ಮುನವಳ್ಳಿ : ಪಟ್ಟಣದ ಸರಕಾರಿ ಮಾದರಿ ಕನ್ನಡ ಗಂಡು ಮಕ್ಕಳ ಶಾಲೆಯಲ್ಲಿ ಮಳೆಬಿಲ್ಲು ಕಾರ್ಯಕ್ರಮದಲ್ಲಿ ಸಿಂಗಾರ ಚಟುವಟಿಕೆಯನ್ನು ಅತಿ ಸಂಭ್ರಮದಿಂದ ಕೈಗೊಳ್ಳಲಾಯಿತು.
ಮಾವಿನ ತೋರಣ, ಹೂವುಗಳಿಂದ ಶಾಲೆಯ ಅಲಂಕಾರ. ತಮ್ಮ ತಮ್ಮ ವರ್ಗ ಕೋಣೆಗಳನ್ನು ವಿದ್ಯಾರ್ಥಿಗಳು ಸುಂದರವಾಗಿ ಅಲಂಕಾರ ಮಾಡಿದರು. ಈ ಸಂದರ್ಭದಲ್ಲಿ ಮಕ್ಕಳಿಗೆ ಸಿಹಿಯನ್ನು ಹಂಚಲಾಯಿತು. ವಿದ್ಯಾರ್ಥಿಗಳು ಹಾಡುಗಳನ್ನು ಹಾಡಿದರು. ನಂತರ ಮಳೆಬಿಲ್ಲು ಕಾರ್ಯಕ್ರಮದ ಸಮಾರೋಪ ಸಮಾರಂಭವನ್ನು ಹಮ್ಮಿಕೊಳಲಾಯಿತು.
ಈ ಸಂದರ್ಭದಲ್ಲಿ ಶಾಲೆಯ ಪ್ರಧಾನ ಗುರುಗಳಾದ ಪ್ರಕಾಶ ಶೀಲವಂತ, ಬಿ.ಎಚ್.ಖುಂದುನಾಯ್ಕ, ಶ್ರೀಮತಿ. ಪಿ.ಎಸ್.ಕಮತಗಿ, ಶ್ರೀಮತಿ.ಕೆ.ವ್ಹಿ.ತಟವಟಿ, ಶ್ರೀಮತಿ. ಎಸ್.ಸಿ.ಹೊನ್ನಳ್ಳಿ, ಶ್ರೀಮತಿ. ಯು.ಎಸ್.ಏಣಗಿಮಠ, ವಾಯ್.ಟಿ.ತಂಗೋಜಿ, ಶ್ರೀಮತಿ. ಬಿ.ಆರ್.ಹೋಟಿ, ಎನ್.ಆರ್.ಚಲವಾದಿ,ಕು.ಎನ್.ಎನ್.ಕುರಿ,ಶ್ರೀಮತಿ. ಎನ್.ಆರ್.ಕಕಮರಿ ಅತಿಥಿ ಶಿಕ್ಷಕಿಯರಾದ ಶ್ರೀಮತಿ. ಎಮ್.ಆರ್.ಗುಡೆಣ್ಣವರ, ಕು.ಎ.ಎ.ತೆಗ್ಗಿನಮನಿ ಉಪಸ್ಥಿತರಿದ್ದರು.