spot_img
spot_img

ಸಿಂದಗಿಯಲ್ಲಿ ಲಸಿಕೆ ಹಾಕಿಸಿ ಜೀವ ಉಳಿಸಿ ಜಾಥಾ

Must Read

- Advertisement -

ಸಿಂದಗಿ: ಪಟ್ಟಣದ ಪುರಸಭೆ ಅಧ್ಯಕ್ಷರು, ಉಪಾಧ್ಯಕ್ಷರ ನೇತೃತ್ವ ಹಾಗೂ ಮಕ್ಕಾ ಇಸ್ಲಾಂ ಕಮಿಟಿಯ ಸಂಯೋಗದಲ್ಲಿ ಭಯಬೇಡ ಜಾಗೃತರಾಗಿ,ಲಸಿಕೆ ಹಾಕಿಸಿ ಜೀವ ಉಳಿಸಿ ಎಂಬ ಜಾಥಾ ಮಾಡುವ ಮೂಲಕ ಪಟ್ಟಣದ ವಾರ್ಡ್ ನಂಬರ್ 9 ರಲ್ಲಿ ಉಚಿತ ಲಸಿಕೆ ಕಾರ್ಯಕ್ರಮ ನಡೆಸಿ ಜಾಗೃತಿ ಮೂಡಿಸಿ ಆಶಾ ಕಾರ್ಯಕರ್ತರಿಗೆ ಮತ್ತು ಸ್ವಯಂ ಸೇವಕ ಮಹಿಳೆಯರಿಗೆ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಪುರಸಭೆಯ ಅಧ್ಯಕ್ಷ  ಡಾ.ಶಾಂವೀರ ಮನಗೂಳಿ ಮಾತನಾಡಿ, ಇಡೀ ದೇಶದಲ್ಲಿ ಕರೋನಾ ಮುಕ್ತ ಸಮಾಜ ನಿರ್ಮಾಣ ಮಾಡಲು ಕಡ್ಡಾಯವಾಗಿ ಲಸಿಕೆಯನ್ನು ಹಾಕಿಕೊಳ್ಳಿ ಲಸಿಕೆ ಹಾಕುವುದರಿಂದ ದೇಹದ ಮೇಲೆ ಯಾವುದೇ ಅಡ್ಡ ಪರಿಣಾಮಗಳು ಬೀರುವುದಿಲ್ಲ ಹೀಗಾಗಿ ಲಸಿಕೆ ಕಡ್ಡಾಯವಾಗಿ ತೆಗೆದುಕೊಳ್ಳಿ ಕೆಲವೊಂದು ಜನ ಲಸಿಕೆ ಬಗ್ಗೆ ತಪ್ಪು ಮಾಹಿತಿಯನ್ನು ನೀಡುತ್ತಿದ್ದಾರೆ ತಾವು ಅದಕ್ಕೆ ಕಿವಿಗೊಡದೆ ವೈದ್ಯರ ಸಲಹೆ ತೆಗೆದುಕೊಂಡು ಲಸಿಕೆಯನ್ನು ಪಡೆದುಕೊಳ್ಳಬೇಕು ಎಂದು ವಾರ್ಡಿನ ಜನರಲ್ಲಿ ಜಾಗೃತಿ ಮೂಡಿಸಿದರು.

ಮಕ್ಕಾ ಕಮಿಟಿಯ ಚೇರಮನ್ ಎಂ.ಎ. ಸಿಂದಗಿಕರ ಇವರು ಕೋರೋನ ಕಷ್ಟಕಾಲದಲ್ಲಿ ಹಗಲಿರುಳೆನ್ನದೆ ಶ್ರಮಿಸಿದ  ಕೊರೋನ ವಾರಿಯರ್ ಗಳಾದ ಆರೋಗ್ಯ ಇಲಾಖೆ ಅಧಿಕಾರಿಗಳು ಹಾಗೂ ಆಶಾ ಕಾರ್ಯಕರ್ತರು ಅಂಗನವಾಡಿ ಕಾರ್ಯಕರ್ತರು ಇವರೆಲ್ಲರಿಗೆ ಸನ್ಮಾನ ಮಾಡುವುದರ ಮೂಲಕ ಪ್ರೋತ್ಸಾಹಿಸಿದರು.

- Advertisement -

ಕಾರ್ಯಕ್ರಮದಲ್ಲಿ ಆರೋಗ್ಯ ಶಿಕ್ಷಣಾಧಿಕಾರಿ ಎಸ್.ಡಿ.ಕುಲರ್ಣಿ, ಪುರಸಭೆ ಉಪಾಧ್ಯಕ್ಷ ಹಸೀಮ್ ಪೀರ್ ಆಳಂದ, ಮಕ್ಕಾ ಕಮಿಟಿ ಕಾರ್ಯದರ್ಶಿ ಅಮೀನದಿನ ವಾಲಿಕಾರ ಅಹಮದ್ ಸಿಂಧೆ, ಸತೀಶ್ ಬಿರಾದಾರ್, ಅಲ್ಲಾಭಕ್ಷ ಅಳಂದ, ರಜಾಕ್ ಮುಜಾವರ್, ಫೈರೋಜ್ ನಿಂಬರ್ಗಿ, ಹುಸೇನ್ ನಾಗಠಾಣ, ಅಭಿಷೇಕ್ ಮೆಹಬೂಬ್ ಆಳಂದ್, ಬಂದೇನವಾಜ್ ಕರ್ಜಗಿ ಸೇರಿದಂತೆ ವಾರ್ಡಿನ ಪ್ರಮುಖರು ಭಾಗವಹಿಸಿದ್ದರು.

- Advertisement -
- Advertisement -

Latest News

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಧಾರವಾಡ ಪ್ರಾದೇಶಿಕ ವಿಭಾಗಕ್ಕೆ ನಿರ್ದೇಶಕರಾಗಿ ಶ್ರೀಮತಿ ದಯಾಶೀಲ 

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಧಾರವಾಡ ಪ್ರಾದೇಶಿಕ ವಿಭಾಗಕ್ಕೆ ಬೆಳ್ತಂಗಡಿ ಮೂಲದ ಶ್ರೀಮತಿ ದಯಾಶೀಲರವರು ಧರ್ಮಸ್ಥಳದ ಪೂಜ್ಯ ವೀರೇಂದ್ರ ಹೆಗಡೆಯವರ ಆಶೀರ್ವಾದದೊಂದಿಗೆ ಯೋಜನೆಯ ಮುಖ್ಯ...
- Advertisement -

More Articles Like This

- Advertisement -
close
error: Content is protected !!
Join WhatsApp Group