spot_img
spot_img

ಗುತ್ತಿಬಸವಣ್ಣ ಏತನೀರಾವರಿ ಜಾಕವೆಲ್‍ಗೆ ಶಿವಾನಂದ ಪಾಟೀಲ ಸೋಮಜ್ಯಾಳ ಭೇಟಿ

Must Read

ಸಿಂದಗಿ: ಗುತ್ತಿಬಸವಣ್ಣ ಏತ ನೀರಾವರಿ ಯೋಜನೆಯ ಮುಖ್ಯಕೆಂದ್ರದ ಜಾಕವೆಲ್‍ಗೆ ಜೆಡಿಎಸ್ ಮುಖಂಡ ಶಿವಾನಂದ ಪಾಟೀಲ ಸೋಮಜ್ಯಾಳ ರೈತರೊಂದಿಗೆ ಭೇಟಿ ನೀಡಿ ಸರಕಾರಕ್ಕೆ ಒತ್ತಾಯಿಸಿದ್ದಾರೆ.

ನಂತರ ಮಾತನಾಡಿ, ರೈತರಿಗೆ ಸಕಾಲಕ್ಕೆ ಮಳೆಯಾಗದೇ ವರುಣದೇವ ಶಾಪ ನೀಡಿದ್ದರಿಂದ ಕಂಗಾಲಾಗಿದ್ದಾರೆ. ಇತ್ತ ಗುತ್ತಿಬಸವಣ್ಣ ಏತನೀರಾವರಿಯಿಂದ ಫಸಲು ಪಡೆಯಬೇಕಾದರೆ ಸುಮಾರು ತಿಂಗಳಿಂದ 8 ಮೋಟಾರುಗಳು ಕೆಟ್ಟು ನಿಂತಿವೆ ಅದರೆ ಸರಕಾರ ಮಾತ್ರ ಕಳೆದ ಉಪಚುನಾವಣೆಯಲ್ಲಿ ಎಲ್ಲ ಭರವಸೆಗಳನ್ನಿಟ್ಟು ಆಯ್ಕೆಯಾಗಿ ರಾಜಧಾನಿ ಸೇರಿ ಇತ್ತ ಹೊರಳಿ ನೋಡುತ್ತಿಲ್ಲ ಈ ಭಾಗದ ಶಾಸಕರು ರೈತರ ಬಗ್ಗೆ ಕಿಂಚಿತ್ತೂ ಚಿಂತನೆ ನಡೆಸದಿರುವುದು ಖೇದಕರ ಸಂಗತಿ. ಕಳೆದ 2 ತಿಂಗಳ ಹಿಂದೆ 8 ಮೋಟಾರಗಳ ಖರೀದಿಗೆ ಟೆಂಡರ ಕರೆಯಲಾಗಿದೆ ಎಂದು ಸುಳ್ಳು ಹೇಳಿಕೆ ನೀಡಿ ರೈತರಿಗೆ ಮೋಸಮಾಡಿದ್ದಾರೆ. ಇದರಿಂದ ರೈತರು ರೋಷಿ ಹೋಗಿದ್ದಾರೆ ಕಾರಣ ಸಂಬಂದಪಟ್ಟ ಅಧಿಕಾರಿಗಳು ತಾಂತ್ರಿಕ ದೋಷವನ್ನು ಸರಿಪಡಿಸಬೇಕು ಅಲ್ಲದೆ ಸರಕಾರದಲ್ಲಿರುವ ಸಚಿವರು ಯಾವುದಾದರೊಂದು ಅನುದಾನವನ್ನು ಕ್ರೂಡಿಕರಿಸಿ ಈಗಾಗಲೇ ರೈತರು ಸಮಸ್ಯೆಯ ಸುಳಿಯಲ್ಲಿ ಸಿಕ್ಕು ಬೆಂದು ಹೋಗಿರುವ ಇಲ್ಲಿನ ಸಮಸ್ಯೆಗೆ ಸ್ಪಂದಿಸಬೇಕು ಎಂದು ಆಗ್ರಹಿಸಿದರು.

ತಾಲೂಕು ಘಟಕದ ಅಧ್ಯಕ್ಷ ಗೋಲ್ಲಾಳಪ್ಪಗೌಡ ಪಾಟೀಲ ಗೋಲಗೇರಿ ಮಾತನಾಡಿ, ಸಿಂದಗಿ ಮತಕ್ಷೇತ್ರ ಸತತವಾಗಿ ಬರಗಾಲಕ್ಕೆ ತುತ್ತಾಗಿ ರೈತರ ಗೋಳು ಹೇಳುವಂತಿಲ್ಲ ಈ ನಿಟ್ಟಿನಲ್ಲಿ ಹಲವಾರು ದಿನಗಳಿಂದ ತಾಂಬಾ ಗ್ರಾಮದಲ್ಲಿ ನೀರಿಗಾಗಿ ಹೋರಾಟ ನಡೆಸಿದ್ದಾರೆ ಈ ಸರಕಾರಕ್ಕೆ ಕಿವಿ ಕೇಳುತ್ತಿಲ್ಲ. ಕಣ್ಣು ಅಂತೂ ಮೊದಲೇ ಕಾಣುತ್ತಿಲ್ಲ. ಸ್ಥಳೀಯ ಶಾಸಕರಿಗೆ ಈ ಭಾಗದ ರೈತರ ಚಿಂತನೆಯಿಲ್ಲ ಈ ಕಿವಿ, ಕಣ್ಣು ಇಲ್ಲದ ಸರಕಾರಗಳು ಇಲ್ಲಿಯಿಂದ ದಿಲ್ಲಿಯವರೆಗೆ ರೈತರ ಮೇಲೆ ಗದಾಪ್ರಹಾರಗಳು ನಡೆಯುತ್ತಲೆ ಇವೆ ಹೀಗಿರುವಾಗ ಜನಸಾಮಾನ್ಯರ ಪಾಡಂತೂ ಹೇಳ ತೀರದ್ದಾಗಿದೆ ಕೂಡಲೇ ಇಲ್ಲಿನ ಜನಪ್ರತಿನಿಧಿಗಳು ರಾಜಕೀಯ ಬೆರೆಸದೆ ರೈತರ ಸಮಸ್ಯೆಗೆ ಸ್ಪಂದಿಸಬೇಕು ಇಲ್ಲದಿದ್ದರೆ ಮುಂಬರುವ ದಿನಗಳಲ್ಲಿ ಜೆಡಿಎಸ್ ಪಕ್ಷದವತಿಯಿಂದ ಹೋರಾಟ ನಡೆಸುವುದು ಅನಿವಾರ್ಯವಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಈ ಸಂದರ್ಭದಲ್ಲಿ ಸಿದ್ದನಗೌಡ ಪಾಟೀಲ, ಮಾಂತೇಶ ಪಾರಗೊಂಡ, ಪ್ರಶಾಂತ ಸಾಲೋಟಗಿ, ಮಲ್ಲು ಹಡಪದ, ಎ.ಡಿ.ಕೊರವಾರ, ರಾಜು ಹೊಳಕುಂದಿ, ಸಲೀಂ ಖಾನಾಪುರ, ರಪೀಕ ಆಲಮೇಲ, ನಾಗೇಶ ಸಾಸಾಬಾಳ ಸೇರಿದಂತೆ ಹಲವರು ಇದ್ದರು.

- Advertisement -

LEAVE A REPLY

Please enter your comment!
Please enter your name here

- Advertisement -

Latest News

ಶ್ರೀ ಕೃಷ್ಣ ಜನ್ಮಾಷ್ಟಮಿ

ಸರ್ವಾಸಾಂ ಜಯಂತೀನಾಂ ಶ್ರೇಷ್ಠಾ ಕೃಷ್ಣಾಷ್ಟಮೀ ಮತಾ ಯಸ್ಮಾತ್ ಸನ್ನಿಹಿತಾತ್ಯಂತಂ ತತ್ರೈವೋಪವಸೇನ್ನರಃ ಸರ್ವಾಸ್ವಪಿ ಜಯಂತೀಷು ಪೂಜಾ ಕಾರ್ಯಾ ವಿಸೇಷತಃ ಸಾನಿಧ್ಯ ಏವ ಕರ್ತವ್ಯ ಉಪವಾಸೋ ನ ದೂರಗಃ ಎಲ್ಲ ಜಯಂತಿಗಳಲ್ಲಿಯೂ ಶ್ರೀ ಕೃಷ್ಣ...
- Advertisement -

More Articles Like This

- Advertisement -
close
error: Content is protected !!