಾಯ ಕೊಡಿ ಎಂದರು.

ಈ ಸಂದರ್ಭದಲ್ಲಿ ಪುರಸಭೆಯ ಸ್ಯಾನಿಟರಿ ಅಧಿಕಾರಿಗಳಾದ ಇಂದುಮತಿ ಮಣ್ಣೂರ, ಎನ್.ಎಂ.ಉಸ್ತಾದ, ಜೆಇ ಅಜರ ನಾಟೀಕಾರ ಸೇರಿದಂತೆ ಸಿಬ್ಬಂದಿ ಇದ್ದರು.

- Advertisement -

LEAVE A REPLY

Please enter your comment!
Please enter your name here

- Advertisement -

Latest News

ರಿಯಾಯಿತಿ ದರದಲ್ಲಿ ಸಂತಾನ ಪ್ರಾಪ್ತಿ ಚಿಕಿತ್ಸೆ

ಬೆಳಗಾವಿ: ಮಕ್ಕಳಿಲ್ಲದ ಬಡ ದಂಪತಿಗಳಿಗೆ ರಿಯಾಯಿತಿ ದರದಲ್ಲಿ ಸಂತಾನ ಪ್ರಾಪ್ತಿ ಚಿಕಿತ್ಸೆ ಕೊಡಿಸಲು ಕೊಲ್ಲಾಪುರದ ಸಿದ್ಧಗಿರಿ ಮಠದ ದತ್ತಿ ಆಸ್ಪತ್ರೆಯಲ್ಲಿ ಐವಿಎಫ್ ಕೇಂದ್ರ ಸ್ಥಾಪಿಸಲಾಗಿದೆ ಎಂದು ಮುಜರಾಯಿ,...
- Advertisement -

More Articles Like This

- Advertisement -
close
error: Content is protected !!