spot_img
spot_img

ಸಮಾಜಸೇವೆ ಜನರಿಗೆ ಉಪಯುಕ್ತವಾಗಬೇಕು

Must Read

spot_img
- Advertisement -

ಲಯನ್ಸ್ ಕ್ಲಬ್ ಮೂಡಲಗಿ ಪರಿವಾರದ ಪದಗ್ರಹಣ

ಮೂಡಲಗಿ: ‘ನಿಸ್ವಾರ್ಥದಿಂದ ಮಾಡುವ ಸಮಾಜ ಸೇವೆಯು ನಿಜವಾದ ಸಮಾಜ ಸೇವೆಯಾಗಿರುತ್ತದೆ’ ಎಂದು ಯಲ್ಲಟ್ಟಿ ಕೊಣ್ಣೂರ ಸಮೂಹ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಪ್ರೊ. ಬಸವರಾಜ ಕೊಣ್ಣೂರ ಹೇಳಿದರು.

ಇಲ್ಲಿಯ ಮೂಡಲಗಿ ಶಿಕ್ಷಣ ಸಂಸ್ಥೆಯ ಕಲ್ಮೇಶ್ವರಬೋಧ ಸ್ವಾಮಿ ಸಭಾಭವನದಲ್ಲಿ ಏರ್ಪಡಿಸಿದ್ದ 2024-25ನೇ ಸಾಲಿನ ಲಯನ್ಸ್ ಕ್ಲಬ್ ಮೂಡಲಗಿ ಪರಿವಾರದ ಪದಾಧಿಕಾರಿಗಳ ಪದಗ್ರಹಣ ನೆರವೇರಿಸಿ ಮಾತನಾಡಿದ ಅವರು ನಾವು ಮಾಡುವ ಸಮಾಜ ಸೇವೆಯು ಜನರಿಗೆ ಅಗತ್ಯವಾಗಿರಬೇಕು ಮತ್ತು ಅವರ ಹೃದಯದಲ್ಲಿ ಉಳಿಯಬೇಕು ಎಂದರು.

- Advertisement -

ಲಯನ್ಸ್ ಕ್ಲಬ್‍ವು ನಿಸ್ವಾರ್ಥದಿಂದ ಸಮಾಜ ಸೇವೆ ಮಾಡುವ ಜಗತ್ತಿನ ಬಹುದೊಡ್ಡ ಸೇವಾ ಸಂಸ್ಥೆಯಾಗಿದೆ. ಮೂಡಲಗಿ ಲಯನ್ಸ್ ಪರಿವಾರದವರು ಕಳೆದ 10 ವರ್ಷಗಳಿಂದ ಉಚಿತ ಆರೋಗ್ಯ ತಪಾಸಣೆ, ಪರಿಸರ, ಅನ್ನದಾಸೋಹ, ಸ್ವಚ್ಛತಾ ಕಾರ್ಯ, ಪಶುಗಳ ಆರೋಗ್ಯ ತಪಾಸಣೆ ಸೇವೆ ಸೇರಿದಂತೆ ಅನೇಕ ಸಮಾಜಕ್ಕಾಗಿ ಮಾಡಿರುವ ಕಾರ್ಯಗಳು ಶ್ಲಾಘನೀಯವಾಗಿವೆ ಎಂದರು.

ಮುಖ್ಯ ಅತಿಥಿ ಪಶು ಸಂಗೋಪನಾ ಇಲಾಖೆಯ ಡಾ. ಎಂ.ಬಿ. ವಿಭೂತಿ ಅವರು ಮಾತನಾಡಿ ‘ಭಾರತೀಯ ಪುರಾಣಗಳಲ್ಲಿ ಪರೋಪಕಾರವು ಪುಣ್ಯವನ್ನು ಪ್ರಾಪ್ತಿಗೊಳಿಸುತ್ತದೆ.

ಜೀವನದಲ್ಲಿ ಕೇವಲ ಹಣ ಗಳಿಕೆ, ಅಧಿಕಾರ ಮುಖ್ಯವಲ್ಲ. ಸಮಾಜದಲ್ಲಿ ಕಷ್ಟದಲ್ಲಿರುವ ವ್ಯಕ್ತಿಗಳಿಗೆ ಸಹಾಯ ಮಾಡುವ ಮೂಲಕ ನಮ್ಮ ಬದುಕನ್ನು ಸಾರ್ಥಕ ಮಾಡಿಕೊಳ್ಳಬೇಕು. ಅಂಥ ಸಮಾಜ ಸೇವೆಯನ್ನು ಲಯನ್ಸ್ ಕ್ಲಬ್‍ವು ಮಾಡುತ್ತಲಿದೆ ಎಂದರು.

- Advertisement -

2024-25ನೇ ಸಾಲಿಗೆ ಲಯನ್ಸ್ ಪರಿವಾರದ ಅಧ್ಯಕ್ಷರಾಗಿರುವ ಸಂಜಯ ಮೋಕಾಶಿ, ಕಾರ್ಯದರ್ಶಿ ಸೋಮಶೇಖರ ಹಿರೆಮಠ ಹಾಗೂ ಖಜಾಂಚಿಯಾಗಿ ಕೃಷ್ಣಾ ಕೆಂಪಸತ್ತಿ ಹಾಗೂ ಉಳಿದ ಪದಾಧಿಕಾರಿಗಳಿಗೆ ಪ್ರೊ. ಕೊಣ್ಣೂರ ಪ್ರಮಾಣ ವಚನ ಬೋಧಿಸಿ ಪದಗ್ರಹಣವನ್ನು ನೆರವೇರಿಸಿದರು.

ನಿರ್ಗಮಿತ ಅಧ್ಯಕ್ಷ ಶ್ರೀಶೈಲ ಲೋಕನ್ನವರ, ಕಾರ್ಯದರ್ಶಿ ಸುಪ್ರೀತ ಸೋನವಾಲಕರ ವೇದಿಕೆಯಲ್ಲಿದ್ದರು.
ಕುಸ್ತಿಯಲ್ಲಿ ರಾಷ್ಟ್ರ ಮಟ್ಟದಲ್ಲಿ ಸಾಧನೆ ಮಾಡಿರುವ ಕಾಡೇಶ ಪಾಟೀಲ, ನೀಟ್‍ದಲ್ಲಿ ಸಾಧನೆ ಮಾಡಿರುವ ಸೃಷ್ಟಿ, ಲಕ್ಷ್ಮಣ ಹೆಳವರ ಹಾಗೂ ಅನ್ನದಾಸೋಹಿಗಳನ್ನು ಸನ್ಮಾನಿಸಿದರು.

ಸಮಾರಂಭದ ಪೂರ್ವದಲ್ಲಿ ಕಾಲೇಜು ಆವರಣದಲ್ಲಿ ಸಸಿಗಳನ್ನು ನೆಟ್ಟು ವನಮಹೋತ್ಸವಕ್ಕೆ ಚಾಲನೆ ನೀಡಿದರು.
ವೆಂಕಟೇಶ ಸೋನವಾಲಕರ, ಡಾ. ಪ್ರಕಾಶ ನಿಡಗುಂದಿ, ಎನ್.ಟಿ. ಪಿರೋಜಿ, ಪುಲಕೇಶ ಸೋನವಾಲಕರ, ಸುರೇಂದ್ರ ಆದಪ್ಪಗೋಳ, ಮಹಾಂತೇಶ ಹೊಸೂರ, ವಿಶಾಲ ಶೀಲವಂತ, ಪ್ರಮೋದ ಪಾಟೀಲ, ಅಪ್ಪಣ್ಣ ಬಡಿಗೇರ, ಲಕ್ಷ್ಮಣ ಕಂಕಣವಾಡಿ, ಶಿವಬಸು ಈಟಿ, ಡಾ. ಯಲ್ಲಾಲಿಂಗ ಮಳವಾಡ, ವೀರಭದ್ರ ಜಕಾತಿ, ಮಹಾಂತೇಶ ಹೊಸೂರ, ಶಿವಾನಂದ ಗಾಡವಿ, ಸಂದೀಪ ಸೋನವಾಲಕರ, ಗಿರೀಶ ಆಸಂಗಿ, ಸುರೇಶ ನಾವಿ, ವೆಂಕಟೇಶ ಪಾಟೀಲ, ಪ್ರಕಾಶ ನೇಸೂರ, ಸಂಗಮೇಶ ಪಾಟೀಲ, ಡಾ. ರವಿ ಕಂಕಣವಾಡಿ, ಮಲ್ಲಪ್ಪ ಖಾನಗೌಡರ, ಡಾ. ಪ್ರಶಾಂತ ಬಾಬನ್ನವರ, ಡಾ ರಾಜೇಂದ್ರ ಗಿರಡ್ಡಿ, ಪ್ರಮೋದ ಪಾಟೀಲ, ಅಪ್ಪಣ್ಣ ಬಡಿಗೇರ, ಶಿವಬಸು ಈಟಿ ಇದ್ದರು.

ಬಾಲಶೇಖರ ಬಂದಿ ಪ್ರಾಸ್ತಾವಿಕ ಮಾತನಾಡಿದರು, ಶ್ರೀಶೈಲ ಲೋಕನ್ನವರ ಸ್ವಾಗತಿಸಿದರು, ಡಾ. ಸಂಜಯ ಶಿಂಧಿಹಟ್ಟಿ ಪರಿಚಯಿಸಿದರು, ಮಹಾವೀರ ಸಲ್ಲಾಗೋಳ, ಶಿವಾನಂದ ಕಿತ್ತೂರ ನಿರೂಪಿಸಿದರು, ಸೋಮಶೇಖರ ಹಿರೇಮಠ ವಂದಿಸಿದರು.

- Advertisement -
- Advertisement -

Latest News

ಕಿಟದಾಳದಲ್ಲಿ ಜರುಗಿದ ಕಲಿಕಾ ಹಬ್ಬ

ಸೀರೆ ತೊಟ್ಟುಕೊಂಡು ಬಂದ ಬಾಲಕಿಯರು, ಮದುವಣಗಿತ್ತಿಯಂತೆ ಕಂಗೊಳಿಸಿದ ಶಾಲಾ ಆವರಣ. ಎಲ್ಲರ ತಲೆ ಮೇಲೊಂದು ಕಲರ್ ಕಲರ್ ಪೇಪರ್ ಟೋಪಿ. ಹೌದು, ಹೀಗೆ ಶಾಲೆಯಲ್ಲೊಂಥರಾ ಹಬ್ಬದ...
- Advertisement -

More Articles Like This

- Advertisement -
close
error: Content is protected !!
Join WhatsApp Group