ಸಮಾಜ ಸೇವಕ, ಪತ್ರಕರ್ತ ಮುರಿಗೆಪ್ಪ ಮಾಲಗಾರ ಅವರಿಗೆ ಸುವರ್ಣ ಕರ್ನಾಟಕ ಸಾಧಕ ಮಾಧ್ಯಮ ರಾಷ್ಟ್ರ ಪ್ರಶಸ್ತಿ

0
164

ಬೆಂಗಳೂರು – ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲ್ಲೂಕಿನ ಹಳ್ಳೂರ ಗ್ರಾಮದ ಮುರಿಗೆಪ್ಪ ಮಾಲಗಾರ ಅವರು ಎಲ್ಲರ ಜೊತೆ ಒಳ್ಳೆಯ ಒಡನಾಟ ಹೊಂದಿ ಸಮೀರವಾಡಿ ಗೋದಾವರಿ ಬೈಯೋರಿಪೈನರಿಸ್ ಸಕ್ಕರೆ ಕಾರ್ಖಾನೆಯಲ್ಲಿ ಕಾರ್ಯ ನಿರ್ವಹಿಸುತ್ತಾ ನಿರಂತರ ಕಾಯಕದಲ್ಲಿ ತೊಡಗಿ ಸಮಾಜ ಸೇವೆಯ ಜೊತೆಗೆ ಪತ್ರಿಕಾ ರಂಗದಲ್ಲಿ ಬಹಳ ದಿನಗಳಿಂದ ಸೇವೆ ಸಲ್ಲಿಸುತ್ತಾ ಬಂದಿದ್ದನ್ನು ಪರಿಗಣಿಸಿ ಸಮಾಜ ಕಲ್ಯಾಣ ಸಂಸ್ಥೆ, ಬೆಂಗಳೂರು, ವಿಶ್ವ ಕನ್ನಡ ಜಾನಪದ ಪರಿಷತ್, ಆನಂದಿ ನೃತ್ಯ ಅಕಾಡೆಮಿ ಅವರು ಬೆಂಗಳೂರು ಅಕ್ಕಮಹಾದೇವಿ ಸಭಾ ಭವನದಲ್ಲಿ ರವಿವಾರದಂದು ನಡೆದ ವಿಶ್ವ ಮಹಿಳಾ ದಿನಾಚರಣೆ ಅಂಗವಾಗಿ ಹಮ್ಮಿಕೊಂಡ 2025 ನೇ ಸಾಲಿನಲ್ಲಿ ಕೊಡಮಾಡುವ ರಾಜ್ಯ ಮಟ್ಟದ ಸುವರ್ಣ ಕರ್ನಾಟಕ ಸಾಧಕ ಮಾಧ್ಯಮ ರತ್ನ ರಾಷ್ಟ್ರ ಪ್ರಶಸ್ತಿ ನೀಡಿ ಸನ್ಮಾನಿಸಿ ಗೌರವಿಸಿದರು.

ಈ ಸಮಯದಲ್ಲಿ ದಿವ್ಯ ಸಾನ್ನಿಧ್ಯ ಕಾಡಯ್ಯ ಹಿರೇಮಠ ವಹಿಸಿದ್ದರು. ಉದ್ಘಾಟನೆ ಮಂಜುಳಾ ನಾರಾಯಣ, ಸಸಿಗೆ ನಿರುಣಿಸಿದವರು ನಮ್ರತಾ ಎನ್, ಸಮಾಜ ಕಲ್ಯಾಣ ಸಂಸ್ಥೆಯ ಅಧ್ಯಕ್ಷರಾದ ವೀಣಾ ಕಿಡದಾಳ, ಆನಂದಿ ನೃತ್ಯ ಅಕಾಡೆಮಿ ಅಧ್ಯಕ್ಷರಾದ ಸ್ವೇತಾ ಬೀಳಗಿಕರ, ಮುಖ್ಯ ಅತಿಥಿ ಅಜಿತ್ ಬೆಳ್ಳಂಕ, ಹಾಲಪ್ಪ ಹುಕ್ಕೇರಿ, ಡಾ ಜಯಸಿಂಹ,  ಪೂರ್ವಿ ತಳವಾರ, ಕರ್ನಾಟಕ ರಾಜ್ಯ ಕಲಾವಿದರ ರಕ್ಷಣಾ ವೇದಿಕೆ ಅಧ್ಯಕ್ಷ ರಾದ ಸುರೇಶ ವಾಗಮೋಡೆ, ಕರ್ನಾಟಕ ರಕ್ಷಣಾ ವೇದಿಕೆ ಮಹಿಳಾ ಒಕ್ಕೂಟ ಅಧ್ಯಕ್ಷರಾದ ಕೀರ್ತಿ ಬಡಿಗೇರ, ಶೋಭಾ ಮಾಳಿ, ತೇಜಸ್ ಯಲ್ಲಟ್ಟಿ,  ಅಪ್ಪು ಪೂಜೇರಿ, ಸಾತಪ್ಪಾ ತೋಟಗಿ, ರಮೇಶ ಮಾಳಿ, ಭೈರಪ್ಪ ಬರಮಣ್ಣ ಸೇರಿದಂತೆ ಅನೇಕರಿದ್ದರು.

ಕಾರ್ಯಕ್ರಮದ ನಿರೂಪಣೆ ಮೇಘನಾ ಜಿ. ವಂದನಾರ್ಪಣೆ ಶೈಲಾ ವಾಗಮೋಡೆ ನೆರವೇರಿಸಿದರು.

LEAVE A REPLY

Please enter your comment!
Please enter your name here