spot_img
spot_img

ಸಿಂದಗಿ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘದ ಪದಾದಿಕಾರಿಗಳ ಪದಗ್ರಹಣ

Must Read

ಸಿಂದಗಿ: ಪತ್ರಿಕಾ ರಂಗವನ್ನು ನಾಲ್ಕನೇ ರಂಗಕ್ಕೆ ಹೋಲಿಸುತ್ತೇವೆ, ಸ್ವಾತಂತ್ರ್ಯ ತಂದುಕೊಡುವಲ್ಲಿ, ಸಾಮಾಜಿಕ ಪಿಡುಗುಗಳನ್ನು ಹೊಡೆದೋಡಿಸಲು ಪತ್ರಿಕಾ ರಂಗ ಭಾರಿ ಕೆಲಸ ಮಾಡಿದೆ. ಪತ್ರಕರ್ತರ ಸಮಸ್ಯೆಗಳಿಗೆ, ಅನ್ಯಾಯ ಆದವರಿಗೆ ಧ್ವನಿಯಾಗಿ ಈ ಸಂಘಟನೆ ನಿಲ್ಲಲಿ ಎಂದು ಜಿಲ್ಲಾಧಿಕಾರಿ ವಿಜಯಮಹಾಂತೇಶ ದಾನಮ್ಮನವರ ಹಾರೈಸಿದರು.

ಪಟ್ಟಣದ ಹಳೇ ಪ್ರವಾಸಿ ಮಂದಿರ, ಬಸ್ ನಿಲ್ದಾಣ ಎದುರುಗಡೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ (ರಿ) ಬೆಂಗಳೂರು ತಾಲೂಕು ಶಾಖೆ ಪದಾಧಿಕಾರಿಗಳ ಪದಗ್ರಹಣ ಹಾಗೂ ಸನ್ಮಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿ, ಅಂದು ಪ್ರತಿನಿತ್ಯ ಪತ್ರಿಕೆಗಳನ್ನು ಕೈಯಲ್ಲಿ ಹಿಡಿದು ಚಹಾ ಕುಡಿಯುತ್ತಿದ್ದರೆ ಇಂದು ಮೋಬೈಲ್ ಕೈಯಲ್ಲಿ ಹಿಡಿದು ಚಹಾ ಸೇವಿಸುವ ಪರಿಸ್ಥಿತಿ ಬಂದೊದಗಿದೆ ಆದರಿಂದ ಪತ್ರಿಕೆ ಓದುಗರ ಸಂಖ್ಯೆ ಕಡಿಮೆಯಾಗುತ್ತಿದೆ. ಪತ್ರಿಕೆಗಳಲ್ಲಿ ಸಕ್ರಿಯವಾಗಿ ತೊಡಗಿದ ಪತ್ರಕರ್ತರು ಕೂಡ ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ .ಪತ್ರಕರ್ತರ ಧ್ವನಿಯಾಗಿ ಈ ಸಂಘಟನೆ ಕೆಲಸ ಮಾಡಲಿ ಎಂದು ಆಶಿಸಿದರು.

ಅಧ್ಯಕ್ಷತೆ ವಹಿಸಿದ್ದ ಶಾಸಕ ರಮೇಶ ಭೂಸನೂರ ಮಾತನಾಡಿ, ಪತ್ರಿಕಾ ರಂಗ ನಾಲ್ಕನೆ ಅಂಗವಲ್ಲ, ಅದುವೇ ಮೊದಲ ಅಂಗ ಅಂದ್ರೆ ತಪ್ಪಾಗಲಾರದು.ಸಮಾಜದ ಅಂಕುಡೊಂಕುಗಳನ್ನ ತಿದ್ದುವಲ್ಲಿ ಪತ್ರಕರ್ತರ ಪಾತ್ರ ಮಹತ್ವದ್ದಾಗಿದೆ. ಕಾರಣ ಅವರಿಗೊಂದು ಸೆಲ್ಯೂಟ್ ಈ ಕಾ.ನಿ.ಪ ಧ್ವನಿ ಪ್ರತಿಯೊಬ್ಬ ಪತ್ರಕರ್ತರ ಧ್ವನಿಯಾಗಲಿ, ಪತ್ರಕರ್ತರ ಸಮಸ್ಯೆಗಳಿಗೆ ಸ್ಪಂದಿಸಲು ಸಹಕಾರಿ ಆಗಲಿ ಎಂದು ಅಭಿಪ್ರಾಯಪಟ್ಟರು.

ಪತ್ರಿಕಾ ಭೀಷ್ಮ ರೇ.ಚ.ರೇವಡಿಗಾರ ಅವರ ಭಾವಚಿತ್ರಕ್ಕೆ ಕಾಂಗ್ರೆಸ್ ಮುಖಂಡ ಅಶೋಕ ಮನಗೂಳಿ ಅವರು ಪುಷ್ಪಾರ್ಚನೆ ಮಾಡಿದರು.

ದಿವ್ಯ ಸಾನ್ನಿಧ್ಯ ಸಾರಂಗಮಠ ಡಾ.ಪ್ರಭು ಸಾರಂಗದೇವ ಶಿವಾಚಾರ್ಯರು, ಯುವ ವಿಕಾಸ ಸಂಘದ ಅಧ್ಯಕ್ಷ ಶ್ರೀಧರ ಬಿಜ್ಜರಗಿ, ಜೆಡಿಎಸ್ ಮುಖಂಡ ಶಿವಾನಂದ ಪಾಟೀಲ ಸೋಮಜ್ಯಾಳ, ಮಾಜಿ ಶಾಸಕ ಶರಣಪ್ಪ ಸುಣಗಾರ, ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ವಿಠಲ ಕೊಳ್ಳೂರ, ದ.ಸಂ.ಸಮಿತಿ ಜಿಲ್ಲಾ ಸಂಚಾಲಕ ವೈ. ಸಿ. ಮಯೂರ ಮಾತನಾಡಿದರು.

ಸಂಗಮಸಂಸ್ಥೆಯ ನಿರ್ದೇಶಕ ಫಾದರ ಅಲ್ವಿನ್ ಡಿ ಸೋಜಾ, ವಿಜಯಪುರ ಪೀರಾಹುಸೇನಿ ಜಾನ್ಸಿನ್ ಎ. ಸಜ್ಜಾದೆ ಅರ್ಕಾಟ ದರ್ಗಾ ಡಾ. ಸೈಯದ್ ತಕ್ಕಿ ಉಪಸ್ಥಿತರಿದ್ದರು.   

ಈ ಸಂದರ್ಭದಲ್ಲಿ ಪತ್ರಿಕಾರಂಗದಲ್ಲಿ ಸಾಧನೆಗೈದ ಮಹನೀಯರಿಗೆ ಹಾಗೂ ಕರಾಟೆಯಲ್ಲಿ ಚಿನ್ನದ ಪದಕ ಪಡೆದ  ಸುಖಿಲ ಕಾಂಬ್ಳೆ ಅವರನ್ನು ವಿಶೇಷವಾಗಿ ಸನ್ಮಾನ ಮಾಡಲಾಯಿತು.

ರಾಜ್ಯಾಧ್ಯಕ್ಷ ಬಂಗ್ಲೆ ಮಲ್ಲಿಕಾರ್ಜುನ ಮಾತನಾಡಿ, ಸಂಘದ ಸ್ಥಾಪನೆ ಹಾಗೂ ಧೇಯೋದ್ಧೇಶಗಳ ಬಗ್ಗೆ ವಿವರಿಸಿ.ಸಂಘ ಹಾಗೂ ಪತ್ರಕರ್ತರ ಹಿತರಕ್ಷಣೆಗೆ ಎಲ್ಲರು ಸಹಕಿರಿಸಲು ಮನವಿ ಮಾಡಿದರು.

ನಂತರ ಸಿಂದಗಿ ತಾಲೂಕಿನ ಪದಾಧಿಕಾರಿಗಳಿಗೆ ರಾಜ್ಯಾದ್ಯಕ್ಷ ಬಂಗ್ಲೆ ಮಲ್ಲಿಕಾರ್ಜುನ ಅವರು ಪ್ರಜ್ಞಾವಿಧಿ ಬೋಧಿಸಿದರು. ಸಿಂದಗಿ ತಾಲೂಕಾ ಅಧ್ಯಕ್ಷ ಪಂಡಿತ ಯಂಪುರೆ, ಪ್ರ.ಕಾರ್ಯದರ್ಶಿ ಗಪೂರ ಮುಜಾವರ, ಉಪಾಧ್ಯಕ್ಷರಾಗಿ ಗುರು ಬಿದರಿ, ಕಾರ್ಯದರ್ಶಿಯಾಗಿ ಮೈಬೂಬ ಮುಲ್ಲಾ,ಖಜಾಂಚಿಯಾಗಿ ಸಾಯಬಣ್ಣ ದೇವರಮನಿ ಮತ್ತು ಸಹಕಾರ್ಯದರ್ಶಿಯಾಗಿ ಇಸ್ಮಾಯಿಲ್ ಶೇಖ ಪ್ರತಿಜ್ಞಾವಿಧಿ ಸ್ವೀಕರಿಸಿದರು.

ಗ್ರೇಡ್ ತಹಸಿಲ್ದಾರ ಪ್ರಕಾಶ ಸಿಂದಗಿ, ಕಸಾಪ ಅಧ್ಯಕ್ಷ ರಾಜಶೇಖರ ಕೂಚಬಾಳ, ಕೆ.ಪಿ.ಸಿ.ಸಿ. ವಕ್ತಾರ ಎಸ್. ಎಂ. ಪಾಟೀಲ ಗಣಿಹಾರ, ವಕೀಲರ ಸಂಘದ ಅಧ್ಯಕ್ಷ ಎಸ್.ಬಿ. ದೊಡ್ಡಮನಿ, ಪಂಚಮಸಾಲಿ ಸಮಾಜದ ಅಧ್ಯಕ್ಷ ಎಂ.ಎಂ. ಹಂಗರಗಿ, ರಣಧೀರ ಪಡೆ ಉತ್ತರ ವಲಯ ಸಂಚಾಲಕ ಸಂತೋಷ ಮಣಿಗಿರಿ,  ಪುರಸಭೆ ಉಪಾಧ್ಯಕ್ಷ ಹಾಸಿಂ ಆಳಂದ, ಸದಸ್ಯ ಬಾಷಾಸಾಬ ತಾಂಬೋಳಿ, ನೌಕರರ ಸಂಘದ ಅಶೋಕ ತೆಲ್ಲೂರ, ಡಾ. ದಸ್ತಗೀರ ಮುಲ್ಲಾ, ದ.ಸಂ. ಸಮಿತಿ ಜಿಲ್ಲಾ ಸಂಚಾಲಕ ಚಂದ್ರಕಾಂತ ಸಿಂಗೆ, ಸೈಫನ್ ನಾಟಿಕಾರ, ಕಾಂಗ್ರೆಸ್ ಮುಖಂಡರಾದ ಬಸೀರಸಾಬ ಮರ್ತೂರ, ವಿಜಯಪುರ ಮಾಹಿನ್ ಡೆವಲಪರ್ಸನ ಅಮೀನ ಬಾಗವಾನ, ರಾಜಕುಮಾರ ಭಾಸಗಿ, ಕಾನಿಪ ಧ್ವನಿಯ ಜಿಲ್ಲಾ ಕಾರ್ಯಾಧ್ಯಕ್ಷ ಅಶೋಕ ರಾಠೋಡ, ಉಪಾಧ್ಯಕ್ಷ ಮಹ್ಮದಅಸ್ಪಾಕ ಕರ್ಜಗಿ,  ಸಲೀಮ್ ಪಟೇಲ ಮರ್ತೂರ ವೇದಿಕೆ ಮೇಲಿದ್ದರು.

ನಂತರ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಒಟ್ಟಿನಲ್ಲಿ ಜಿಲ್ಲೆಯಲ್ಲಿ ಹಿಂದೆಂದು ನಡೆಯದ ರೀತಿಯಲ್ಲಿ ವಿಜೃಂಭಣೆಯಿಂದ ಕಾ.ನಿ.ಪ.ಧ್ವನಿಯ ಸಿಂದಗಿ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ಜರುಗಿತು.

ತಾಲೂಕು ಘಟಕದ ಅದ್ಯಕ್ಷ ಪಂಡಿತ ಯಂಪೂರೆ ಸ್ವಾಗತಿಸಿದರು. ಸುರೇಶ ಬಿಜಾಪುರ, ಅಶೋಕ ಬಿರಾದಾರ ನಿರೂಪಿಸಿದರು. ಜಿಲ್ಲಾಧ್ಯಕ್ಷ  ಮಹ್ಮದ್ ಯುಸುಫ್ ನೇವಾರ ವಂದಿಸಿದರು.

- Advertisement -
- Advertisement -

Latest News

ರಿಯಾಯಿತಿ ದರದಲ್ಲಿ ಸಂತಾನ ಪ್ರಾಪ್ತಿ ಚಿಕಿತ್ಸೆ

ಬೆಳಗಾವಿ: ಮಕ್ಕಳಿಲ್ಲದ ಬಡ ದಂಪತಿಗಳಿಗೆ ರಿಯಾಯಿತಿ ದರದಲ್ಲಿ ಸಂತಾನ ಪ್ರಾಪ್ತಿ ಚಿಕಿತ್ಸೆ ಕೊಡಿಸಲು ಕೊಲ್ಲಾಪುರದ ಸಿದ್ಧಗಿರಿ ಮಠದ ದತ್ತಿ ಆಸ್ಪತ್ರೆಯಲ್ಲಿ ಐವಿಎಫ್ ಕೇಂದ್ರ ಸ್ಥಾಪಿಸಲಾಗಿದೆ ಎಂದು ಮುಜರಾಯಿ,...
- Advertisement -

More Articles Like This

- Advertisement -
close
error: Content is protected !!