spot_img
spot_img

ಸಿಂದಗಿ: ಜನ ಸಂಪರ್ಕ ಸಭೆ ಮತ್ತು ತಾಲೂಕು ಕಾರ್ಯ ನಿರ್ವಹಣಾಧಿಕಾರಿಯವರಿಗೆ ಸನ್ಮಾನ

Must Read

spot_img

ಸಿಂದಗಿ: ಕೂಲಿ ಕಾರ್ಮಿಕರಿಗೆ ಏನೇ ಸಮಸ್ಯೆಗಳು ಇದ್ದರೂ ಬರವಣಿಗೆ ಮೂಲಕ ನನ್ನ ಗಮನಕ್ಕೆ ತರಬೇಕು ಸಮಸ್ಯೆಗಳನ್ನು ಪಂಚಾಯತಿ ಅಧಿಕಾರಿಗಳ ಜೊತೆ ಚರ್ಚಿಸಿ ಬಗೆಹರಿಸುವುದಾಗಿ ತಾಲೂಕ ಕಾರ್ಯನಿರ್ವಹಣಾಧಿಕಾರಿಗಳಾದ ಬಾಬು ರಾಠೋಡ ಹೇಳಿದರು.

ಪಟ್ಟಣದ ತಾಲೂಕು ಪಂಚಾಯತಿ ಹಾಗೂ ಸಂಗಮ ಸಮಗ್ರ ಗ್ರಾಮೀಣ ಅಭಿವೃದ್ಧಿ ಕೇಂದ್ರ ಇವರ ಸಂಯುಕ್ತ ಆಶ್ರಯದಲ್ಲಿ ಜನ ಸಂಪರ್ಕ ಸಭೆ ಮತ್ತು ತಾಲೂಕು ಕಾರ್ಯ ನಿರ್ವಹಣಾಧಿಕಾರಿಯವರಿಗೆ ಸನ್ಮಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ರಾಷ್ಟ್ರೀಯ ಉದ್ಯೋಗ ಖಾತ್ರಿ ಅಡಿಯಲ್ಲಿ ಯಾವುದೇ ಸಮಸ್ಯೆ ಇದ್ದರೂ ನಮ್ಮ ಇಲಾಖೆಯಿಂದ ನಿಮಗೆ ಸದಾ ಸಹಕಾರ ಕೂಲಿ ಕಾರ್ಮಿಕರಿಗೆ ಮತ್ತು ಸಂಗಮ ಸಂಸ್ಥೆಗೆ ಇದೆ ಈ ಸಂಘಟನೆ ಇನ್ನು ಬಲವರ್ಧನೆ ಆಗಬೇಕು ಮತ್ತು ತಮ್ಮ ಊರಿನ ಇನ್ನುಳಿದ ಜನರು ಯೋಜನೆಯ ಪ್ರಯೋಜನ ಪಡೆಯುವಂತೆ ಅವರಿಗೆ ಪ್ರೋತ್ಸಾಹ ನೀಡಬೇಕು ಎಂದರು.

ಅಧ್ಯಕ್ಷತೆ ವಹಿಸಿದ ಸಂಗಮ ಸಂಸ್ಥೆಯ ಸಹ ನಿರ್ದೆಶಕಿ ಸಿ. ಸಿಂತಿಯಾ ಡಿಮೆಲ್ಲೊ ಮಾತನಾಡಿ, ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯು 2005 ರಲ್ಲಿ ಪ್ರಾರಂಭವಾಗಿದೆ. ಈ ಕಾರ್ಯಕ್ರಮದಿಂದ ಜನರು ವಲಸೆ ಹೋಗುವುದು ಕಡಿಮೆ ಆಗಿ ಮಕ್ಕಳ ವಿದ್ಯಾಭ್ಯಾಸಕ್ಕೆ ಸಹಾಯವಾಗಿದೆ. 18 ವರ್ಷ ಮೇಲ್ಪಟ್ಟ ಎಲ್ಲರು ಮಾನವ ಕೂಲಿ ಕೆಲಸ ಮಾಡಬಹುದು. ಬಡತನ ರೇಖೆಯ ಕೆಳಗಿರುವ ಕುಟುಂಬಗಳಿಗೆ ವರ್ಷಕ್ಕೆ 100 ದಿನ ಕೆಲಸ ಸಿಗುತ್ತದೆ. ಬೇರೆ ರಾಜ್ಯ ಹೋಲಿಸಿದರೆ ನಮ್ಮ ರಾಜ್ಯದಲ್ಲಿ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಮಾನವ ಕೂಲಿ ಹಣ ಜಾಸ್ತಿ ಇರುವುದು ಎಂದು ತಿಳಿಸಿದರು.

ತಾಲೂಕ ನೋಡಲ್ ಅಧಿಕಾರಿ ನಿತ್ಯಾನಂದ ಯಲಗೋಡ ಮಾತನಾಡಿ, ಸಂಗಮ ಸಂಸ್ಥೆಯು ಉದ್ಯೋಗ ಖಾತ್ರಿ ಯೋಜನೆಯ ಕುರಿತು ಹಳ್ಳಿಗಳಲ್ಲಿ ಮಾಹಿತಿ ನೀಡಿ ಜನರಿಗೆ ದಾರಿ ದೀಪವಾಗಿದೆ. ಉದ್ಯೋಗ ಖಾತ್ರಿಯಲ್ಲಿ ಕೆಲಸ ಮಾಡುವಾಗ ಕೂಲಿ ಕಾರ್ಮಿಕರು ಸರಿಯಾದ ಅಳತೆ ಪ್ರಕಾರ ಕೆಲಸ ಮಾಡಿ, ನಿಮಗೆ ಯಾವುದೇ ತೊಂದರೆ ಇಲ್ಲದೆ ಖಾತೆಗೆ ಹಣ ಜಮಾ ಆಗುವುದು ಎಂದರು.

ಈ ಸಂದರ್ಭದಲ್ಲಿ ಸಂಗಮ ಸಂಸ್ಥೆ ಹಾಗೂ ಕಿತ್ತೂರು ರಾಣಿ ಚೆನ್ನಮ್ಮ ಮನ್‍ರೇಗ ಅಭಿಯಾನ ಅನುಷ್ಠಾನ ಸಂಘಟನೆ ವತಿಯಿಂದ ತಾಲೂಕಾ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಸನ್ಮಾನ ಮಾಡಲಾಯಿತು.

ಮಲಕಪ್ಪ ಶಿ ಹಲಗಿ ನಿರೂಪಿಸಿದರು, ಶ್ರೀಮತಿ ತೇಜಸ್ವಿನಿ ರ ಹಳ್ಳದಕೇರಿ ಸ್ವಾಗತಿಸಿದರು, ಶ್ರಿಧರ ಕಡಕೊಳ ಇವರು ಭಾರತದ ಪ್ರಸ್ಥಾವನೆಯನ್ನು ವಾಚಿಸಿದರು. ಕುಮಾರಿ ಬಸಮ್ಮ ವಂದಿಸಿದರು.

- Advertisement -

LEAVE A REPLY

Please enter your comment!
Please enter your name here

- Advertisement -

Latest News

ಸಾಹಿತ್ಯ ಕ್ಷೇತ್ರದಲ್ಲಿ ರಶ್ಮಿಯಾಗಿ ಹೊಳೆದ ವಿ.ಕೃ.ಗೋಕಾಕ್!

ಬೇರೆಯವರ ಮೇಲೆ ಅವಲಂಬಿತವಾದ ಬದುಕು, ಸಾಧನೆ “ಮರವನ್ನು ಆಶ್ರಯಿಸಿ ಬೆಳೆದ ಬಳ್ಳಿಯಂತೆ” ಆಶ್ರಯ ತಪ್ಪಿದಾಗ ಅದು ನೆಲಕಚ್ಚುವುದು ಎಂದವರು ವಿನಾಯಕ ಕೃಷ್ಣ ಗೋಕಾಕ್ (ವಿ.ಕೃ.ಗೋಕಾಕ್). ಕನ್ನಡಕ್ಕೆ...
- Advertisement -

More Articles Like This

- Advertisement -
close
error: Content is protected !!