ಮೂಡಲಗಿ – ನಗರದ ಗಾಂಧಿ ಚೌಕದಲ್ಲಿ ನಾಗರಿಕರಿಗೆ ಸಾರ್ವಜನಿಕ ಮೂತ್ರಿ ಕಟ್ಟಡ ಇಲ್ಲದ್ದರಿಂದ ತೊಂದರೆಯಾಗಿದೆ.
ಇಲ್ಲಿನ ನಿವಾಸಿಗಳು ತಮ್ಮ ಜಲಬಾಧೆ ತೀರಿಸಿಕೊಳ್ಳಲು ಬೆಣ್ಣೆ ಗುಂಡದ ಹಿಂದೆ ಇರುವ, ಗಬ್ಬು ನಾರುತ್ತಿರುವ ಮೂತ್ರಿಗಳ ಕಡೆಗೆ ಬರಬೇಕಾಗುತ್ತದೆ. ವಯಸ್ಸಾದವರಿಗೆ ಬಹಳ ತೊಂದರೆಯಾಗುತ್ತದೆ. ಕೂಡಲೇ ಪುರಸಭೆಯವರು ಗಾಂಧಿ ಚೌಕದಲ್ಲಿ ಮೂತ್ರಾಲಯ ನಿರ್ಮಾಣ ಮಾಡಲು ಕ್ರಮ ಕೈಗೊಳ್ಳಬೇಕು ಎಂದು ಶುಭೋದಯ ಸ್ವಾಭಿಮಾನಿ ಕರ್ನಾಟಕ ರಕ್ಷಣಾ ವೇದಿಕೆಯ ಅಧ್ಯಕ್ಷ ಸುಭಾಸ ಕಡಾಡಿ ಒತ್ತಾಯಿಸಿದ್ದಾರೆ.
ಇದಷ್ಟೇ ಅಲ್ಲದೆ ನಗರದಲ್ಲಿ ಇನ್ನೂ ಅನೇಕ ಕಡೆಗಳಲ್ಲಿ ಸಾರ್ವಜನಿಕ ಶೌಚಾಲಯ ಕಟ್ಟಡಗಳ ಅಗತ್ಯವಿದ್ದು ಪುರಸಭೆ ಕಣ್ಣು ತೆರೆದು ಸಾರ್ವಜನಿಕರ ತೊಂದರೆಯನ್ನು ಪರಿಹರಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.