ಮೂಡಲಗಿ: -ಪಟ್ಟಣದ ಸಾಹಿತಿ ಶಶಿರೇಖಾ ಬೆಳ್ಳಕ್ಕಿಯವರಿಗೆ ಅಕ್ಷರನಾದ ದ್ವಿತೀಯ ಕವಿನುಡಿ ಸಂಭ್ರಮೋತ್ಸವ 2024ರ “ರಾಷ್ಟ್ರಕವಿ ಜಿ.ಎಸ್.ಶಿವರುದ್ರಪ್ಪ” ರಾಜ್ಯಮಟ್ಟದ ಪ್ರಶಸ್ತಿ ಒಲಿದು ಬಂದಿದೆ.
ಬೆಂಗಳೂರು ಅಕ್ಷರನಾದ ಕಲೆ, ಸಾಹಿತ್ಯ, ಸಾಂಸ್ಕೃತಿಕ ವೇದಿಕೆ ಹಾಗೂ ಅಕ್ಷರನಾದ ಪಬ್ಲಿಕೇಶನ್ ಎ.ಎಸ್.ಟಿ. ಆರ್ ವತಿಯಿಂದ ನೀಡಲಾಗುವ ರಾಜ್ಯಮಟ್ಟದ “ರಾಷ್ಟ್ರಕವಿ ಜಿ.ಎಸ್.ಶಿವರುದ್ರಪ್ಪ” ಪ್ರಶಸ್ತಿಗೆ ಮೂಡಲಗಿಯ ಕಾವ್ಯ ಕುಸುಮ ಎಂದೆ ಪ್ರಖ್ಯಾತಿ ಹೊಂದಿರುವ ಶ್ರೀಮತಿ ಶಶಿರೇಖಾ ಸು.ಬೆಳ್ಳಕ್ಕಿಯವರು ಭಾಜನರಾಗಿದ್ದಾರೆ.
ಸಕಲ ಕಲಾವಲ್ಲಭೆ,ಸಾಕ್ಷರ ಸರಸ್ವತಿ ಪುತ್ರಿ ,ಪ್ರತಿಭಾ ಕಾರಂಜಿ, ಕಾವ್ಯ ಸಖಿ,ಉದಯೋನ್ಮುಖ ಬರಹಗಾರ್ತಿ, ಕನ್ನಡ ಸಾಹಿತ್ಯ ಪರಿಷತ್ತು ಮೂಡಲಗಿ ಘಟಕ ಹಾಗೂ ಜ್ಞಾನ ದೀಪ್ತಿ ಪೌಂಡೇಶನ್ ,ಮೂಡಲಗಿ ಇದರ ಪದಾಧಿಕಾರಿಯಾಗಿ ಸಾಹಿತ್ಯದ ಸಾರಥಿಯಾಗಿ ಶ್ರೀಮತಿ ಬೆಳ್ಳಕ್ಕಿ ಕಾರ್ಯನಿರ್ವಹಿಸುತ್ತಿದ್ದಾರೆ..ಸಾಹಿ ತ್ಯ ಕ್ಷೇತ್ರದಲ್ಲಿನ ಕೃಷಿ ಹಾಗೂ ಇವರ ಸಾಮಾಜಿಕ ಕಾರ್ಯಗಳನ್ನು ಗುರ್ತಿಸಿ ಇವರಿಗೆ ಈ ಪ್ರಶಸ್ತಿಯನ್ನು ಇದೆ ಭಾನುವಾರದಂದು ಬೆಂಗಳೂರಿನ ಚಾಮರಾಜಪೇಟೆ ಕುವೆಂಪು ಸಭಾಂಗಣದಲ್ಲಿ ನಡೆದ ಕವಿ ನುಡಿ ಸಂಭ್ರಮೋತ್ಸವ 02 ಸಮಾರಂಭದಲ್ಲಿ ನೀಡಲಾಯಿತು. ಅಕ್ಷರನಾದ ಸಂಸ್ಥಾಪಕ,ಅಧ್ಯಕ್ಷರು ಡಾ. ಶೃತಿ ಮಧುಸೂದನ ರುದ್ರಾಗ್ನಿ, ಕಾರ್ಯದರ್ಶಿ, ಪದಾಧಿಕಾರಿಗಳು ಹಾಗೂ ಸಾಹಿತಿಗಳು ಉಪಸ್ಥಿತರಿದ್ದರು.