ಸಿಂದಗಿ – ತಹಶೀಲ್ದಾರ ಕಛೇರಿ ಆವರಣದಲ್ಲಿ ಮಹಿಳೆಯರಿಗೆ ಹಾಗೂ ಸಾರ್ವಜನಿಕರಿಗೆ ಶೌಚಾಲಯದ ಸಮಸ್ಯೆಯಿದೆ ಎನ್ನುವ ಪತ್ರಕರ್ತರ ಪ್ರಶ್ನೆಗೆ ಜಿಲ್ಲಾಧಿಕಾರಿ ಡಾ. ಮಹಾಂತೇಶ ದಾಮಣ್ಣವರ ಸೂಚಿಸಿದ್ದು ತಹಶೀಲ್ದಾರ ನಿಂಗಣ್ಣ ಬಿರಾದಾರ ಕೂಡಲೆ ಸ್ಪಂದಿಸಿ ಪುರಸಭೆ ಸಿಬ್ಬಂದಿಗೆ ಆದೇಶ ನೀಡಿ ಸ್ವಚ್ಚಗೊಳಿಸಿ ಸಾರ್ವಜನಿಕರಿಗೆ ಅನುಮಾಡಿಕೊಟ್ಟರು.
ಪಟ್ಟಣದ ತಹಶೀಲ್ದಾರ ಕಾರ್ಯಾಲಯದಲ್ಲಿ ಜಿಲ್ಲಾಧಿಕಾರಿಗಳ ನಡೆ ಪ್ರತಿ ಮಂಗಳವಾರ ಒಂದು ತಾಲೂಕಿನ ಕಡೆ ಕಾರ್ಯಕ್ರಮದಲ್ಲಿ ಸುದ್ದಿಗಾರರ ಪ್ರಶ್ನೆಗೆ ಸ್ಪಂದಿಸಿ ಕಾರ್ಯಪ್ರವೃತ್ತರಾಗಿದ್ದು ಶ್ಲಾಘನೀಯ.
ಕಳೆದ 4 ವರ್ಷಗಳ ಹಿಂದೆ ಪುರಸಭೆಯಿಂದ ನಿರ್ಮಿಸಲಾದ ಶೌಚಾಲಯ ತಹಶೀಲ್ದಾರ ಕಾರ್ಯಾಲಯದ ಹಿಂದೆ ಇದ್ದು ಅದು ಹೋಗಲು ದಾರಿಯ ಸಮಸ್ಯೆಯಿಂದ ಬಳಕೆಯಾಗಿಲ್ಲ ಪುರಸಭೆಯಿಂದ ಮತ್ತೊಂದು ತಹಶೀಲ್ದಾರ ಅವರಣದಲ್ಲಿಯೇ ನಿರ್ಮಿಸುವಂತೆ ಕೇಳಲಾಗಿದ್ದು ಅಧ್ಯಕ್ಷರು ಕೆಲ ದಿನಗಳಲ್ಲಿ ನಿರ್ಮಿಸುವ ಭರವಸೆ ನೀಡಿದ್ದಾರೆ ಈಗಿದ್ದ ಶೌಚಾಲಯವನ್ನು ಸ್ವಚ್ಚಗೊಳಿಸಲಾಗಿದ್ದು ಹೊಸ ಶೌಚಾಲಯ ಕೂಡಾ ನಿರ್ಮಿಸಲಾಗುವುದು
–ನಿಂಗಣ್ಣ ಬಿರಾದಾರ ತಹಶೀಲ್ದಾರರು ಸಿಂದಗಿ.
ತಾಲೂಕಿನಿಂದ ಯಾವುದೋ ಕಾರ್ಯನಿಮಿತ್ತ ಬರುವ ಮಹಿಳೆಯರಿಗೆ ಶೌಚಾಲಯದ ತೊಂದರೆ ಬಹಳಷ್ಟಿತ್ತು ಆ ಸಮಸ್ಯೆಯನ್ನು ಪತ್ರಕರ್ತರು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದಿದ್ದರಿಂದ ತಹಶೀಲ್ದಾರರು ಕೂಡಲೇ ಸ್ಪಂದಿಸಿ ಶೌಚಾಲಯ ಸ್ವಚ್ಚಗೊಳಿಸಿ ಮಹಿಳೆಯರಿಗೆ ಅನುವು ಮಾಡಿಕೊಟ್ಟಿದ್ದಾರೆ.
–ಪ್ರೇಮಾ ವಿಜಯಕುಮಾರ ಪತ್ತಾರ
ಸ್ಥಳಿಯ ನಿವಾಸಿ
ತಹಶೀಲ್ದಾರ ಕಾರ್ಯಾಲಯದ ಹಿಂದೆ ಇರುವ ಶೌಚಾಲಯವನ್ನು ಯಾರೂ ಬಳಕೆ ಮಾಡದ ಕಾರಣ ಸ್ವಚ್ಚಗೊಳಿಸಿಲ್ಲ ಈಗ ಅದನ್ನು ಶುಚಿಗೊಳಿಸಿ ಸಾರ್ವಜನಿಕರ ಬಳಕೆಗೆ ಅನುವು ಮಾಡಿಕೊಡಲಾಗಿದೆ
-ನಬಿರಸೂಲ ಉಸ್ತಾದ
ಸಿನೆಟರಿ ಅಧಿಕಾರಿ ಪುರಸಭೆ