ರೌಡಿ ಪೆರೇಡ್ ನಲ್ಲಿ ರೌಡಿ ಶೀಟರ್ ಗಳಿಗೆ ಬೆವರಿಳಿದ ಎಸ್ಪಿ

0
231

ಬೀದರ – ರೌಡಿ ಪರೇಡ್ ಗೆ ಬಂದ ರೌಡಿಗಳಿಗೆ ಅವರ ಹಿಸ್ಟರಿ ಕೇಳಿ ಮುಂದೆ ಬಾಲ ಬಿಚ್ಚಿದ್ದರೆ ಹುಷಾರು ಅಂತಾ ರೌಡಿಗಳಿಗೆ   ಬೀದರ್ ಎಸ್ಪಿ ಪ್ರದೀಪ್ ಗುಂಟಿ ಖಡಕ್ ಎಚ್ಚರಿಕೆ ನೀಡಿದರು

ನಗರದ ಪೊಲೀಸ್ ಗ್ರೌಂಡ್ ನಲ್ಲಿ ನಡೆದ ಜಿಲ್ಲೆಯ ರೌಡಿಗಳ ಪರೇಡ್ ನಡೆಸಿದರು.   ಜಿಲ್ಲೆಯ 966 ರೌಡಿ ಶೀಟರ್ ಗಳ ಪೈಕಿ ಶೇ.30ರಷ್ಟು ರೌಡಿಗಳು ಪರೇಡ್ ಗೆ ಹಾಜರಾಗಿದ್ದರು. ಜಿಲ್ಲೆಯ ಎಲ್ಲಾ ಠಾಣಾ ವ್ಯಾಪ್ತಿಗಳಿಂದ ರೌಡಿಗಳು ಪರೇಡ್ ಗೆ ಬಂದಿದ್ದರು

ಈ ಸಂದರ್ಭದಲ್ಲಿ ಮಾತನಾಡಿದ ಎಸ್ಪಿ ಪ್ರದೀಪ್ ಗುಂಟಿ ರೌಡಿಗಳಿಗೆ ಖಡಕ್ಕ ವಾರ್ನಿಂಗ್ ನೀಡುತ್ತ  ಜಿಲ್ಲೆಯಲ್ಲಿ ರೌಡಿಸಂ ಬಿಡಿ‌ ಇಲ್ಲ ಕ್ರಮಕ್ಕೆ ರಡಿಯಾಗಿ ಅಂತಾ ಸಂದೇಶ ರವಾನಿಸಿದರು.

ವರದಿ : ನಂದಕುಮಾರ ಕರಂಜೆ, ಬೀದರ