ಸಿಂದಗಿ: ಒಂದು ಮನೆ ನಿರ್ಮಾಣವಾಗಲು ಬೇಕಾಗಿರುವ ಕೂಲಿ ಕಾರ್ಮಿಕರನ್ನು ಕಟ್ಟಡ ಕಾರ್ಮಿಕರೆಂದು ಕರೆಯುವವರು. ಸರ್ಕಾರದಿಂದ ಕೊಡಲಾಗುವ ಎಲ್ಲ ಸೌಲಭ್ಯಗಳನ್ನು ನೀವು ಪಡೆದುಕೊಳ್ಳಬೇಕು ಎಂದು ನ್ಯಾಯವಾದಿ ಎಸ್.ಬಿ.ಪಾಟೀಲ್ ಹೇಳಿದರು.
ತಾಲೂಕಿನ ಹಂದಿಗನೂರ ಗ್ರಾಮದಲ್ಲಿ ಕಟ್ಟಡ ಕಾರ್ಮಿಕರಿಗೆ ಹಮ್ಮಿಕೊಳ್ಳಲಾದ ಕಾನೂನು ಅರಿವು ನೆರವು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಪೇಂಟ್ ಮಾಡುವವರು, ಗೌಂಡಿ, ಬಡಗಿ, ಎಲೆಕ್ಟ್ರೀಷಿಯನ್, ನೀರು ಹಾಕುವವರು, ಇಟ್ಟಂಗಿ ತಯಾರಿಸುವರು, ರೋಡ್ ಕೆಲಸ ಮಾಡುವವರು, ಸೇಂಟ್ರಿಂಗ್, ವೆಲ್ಡರ್, ಟೈಲ್ಸ್ ಹಾಕುವವರು ಹಾಗೂ ಇತರರು ಕಟ್ಟಡ ಕಾರ್ಮಿಕರು ಎಂದು ಕರೆಯುತ್ತೇವೆ. ಇವರೆಲ್ಲರಿಗೆ ಬರುವ ಸೌಲಭ್ಯಗಳು ಹೆರಿಗೆ ಭತ್ತೆ, ಆರೋಗ್ಯ ಸಹಾಯ ಧನ, ಮದುವೆ ಸಹಾಯ ಧನ, ವಿಧ್ಯಾರ್ಥಿಗಳ ಶಿಷ್ಯವೇತನ, ಈ ಸೌಲಭ್ಯಗಳನ್ನು ತಾವೆಲ್ಲರು ಪಡೆಯಬೇಕು ಎಂದು ಕರೆ ನೀಡಿದರು.
ಸಂಗಮ ಸಂಸ್ಥೆಯ ಸಹ ನಿರ್ದೇಶಕಿ ಸಿಸ್ಟರ್ ಸಿಂತಿಯಾ ಡಿಮೆಲ್ಲೊ ಮಾತನಾಡಿ, ಕಟ್ಟಡ ಕಾರ್ಮಿಕರು ಕಾರ್ಮಿಕರ ಇಲಾಖೆಯಿಂದ ಸಿಗುವ ಸೌಲಭ್ಯಗಳನ್ನು ಪಡೆಯಬೇಕು ಕಾರ್ಮಿಕರ ಕಾರ್ಡಗಳು ಚಾಲ್ತಿಯಲ್ಲಿ ಇರಬೇಕು. ಮೂರು ವರ್ಷಕ್ಕೊಮ್ಮೆ ಕಾರ್ಡನ್ನು ನವೀಕರಿಸಬೇಕು. ಕಾರ್ಡ್‍ಗಳು ಚಾಲ್ತಿಯಲ್ಲಿದ್ದರೆ ಮಾತ್ರ ಸೌಲಭ್ಯ ಪಡೆಯಲು ಅರ್ಹರಾಗಿರುತ್ತೀರಿ ಎಂದರು.
ಕಾರ್ಯಕ್ರಮದಲ್ಲಿ ಕಟ್ಟಡ ಕಾರ್ಮಿಕರು ಹಾಗೂ ಮಹಿಳಾ ಸಂಘದ ಸದಸ್ಯರು ಉಪಸ್ಥಿತರಿದ್ದರು. ವಿಜಯ ಬಂಟನೂರ ನಿರೂಪಿಸಿದರು, ಗುರು ಚೊರ್ಗಸ್ತಿ ಸ್ವಾಗತಿಸಿದರು ಹಾಗೂ ತೇಜಸ್ವೀನಿ ಹಳ್ಳದಕೇರಿ ವಂದಿಸಿದರು.