spot_img
spot_img

ಸಿಂದಗಿ; ಎಸ್‍ಸಿ ಎಸ್‍ಟಿ ಕುಂದುಕೊರತೆಗಳ ಸಭೆ

Must Read

ಸಿಂದಗಿ: ಭಾರತಕ್ಕೆ ಸಂವಿಧಾನ ದೊರೆತು ಹಲವು ದಶಕಗಳು ಕಳೆದರೂ ಇನ್ನೂ ಅಸ್ಪೃಶ್ಯತೆ ನಿಂತಿಲ್ಲ ಎನ್ನುವ ಕೂಗು ಎಲ್ಲೆಡೆ ಕೇಳಿ ಬರುತ್ತಿದ್ದು ಪೊಲೀಸ ಸಿಬ್ಬಂದಿ ಮೂಲಕ ಗ್ರಾಮೀಣ ಭಾಗದಲ್ಲಿ ಜಾಗೃತಿ ಮೂಡಿಸುವಂತೆ ಮಾಡುವುದಲ್ಲದೆ ಕಾನೂನು ಸುವ್ಯವಸ್ಥೆಗೆ ಯಾರೇ ಅಡ್ಡಿ ಪಡಿಸುವ ಕಾರ್ಯಗಳು ನಡೆದಲ್ಲಿ ಬರೀ ಪೊಲೀಸ ಇಲಾಖೆಯಿಂದ ಸಾಧ್ಯವಿಲ್ಲ ಸಾರ್ವಜನಿಕರ ಸಹಕಾರ ಅತ್ಯಗತ್ಯ ಎಂದು ಸಿಪಿಐ ರವಿ ಉಕ್ಕುಂದ ಹೇಳಿದರು

ಪಟ್ಟಣದ ಡಾ.ಅಂಬೇಡ್ಕರ ಭವನದ ಆವರಣದಲ್ಲಿ ಎಸ್‍ಸಿ ಎಸ್‍ಟಿ ಕುಂದು-ಕೊರತೆ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ತಾಲೂಕಿನಲ್ಲಿ ಅವ್ಯಾಹತವಾಗಿ ಗಾಂಜಾ ಮಾರಾಟವಾಗುತ್ತಿದೆ ಇದರಿಂದ ಯುವಕರು ಹಾಳಾಗುತ್ತಿದ್ದಾರೆ ಎನ್ನುವ ದೂರುಗಳನ್ವಯ ದೇವರಹಿಪ್ಪರಗಿ, ಆಲಮೇಲ, ಸಿಂದಗಿ ಸಿಬ್ಬಂದಿ ಜಾಲ ಬೀಸಿದ್ದರಿಂದ ಸುಮಾರು 9 ಕೆ.ಜಿ ಅಷ್ಟು ಗಾಂಜಾ ವಶಪಡಿಸಿಕೊಂಡು ಆರೋಪಿಗಳನ್ನು ಬಂಧಿಸಲಾಗಿದೆ. ಅದರ ಮೂಲ ವ್ಯಕ್ತಿಗಳ ಹುಡುಕಾಟ ನಡೆಸಲಾಗಿದ್ದು. ಸಾರ್ವಜನಿಕರು ಮಾಹಿತಿ ಒದಗಿಸಿದರು ಕೂಡಾ ಗುಪ್ತ ಮಾಹಿತಿ ಮೇರೆಗೆ ಜಾಲಬೀಸಿ ಬುಡ ಸಮೇತ ಕಿತ್ತೊಗೆಯುವ ಕಾರ್ಯಕ್ಕೆ ಸಹಕಾರಿಯಾಗುತ್ತದೆ ಈ ಕಾರ್ಯದಲ್ಲಿ ಎಂತಹ ವ್ಯಕ್ತಿ ಇದ್ದರು ಕೂಡಾ ನಿರ್ದಾಕ್ಷಿಣ್ಯವಾಗಿ  ಕ್ರಮ ತೆಗೆದುಕೊಳ್ಳುತ್ತೇವೆ ಅಲ್ಲದೆ ಗ್ರಾಮೀಣ ಭಾಗದಲ್ಲಿ ಅಕ್ರಮ ಮದ್ಯ ಮಾರಾಟದಿಂದ ಯುವಕರು ಹಾಳಾಗುತ್ತಿರುವ ಬಗ್ಗೆ ಮಾಹಿತಿ ಬಂದಿದ್ದು ಅಬಕಾರಿ ಇಲಾಖೆಗೆ ನಿರ್ದೇಶನ ನೀಡಲಾಗುವುದು. ರಾಂಪೂರ ಪಿ.ಎ.ಗ್ರಾಮದ ರಸ್ತೆಯ ಮಧ್ಯದಲ್ಲಿರುವ ಡಾ. ಅಂಬೇಡ್ಕರ್ ವೃತ್ತಕ್ಕೆ ಸುತ್ತುವರೆದು ಟಂಟಂಗಳು ನಿಲ್ಲುತ್ತಿರುವುದರಿಂದ ಸಂಚಾರಕ್ಕೆ ತೊಂದರೆಯಾಗುತ್ತಿದ್ದು ಅದಕ್ಕೆ ಕ್ರಮ ಜರುಗಿಸಲಾಗುವುದು. ದಲಿತ ಮುಖಂಡರು ತಮ್ಮ ಮಕ್ಕಳಿಗೆ ಶಿಕ್ಷಣಕ್ಕೆ ಹೆಚ್ಚು ಮಹತ್ವ ಕೊಡಿ ಎಂದು ವಿನಂತಿಸಿದರು.

ದಲಿತ ಮುಖಂಡ ಅಶೋಕ ಸುಲ್ಪಿ ಮಾತನಾಡಿ, ಹಿಂದಿದ್ದ ಪಿಎಸ್‍ಐ ಪೂಜಾರಿ ಅವರು ಕ್ರಿಮಿನಲ್‍ಗಳ ನಂಟು ಇಟ್ಟುಕೊಂಡು ಎಲ್ಲೆಡೆ ದಲಿತರ ಮೇಲೆ ದೌರ್ಜನ್ಯ, ಹಲ್ಲೆಗಳು ನಡೆದರು ಕೂಡಾ ಆ ಪ್ರಕರಣಗಳನ್ನು ಮುಚ್ಚಿಹಾಕಿದ್ದಾರೆ. ಗಾಂಜಾ ಮಾರಾಟ,  ವೇಶ್ಯಾವಾಟಿಕೆ ಹೆಚ್ಚಾಗಿವೆ ಅದನ್ನುತಡೆಗಟ್ಟುವಂತೆ ಕ್ರಮ ಜರುಗಿಸಿ ನಾವೆಲ್ಲ ಕಾನೂನಿಗೆ ಗೌರವ ಸಲ್ಲಿಸುತ್ತೇವೆ ಇಲಾಖೆ ದಲಿತರ ರಕ್ಷಣೆ ಕೊಡಿ ಎಂದರು.

ದಸಂಸ ಜಿಲ್ಲಾ ಸಂಚಾಲಕ ವೈ.ಸಿ.ಮಯೂರ ಮಾತನಾಡಿ, ತಾಲೂಕಿನ 30 ಇಲಾಖೆಗಳು ಸೇರಿ ಏಕಗವಾಕ್ಷಿ ರೀತಿಯಲ್ಲಿ ಸಭೆ ನಡೆಸಿದರೆ ಒಂದೇ ಕಾಲಕ್ಕೆ ಎಲ್ಲ ಸಮಸ್ಯೆಗಳನ್ನು ನಿವಾರಿಸಲು ಸಾಧ್ಯ. ಗ್ರಾಮೀಣ ಭಾಗದಲ್ಲಿ ಇನ್ನೂ ಅಸ್ಪ್ರಶ್ಯತೆ ಜೀವಂತವಾಗಿದೆ. ಲೈಸನ್ಸ ಇಲ್ಲದೆ ಕಿರಾಣಿ ಅಂಗಡಿ, ಪಾನ್‍ಶಾಪ್ ಸೇರಿದಂತೆ ಎಲ್ಲೆಂದರಲ್ಲಿ ಅಕ್ರಮ ಮದ್ಯ ಮಾರಾಟ ಮಾಡಲಾಗುತ್ತಿರುವುದರಿಂದ ಯುವಕರು ದುಶ್ಚಟಕ್ಕೆ ಬಲಿಯಾಗುತ್ತಿದ್ದಾರೆ ಅದನ್ನು ತಡೆಗಟ್ಟಬೇಕು. ಎಸ್‍ಸಿಪಿ ಟಿಎಸ್‍ಪಿ ಯೋಜನೆಯಡಿ ದಲಿತ ಕೇರಿಗಳಲ್ಲಿ ಕೆಲಸ ನಡೆಯದೇ ಎಲ್ಲೆಂದರಲ್ಲಿ ಮಾಡಿ ಬಿಲ್ಲು ಎತ್ತಿ ಹಾಕುತ್ತಿದ್ದಾರೆ. ಅದು ನಿಲ್ಲಬೇಕು ಎಂದು ತಿಳಿಸಿದರು.

ವಿದ್ಯಾರ್ಥಿ ಒಕ್ಕೂಟದ ಹರ್ಷವರ್ಧನ ಪೂಜಾರಿ ಮಾತನಾಡಿ, ಎಸ್‍ಸಿ ಹಾಸ್ಟೆಲ್ ಹೋಗುವ ದಾರಿಯಲ್ಲಿ ಅನೈತಿಕ ಚಟುವಟಿಕೆಗಳು ನಡೆಯುತ್ತಿದ್ದು ಕಾರಣ ಕೆಲವೆಡೆ ಸಿಸಿ ಟಿವಿ ಅಳವಡಿಸುವಂತೆ ಮನವಿ ಮಾಡಿದರು.

ಕಸಾಪ ಅದ್ಯಕ್ಷ ರಾಜಶೇಖರ ಕೂಚಬಾಳ ಮಾತನಾಡಿ, ದಲಿತರ ಮೇಲೆ ಅನೇಕ ದೌರ್ಜನ್ಯಗಳು, ಹಲ್ಲೆಗಳು ನಡೆದರು ಸಹ ಇನ್ನೂವರೆಗೆ ಜಾತಿ ನಿಂದನೆ ಪ್ರಕರಣಗಳು ದಾಖಲಿಸಿಲ್ಲ ಅವುಗಳನ್ನು ರಾಜಿ ಮೂಲಕ ಸರಿಪಡಿಸಿದ್ದೇವೆ. ಆದರೆ ಇತ್ತೀಚಿನ ದಿನಗಳಲ್ಲಿ ಕರಿ ನೆರಳಲ್ಲಿ ಬದುಕುವ ದುಸ್ಥಿತಿ ಬಂದೊದಗಿದೆ. ಸರಕಾರ ದಲಿತರನ್ನು ಒಂದೇ ಸೂರಿನಡಿ ಸುಧಾರಣೆ ಮಾಡಬೇಕು ಎಂದು ದಲಿತರ ಕುಂದು-ಕೊರತೆ ಸಭೆಗಳನ್ನು ನಡೆಸುವಂತೆ ನಿರ್ದೇಶನ ನೀಡಿದ್ದು ಕೇವಲ ಒಂದೇ ಜಾತಿಗೆ ಸಿಮೀತಗೊಳಿಸದೇ ಎಲ್ಲ ದಲಿತ ಸಮುದಾಯಗಳಿಗೆ ಕರೆ ನೀಡಿ ಮಾಹಿತಿ ದಲಿತರಲ್ಲಿ ಸಾಮರಸ್ಯ ಮೂಡಿಸುವ ಕಾರ್ಯ ನಡೆಬೇಕು ಎಂದರು.

ಪಿಎಸ್‍ಐ ಸೋಮೇಶ ಗೆಜ್ಜೆ ಮಾತನಾಡಿ, ಸಾರ್ವಜನಿಕರ ಅಂಕು-ಡೊಂಕುಗಳನ್ನು ತಿದ್ದುವುದು ಪೊಲೀಸರಿಂದ ಮಾತ್ರ ಸಾಧ್ಯವಿಲ್ಲ ಸಾರ್ವಜನಿಕರ ಸಹಕಾರ ಬೇಕೆ ಬೇಕು ಕಾರಣ ಎಲ್ಲರು ಸಹಕಾರ ಕೊಡಿ ಕಾನೂನು ಪಾಲನೆ ಮಾಡಿ ಎಂದು ತಿಳಿಸಿದರು.

ಹಿರಿಯ ಮುಖಂಡ ಸಂಗಪ್ಪ ಕೂಚಬಾಳ, ಮಹಾವೀರ ಸುಲ್ಪಿ ಮಾತನಾಡಿದರು.

ಮಾಜಿ ಪುರಸಭೆ ಸದಸ್ಯ ಮಾನಿಂಗ ಪೂಜಾರಿ, ವಿಠ್ಠಲ ನಡುವಿನಮನಿ ವೇದಿಕೆ ಮೇಲಿದ್ದರು. ಶಿವು ಆಲಮೇಲ ನಿರೂಪಿಸಿ ಸ್ವಾಗತಿಸಿ ವಂದಿಸಿದರು.

ರಮೇಶ ನಡುವಿನಕೆರಿ, ಶರಣು ಚಲವಾದಿ, ಪರಶುರಾಮ ಕೂಚಬಾಳ, ಮಹೇಶ ಜಾಬನವರ ಸೇರಿದಂತೆ ನೂರಾರು ಜನರು ಪಾಲ್ಗೊಂಡಿದ್ದರು.

- Advertisement -
- Advertisement -

Latest News

ವಿರಾಟಪುರ ವಿರಾಗಿ ಚಿತ್ರದ ವಾಲ್ ಪೋಸ್ಟರ್ ಬಿಡುಗಡೆ

ಸಿಂದಗಿ: ಹಾನಗಲ್ಲ ಗುರುಕುಮಾರ ಮಹಾಸ್ವಾಮಿಗಳವರ ಉಸಿರೇ ಸಮಾಜವಾಗಿತ್ತು ತಮ್ಮ ಬಗ್ಗೆ ಕಿಂಚಿತ್ತೂ ವಿಚಾರ ಮಾಡಿದವರಲ್ಲ ಎಂದು ಡಾ. ಪ್ರಭುಸಾರಂಗದೇವ ಶಿವಾಚಾರ್ಯರು ಹೇಳಿದರು. ಪಟ್ಟಣದ ಸಾರಂಗಮಠದಲ್ಲಿ ಹಾನಗಲ್ಲ ಶ್ರೀ...
- Advertisement -

More Articles Like This

- Advertisement -
close
error: Content is protected !!