Homeಸುದ್ದಿಗಳುತಳವಾರ ಸಮಾಜ ಒಕ್ಕಟ್ಟಿನಿಂದ ನಡೆಯಬೇಕು - ಶರಣಪ್ಪ ಸುಣಗಾರ

ತಳವಾರ ಸಮಾಜ ಒಕ್ಕಟ್ಟಿನಿಂದ ನಡೆಯಬೇಕು – ಶರಣಪ್ಪ ಸುಣಗಾರ

ಸಿಂದಗಿ: ಸಮಾಜದ ಹಾಗೂ ವೈಯಕ್ತಿಕ ರಾಜಕೀಯ ಭವಿಷ್ಯವನ್ನು ಮುಂದಿಟ್ಟುಕೊಂಡು ಈ ಉಪಚುನಾವಣೆಯಲ್ಲಿ ಒಕ್ಕಟ್ಟಿನ ತಿರ್ಮಾನ ಕೈಕೊಳ್ಳಲು ತಳವಾರ ಸಮಾಜದ ವತಿಯಿಂದ ದಿ. 24 ರಂದು ಬೆಳಿಗ್ಗೆ 11 ಗಂಟೆಗೆ ಮಾಂಗಲ್ಯ ಭವನದಲ್ಲಿ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಮಾಜಿ ಶಾಸಕ ಶರಣಪ್ಪ ಸುಣಗಾರ ಹೇಳಿದರು.

ಪಟ್ಟಣದ ಸ್ವಗೃಹದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಈ ಕ್ಷೇತ್ರದಲ್ಲಿ ಅನೇಕ ಸಮಾಜಗಳನ್ನು ಒಗ್ಗೂಡಿಸಿ ಚುನಾವಣೆ ಎದುರಿಸತಕ್ಕ ಸಂದರ್ಭ ಬಂದಿದ್ದು ನನ್ನ ಸಮಾಜದವರು ನನ್ನ ನಂಬಿಕೆ ಉಳಿಸುತ್ತದೆ ಅಲ್ಲದೆ ವಿಶ್ವಾಸ ದ್ರೋಹ ಮಾಡುವುದಿಲ್ಲ ಎನ್ನುವ ಆತ್ಮವಿಶ್ವಾಸ ನನಗಿದೆ. ನನ್ನ ಹೆಸರಿಗೆ ಧಕ್ಕೆ ತರುವ ನಿಟ್ಟಿನಲ್ಲಿ ಬಿಜೆಪಿ ಪಕ್ಷ ನಡೆದುಕೊಳ್ಳುವ ನಿಟ್ಟಿನಲ್ಲಿ ನನ್ನ ಸಮುದಾಯದ ಜನರನ್ನು ಪಕ್ಷಕ್ಕೆ ಸೇರಿಸಿಕೊಳ್ಳುತ್ತಿದೆ. ಆ ಕಾರಣಕ್ಕೆ ನನ್ನ ಸಮಾಜದ ತೀರ್ಮಾನ ಪಡೆದುಕೊಳ್ಳುವ ಸಲುವಾಗಿ ಎಸ್‍ಟಿ ಸರ್ಟೀಫಿಕೇಟ ಬೇಡಿಕೆಗಾಗಿ ಸುಮಾರು ವರ್ಷಗಳಿಂದ ಹೋರಾಟ ನಡೆಸುತ್ತ ಬರಲಾಗಿದೆ ಅದರ ಪ್ರತಿಫಲವಾಗಿ 2013ರಲ್ಲಿ ಸಿದ್ದರಾಮಯ್ಯ ಸರಕಾರದಲ್ಲಿ ತಳವಾರ ಸಮಾಜಕ್ಕೆ ಎಸ್‍ಟಿ ಮೀಸಲಾತಿ ನೀಡುವಂತೆ ಕೇಂದ್ರಕ್ಕೆ ಶಿಫಾರಸು ಮಾಡಿದೆ ಇಲ್ಲಿಯವರೆಗೆ ವಾಪಸ್ ಬಂದಿಲ್ಲ ಅದನ್ನು ಬಿಜೆಪಿಯವರು ಚುನಾವಣೆಗೂ ಮುನ್ನ ಪರಿಶೀಲನೆ ಮಾಡಬಹುದಿತ್ತು ಆದರೆ ಈ ಚುನಾವಣೆಯಲ್ಲಿ ಎಸ್ಟಿ ಸರ್ಟೀಫಿಕೇಟ ದೊರಕಿಸಿಕೊಡುತ್ತೇವೆ ಎಂದು ಸುಳ್ಳು ಭರವಸೆಯ ಮೇಲೆ ಸಮಾಜವನ್ನು ಒಡೆಯುವ ಕಾರ್ಯಕ್ಕೆ ಮುಂದಾಗಿದೆ ಅದನ್ನು ಮನವರಿಕೆ ಮಾಡಲಿಕ್ಕೆ ಸಮಾಜದ ಸಮಾವೇಶ ಹಮ್ಮಿಕೊಳ್ಳಲಾಗಿದೆ ಈ ಸಮಾವೇಶಕ್ಕೆ ಸುಮಾರು 10 ಸಾವಿರಗಿಂತಲೂ ಅಧಿಕ ಜನರ ಸೇರುವ ನಿರೀಕ್ಷೆಯಿದೆ ಎಂದರು.

ಈ ಜಿಲ್ಲೆಯಲ್ಲಿ ತಳವಾರ ಸಮಾಜ ಒಕ್ಕಟ್ಟಿನ ಸಮಾಜವಾಗಿದ್ದು ಸಮಾಜಕ್ಕೆ ತಪ್ಪು ಸಂದೇಶ ರವಾನಿಸಿದರೂ ಸಹ ನನ್ನ ಮೇಲಿನ ಗೌರವಕ್ಕೆ ಧಕ್ಕೆ ತರುವ ನಿಟ್ಟಿನಲ್ಲಿ ಸಮಾಜ ನಡೆದುಕೊಳ್ಳುವುದಿಲ್ಲ. ಕೆಲವರು ಮೀಸಲಾತಿಗಾಗಿ ನ್ಯಾಯಾಲಯಕ್ಕೆ ಹೋಗಿ ಸರ್ಟಿಫಿಕೆಟ್ ಪಡೆದುಕೊಳ್ಳುತ್ತಿದ್ದಾರೆ. ರಾಜ್ಯದಲ್ಲಿ ಹಿಂದೂ ಮುಸ್ಲೀಂ ಎಂದು ಮತಗಳನ್ನು ವಿಂಗಟನೆ ಮಾಡಿ ಮತ ಪಡೆಯುತ್ತಿರುವ ಬಿಜೆಪಿ ನೀತಿ ಸರಿಯಲ್ಲ. ಯಾವಾಗಲೂ ಈ ಕುತಂತ್ರ ರಾಜಕಾರಣದಲ್ಲಿ ಎತ್ತಿ ಕೈ ತೋರಿಸಿದೆ ಎನ್ನುವದಕ್ಕೆ ಅನೇಕ ಸಾಕ್ಷಿಗಳಿವೆ. ಎಲ್ಲರನ್ನು ಸಮಾನವಾಗಿ ನೋಡಿಕೊಳ್ಳುವುದು ಕಾಂಗ್ರೆಸ್ ಪಕ್ಷದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಅಶೋಕ ಮನಗೂಳಿ ಹಾಗೂ ನನ್ನ ಭವಿಷ್ಯದ ತಿರ್ಮಾನ ನನ್ನ ಸಮಾಜದ ಕೈಯಲ್ಲಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಕೆಪಿಸಿಸಿ ಚುನಾವಣಾ ವಕ್ತಾರ ಮಲ್ಲಿಕಾರ್ಜುನ ಸಾವಳಸಂಗ, ಚಂದ್ರಕಾಂತ ದೇವರಮನಿ ಇದ್ದರು.

RELATED ARTICLES

Most Popular

error: Content is protected !!
Join WhatsApp Group