spot_img
spot_img

ವಿಶೇಷ ಲೇಖನ

Must Read

- Advertisement -

ಶ್ರೀ ಮೂಲ ರಾಮ ದೇವರಿಗೆ ಪೂಜೆ ಸಲ್ಲಿಸಿ ರುದ್ರಾಂಶ ಸಂಭೂತರಾದ ಶ್ರೀ ಶ್ರೀ ಸತ್ಯಧರ್ಮತೀರ್ಥರ 190 ನೇ ಆರಾಧನೆ ಸಂಪನ್ನ

ಶ್ರೀ 1008 ಶ್ರೀ ಸತ್ಯಾತ್ಮ ತೀರ್ಥರ ಅನುಗ್ರಹ ಹಾಗೂ ಆದೇಶದಂತೆ ” ಶ್ರೀ ಮೂಲ ರಾಮ ದೇವರಿಗೆ ಪೂಜೆ ಸಲ್ಲಿಸಿ ರುದ್ರಾಂಶ ಸಂಭೂತರಾದ ಶ್ರೀ ಶ್ರೀ ಸತ್ಯಧರ್ಮತೀರ್ಥರ 190 ನೇ ಆರಾಧನೆಗೆ ಕೂಡಲಿ ಕ್ಷೇತ್ರದ ಪೀಠಾಧಿಪತಿಗಳಾದ ಶ್ರೀ ಶ್ರೀ ಶ್ರೀ 1008 ಶ್ರೀ ರಘುವಿಜಯ ತೀರ್ಥ ಶ್ರೀಪಾದಂಗಳವರ ದಿವ್ಯ ಅಧ್ಯಕ್ಷತೆಯಲ್ಲಿ – ಶ್ರೀ ಸತ್ಯಧರ್ಮತೀರ್ಥರ 190 ನೇಯ ಆರಾಧನೆಯ ಸಮಯದಲ್ಲಿ ಸೆಪ್ಟೆಂಬರ್ ತಿ೦ಗಳ 5 ರಂದು ಮಧ್ಯಾರಾಧನೆ ಪ್ರಯುಕ್ತ ಶ್ರೀ ಮಠದಲ್ಲಿ ಶ್ರೀ ಮೂಲ ರಾಮ ದೇವರಿಗೆ ಪೂಜೆ ಸಲ್ಲಿಸಿ ರುದ್ರಾಂಶ ಸಂಭೂತರಾದ ಶ್ರೀ ಶ್ರೀ ಸತ್ಯಧರ್ಮತೀರ್ಥರ 190 ನೇ ಆರಾಧನೆ ಯನ್ನು ಸಂಪನ್ನಗೊಳಿಸಲಾಯಿತು

ಇಂತಹ ಮಹಿಮೋಪೇತರ 190 ನೇ ಆರಾಧನೆಯು 2021 ರ ಸೆಪ್ಟೆಂಬರ್ ತಿ೦ಗಳ 4,5,ಮತ್ತು 6 ( ಶನಿವಾರ , ಭಾನುವಾರ , ಸೋಮವಾರ ) ದಂದು ಹೊಳೆಹೊನ್ನೂರಿನಲ್ಲಿ ಶ್ರೀ ಶ್ರೀ ಸತ್ಯಧರ್ಮತೀರ್ಥರ ಮೂಲ ಬೃ೦ದಾವನ ಸನ್ನಿಧಿಯಲ್ಲಿ ನಡೆಯ ಬೇಕಿತ್ತು, ಆದರೆ ಕೋವಿಡ್ 19 ಕಾರಣ ಮಧ್ಯಾರಾಧನೆ ಮಾತ್ರ ಆಚರಿಸಿ ಗುರುಗಳ ಆರಾಧನೆಯನ್ನು ಸಂಪನ್ನಗೊಳಿಸಲಾಯಿತು.

- Advertisement -

ಶ್ರೀ ರಾಮ ದೇವರಿಗೆ ಪೂಜೆ ಸಲ್ಲಿಸಿ” ಅನುಗ್ರಹ ಸಂದೇಶ ”

ಕೂಡಲಿ ಕ್ಷೇತ್ರದ ಪೀಠಾಧಿಪತಿಗಳಾದ ಶ್ರೀ ಶ್ರೀ ಶ್ರೀ 1008 ಶ್ರೀ ರಘುವಿಜಯ ತೀರ್ಥರು – ರುದ್ರಾ೦ಶ ಸ೦ಭೂತರಾದ ಶ್ರೀ ಶ್ರೀ ಶ್ರೀ ಸತ್ಯಧರ್ಮತೀರ್ಥರ 190 ನೇ ಆರಾಧನೆ ಸಮಯದಲ್ಲಿ ನಾಡಿಗೆ ಸಂದೇಶ ನೀಡಿದ್ದು ಶ್ರೀ ರುದ್ರಾ೦ಶ ಸ೦ಭೂತರಾದ ಶ್ರೀ ಶ್ರೀ ಸತ್ಯಧರ್ಮತೀರ್ಥರು ಲೌಕಿಕ ವೈದಿಕ ಉಭಯ ವಿದ್ಯೆಗಳಲ್ಲೂ ಪರಿಣತರಾಗಿ ಆಚಾರ್ಯರ ಸಿದ್ದಾಂತಕ್ಕೂ , ಪರಂಪರೆಗೂ ಬಹಳ ವಿಶಿಷ್ಟವಾದ ಸೇವೆಯನ್ನು ಮಾಡಿದ್ದಾರೆ.ಇಂತಹ ಮಹಾನುಭಾವರ ಆರಾಧನೆಯ ಪರ್ವದಿನದಂದು ಭಕ್ತಿಯ ನಮನಗಳನ್ನು ಸಮರ್ಪಿಸಿ ಅವರ ಅನುಗ್ರಹ ಪಡೆಯೋಣ ಎಂದು ಅನುಗ್ರಹ ಸಂದೇಶ ನೀಡಿದ್ದಾರೆ.

- Advertisement -

ಕರ್ನಾಟಕ ರಾಜ್ಯ ಸರ್ಕಾರದ ಆದೇಶದಂತೆ ಕೋವಿಡ್ 19 ನಿಯಾಮಾನುಸಾರ ಆರಾಧನೆ ಆಚರಿಸಲಾಯಿತು. ಶಿವಮೊಗ್ಗ ಜಿಲ್ಲೆಯ ಭಕ್ತರಿಗೆ ಮಾತ್ರ ಆರಾಧನೆಯಲ್ಲಿ ಭಾಗವಹಿಸುವ ಅವಕಾಶ ನೀಡಲಾಗಿತ್ತು. ಭಕ್ತರು ಮಾಸ್ಕ್ ಧರಿಸಿ ,ಸಾಮಾಜಿಕ ಅಂತರ ಕಾಪಾಡಿಕೊಂಡು ಭಾಗವಹಿಸಿ ಗುರುಗಳ ಆರಾಧನೆ ಯಲ್ಲಿ ಭಾಗವಹಿಸಿದ್ದರು.

ರುದ್ರಾಂಶ ಸಂಭೂತರಾದ ಶ್ರೀ ಶ್ರೀ ಸತ್ಯಧರ್ಮತೀರ್ಥರ 190 ನೇ ಆರಾಧನೆ ಸಮಯದಲ್ಲಿ ಗುರುಗಳ ಬಗ್ಗೆ ಒಂದು ಸಣ್ಣ ಬರಹ

ಮಾಯಾನಗರಿ ಬೆಂಗಳೂರು ನಗರ ದಿಂದ ಶಿವಮೊಗ್ಗಕ್ಕೆ ಪ್ರಯಾಣಿಸಿದರೆ ಶಿವಮೊಗ್ಗದಿಂದ ( ಸಿಹಿಮೊಗ್ಗೆ) 19 ಕಿ.ಮಿ. ಪರಿಕ್ರಮಿಸಿದರೆ ತುಂಗಾ – ಭದ್ರಾ ನದಿಯ ಸಂಗಮ ಪುರಾಣೋಕ್ತ ಪ್ರಸಿದ್ದ ಶ್ರೀ ನರಸಿಂಹ ಕ್ಷೇತ್ರ ಕೂಡಲಿ.

ಅಲ್ಲಿಂದ ಕೇವಲ ಕಿ.ಮಿ. ಸಾಗಿದರೆ ರುದ್ರಾಂಶ ಸಂಭೂತರಾದ ಶ್ರೀ ಶ್ರೀ ಸತ್ಯಧರ್ಮತೀರ್ಥ ರ ಮೂಲ ಬೃಂದಾವನ ಕ್ಷೇತ್ರವೇ ಶ್ರೀಹೊಳೆಹೊನ್ನೂರು..ಶ್ರೀ ಮದಾಚಾರ್ಯರ ಮಹಾ ಸಂಸ್ಥಾನದ ಶ್ರೀ ಮದುತ್ತರಾದಿ ಮಠದ ಪರಂಪರೆಯಲ್ಲಿ ಶ್ರೀ ಮದಾಚಾರ್ಯರ ತರುವಾಯ ಇಪ್ಪತ್ತೆಂಟನೆಯ ಯತಿ ಶ್ರೇಷ್ಠರೂ, ರುದ್ರಾಂಶ ಸಂಭೂತರಾದವರೇ ಈ ಹೊಳೆಹೊನ್ನೂರು ಕ್ಷೇತ್ರದಲ್ಲಿ ವೃಂದಾವಸ್ಥರಾಗಿರುವ ಶ್ರೀ ಶ್ರೀ ಸತ್ಯಧರ್ಮತೀರ್ಥರು.

“33 ವರ್ಷಗಳು (1797-1830)ಸರ್ವಜ್ಞ ಪೀಠವನ್ನು ಅಲ೦ಕರಿಸಿದ ವೈಷ್ಣವ ವೇದಾಂತದ ರಸಋಷಿ”

33 ವರ್ಷಗಳು (1797-1830)ಸರ್ವಜ್ಞ ಪೀಠವನ್ನು ಅಲ೦ಕರಿಸಿದ ವೈಷ್ಣವ ವೇದಾಂತದ ರಸಋಷಿಗಳ ಸಮೂಹದಲ್ಲಿ ಇವರು ಪ್ರಾತಃ ಸ್ಮರಣೀಯರು.

ಇವರನ್ನು ಹತ್ತೊಂಬತ್ತನೆಯ (19 ) ಶತಮಾನದ ಅತ್ಯಂತ ಪ್ರಮುಖ ಗ್ರಂಥಕಾರರೆಂದೂ, ತಪಸ್ಸು, ಜ್ಞಾನ, ವೈರಾಗ್ಯಗಳ ತ್ರಿವೇಣಿ ಸಂಗಮವಾಗಿದರೆಂದು , ಶ್ರೀ ಪಾದಂಗಳವರು ಉತ್ತಮ ಚಿತ್ರಕಾರರೂ ಆಗಿದ್ದರೆಂದು ಹಲವು ವಿದ್ವಾಂಸರು ಹೇಳುತ್ತಾರೆ.

ಶ್ರೀ ಸತ್ಯಧರ್ಮತೀರ್ಥರ ಪೂರ್ವಾಶ್ರಮದ ಹೆಸರು ಶ್ರೀ ಪುರುಷೋತ್ತಮಾಚಾರ್ಯರು. ತಂದೆ ಶ್ರೀ ಮುದ್ಗಲಾಚಾರ್ಯ ಮತ್ತು ತಾಯಿ ವಿದುಷಿ ಜೀವೂಬಾಯಿಯವರಿಗೆ ಕ್ರಿ.ಶ. 1749 ರ ಶುಕ್ಲ ಸಂವತ್ಸರದ ಪುಷ್ಯಮಾಸ ಕೃಷ್ಣ ಪಕ್ಷ ಷಷ್ಠಿ ತಿಥಿಯಲ್ಲಿ , ಉತ್ತರಾ ನಕ್ಷತ್ರ ಪ್ರಥಮ ಪಾದದಲ್ಲಿ ಚಂದ್ರನು ಸಿಂಹರಾಶಿಯಲ್ಲಿರುವಾಗ ಜ್ಞಾನಿ ಶ್ರೇಷ್ಠರಾದ ಶ್ರೀ ಪುರುಷೋತ್ತಮಾಚಾರ್ಯರು ಅವತರಿಸಿದರು.

ಇವರು ಜನಿಸಿದ ಮನೆತನ ನವರತ್ನ. ಈ ಮನೆತನದಲ್ಲಿ ಜನಿಸಿದ ಪೂರ್ವಿಕರೆಲ್ಲರೂ ಬಾಲ್ಯದಿಂದಲೇ ಸಕಲ ವೇದಾಂತ ಶಾಸ್ತ್ರಗಳ ಪಾರಂಗತರಾಗಿದ್ದು ಘನವಿದ್ವಾಂಸರಾಗಿದ್ದರೆಂದು, ವಾದಮಲ್ಲರಾಗಿದ್ದರೆಂದು ಎಲ್ಲಾ ಕಡೆಗಳಲ್ಲೂ ದಿಗ್ವಿಜಯವನ್ನು ಸಾಧಿಸುತ್ತಿದ್ದರೆಂದು ಶ್ರೀ ಪಾದಂಗಳವರ ಪೂರ್ವಾಶ್ರಮದ ಅಳಿಯಂದಿರಾದ ಕಲ್ಲಾಪುರ ಶೀ ರಾಮಚಂದ್ರಾಚಾರ್ಯರ ” ಶ್ರೀ ಸತ್ಯಧರ್ಮ ಗುರು ಚಂದ್ರ ಕಲೋದಯ ಮಹಾಕಾವ್ಯಮ್ ” ಎಂಬ ಮಹಕಾವ್ಯದಲ್ಲಿ ಈ ರೀತಿ ಉಲ್ಲೇಖವಿದೆ.

ವಿವಾಹ: ಶ್ರೀ ಪುರುಷೋತ್ತಮಾಚಾರ್ಯರಿಗೆ ಸತ್ಕುಲ ಪ್ರಸೂತೆಯಾದ ವಿದೂಷಿ ನರಸೂಬಾಯಿ ಎಂಬ ಕನ್ಯಾಮಣಿಯೊ೦ದಿಗೆ ವಿವಾಹವಾಯಿತು , ಇವರ ಸಂಸಾರಿಕ ಜೀವನವು ಮಧುರವಾಗಿತ್ತು. ಪಾಠ ಪ್ರವಚನ ಮಾಡಿಕೊಂಡು ಸವಣೂರಿನಲ್ಲಿ ನೆಲೆಸಿದ್ದರು.

ಅವರ ಉನ್ನತ ಅಧ್ಯಯನವು ಶ್ರೀ ಸತ್ಯಬೋಧತೀರ್ಥರಲ್ಲಿಯೆ ನಡೆಯಿತು.

ಶ್ರೀ ಶ್ರೀ ಸತ್ಯಬೋಧರ ಅನುಗ್ರಹದಿಂದ ಸುಪುತ್ರನು ಜನಿಸಿದನು. ಅಪರೂಪದ ಮಗನಿಗೆ ಶ್ರೀ ಸತ್ಯಬೋಧಾಚಾರ್ಯನೆಂದು ಶ್ರೀ ಪಾದಂಗಳವರ ಹೆಸರನ್ನೆ ಇಟ್ಟು ನಾಮಕರಣವನ್ನು ಮಾಡಿದರು. ಹಲವು ವರ್ಷಗಳ ನಂತರ ಇವರಿಗೆ ಗಂಗಾಬಾಯಿ ಎಂಬ ಸುಪುತ್ರಿಯು ಜನಿಸಿದಳು. ಇವರು ಎಷ್ಟೇ ವಿದ್ಯಾವಂತರೂ, ಬುದ್ದಿವಂತರಾಗಿದ್ದರೂ, ಇವರ ಆರ್ಥಿಕ ಸ್ಥಿತಿಯು ಅಷ್ಟು ಉತ್ತಮವಾಗಿರಲ್ಲಿಲ್ಲ.

ಅದಕ್ಕೆ ಅವರ ಪ್ರಾರಬ್ದ ಕರ್ಮವೇ ಕಾರಣವೆನ್ನಬಹುದು. ಜೀವನ ನಿರ್ವಹಣೆಯೂ ದುಸ್ತರವಾಗತೊಡಗಿತು.ಹಿರಿಯ ವಿದ್ವಾಂಸರ ಒಬ್ಬರ ಸಲಹೆಯ೦ತೆ ಮಂತ್ರಾಲಯ ಕ್ಷೇತ್ರಕ್ಕೆ ತೆರಳಿ ಶ್ರೀ ರಾಘವೇಂದ್ರ ಸ್ವಾಮಿಗಳ ಸೇವೆಯನ್ನು ವಿಶೇಷ ರೀತಿಯಲ್ಲಿ ಮಾಡಿ ಅವರ ಅನುಗ್ರಹವನ್ನು ಸಂಪಾದಿಸಿದರು.

ಅವರಿಗೆ ಮುಂದೆ ಸಕಲ ಕಲ್ಯಾಣ ಪ್ರಾಪ್ತವಾಗುವುದೆಂದು ಸ್ವಪ್ನ ಸೂಚನೆಯಾಯಿತು.ಅಲ್ಲಿಂದ ಮುಂದೆ ಅವರು ಸೋಂದ ಕ್ಷೇತ್ರಕ್ಕೆ ಹೋಗಿ ಶ್ರೀ ವಾದಿರಾಜಸ್ವಾಮಿಗಳ ಸೇವೆಯನ್ನು ಮಾಡಿ ಅವರ ಅನುಗ್ರಹವನ್ನು ಸಹ ಸಂಪಾದಿಸಿಕೊಂಡರು.

ಸಶರೀರ ಬೃಂದಾವನ ಪ್ರವೇಶ ಮಾಡಿದ ವಿಶೇಷ ಹಿರಿಮೆಯನ್ನು ಹೊಂದಿದ ಈ ಇಬ್ಬರು ಮಹನೀಯರ ಅನುಗ್ರಹಕ್ಕೆ ಪಾತ್ರರಾದದ್ದು ಇವರ ಹಿರಿಮೆ.

ಅಪರೋಕ್ಷ ಜ್ಞಾನಿಗಳಾದ ಶ್ರೀ ಶ್ರೀ ಸತ್ಯವರ ತೀರ್ಥರು ಶ್ರೀ ಪುರುಷೋತ್ತಮಚಾರ್ಯರಿಗೆ ಕ್ರಿ.ಶ. 1797 ರ ಪಿಂಗಳನಾಮ ಸಂವತ್ಸರದ ಶ್ರಾವಣ ಶುದ್ದ ಸಪ್ತಮಿಯ ದಿನ ಶುಭ ಮುಹೂರ್ತದಲ್ಲಿ ವಿಧಿಪೂರ್ವಕವಾಗಿ ಮಂತ್ರೋಪದೇಷವನ್ನು ಮಾಡಿ ಸರ್ವಜ್ಞ ಪೀಠದಲ್ಲಿ ಕುಳ್ಳರಿಸಿ ಪಟ್ಟಾಭಿಷೇಕವನ್ನು ಮಾಡಿದರು.

ನೂತನ ಶ್ರೀ ಪಾದಂಗಳವರನ್ನು ಶ್ರೀ ಸತ್ಯಧರ್ಮತೀರ್ಥರೆಂದು ನಾಮಕರಣ ಮಾಡಿದರು.

(ಆಗ ಶ್ರೀ ಪುರುಷೋತ್ತಮಾಚಾರ್ಯರಿಗೆ 47ನೇ ವಯಸ್ಸು) ಇದರಿಂದ ಶ್ರೀ ಸತ್ಯನಿಧಿತೀರ್ಥರ ಭವಿಷ್ಯದ ನುಡಿಯೂ ಶ್ರೀ ಮಂತ್ರಾಲಯ ರಾಯರು ಆಚಾರ್ಯರಿಗೆ ಕನಸಿನಲ್ಲಿ ಕೊಟ್ಟ ಸೂಚನೆಯೂ ಫಲಪ್ರದವಾಯಿತು.

“ಶ್ರೀ ಗುರುಭಕ್ತ ವಿಠಲ”ಎಂಬ ಭಕ್ತನೊಬ್ಬ ಸಮರ್ಪಿಸಿದ ಪ್ರಾಣದೇವರನ್ನು ಇವರು ಪೂಜಿಸಿದರು.

ಶ್ರೀ ಶ್ರೀ ಸತ್ಯಧರ್ಮತೀರ್ಥರು ನೂರಾರು ಶಿಷ್ಯರಿಗೆ ಪಾಠ ಪ್ರವಚನವನ್ನು ಮಾಡುತ್ತಾ ದಕ್ಷಿಣ ಭಾರತದ ಅನೇಕ ಮುಖ್ಯಸ್ಥಳಗಳನ್ನು ಸಂದರ್ಶಿಸಿದರು. ಹೊಳೆನರಸೀಪುರ ಇವರ ಮುಖ್ಯಕಾರ್ಯ ಕ್ಷೇತ್ರವಾಗಿತ್ತು.

ಶ್ರೀ ಶ್ರೀ ಸತ್ಯಧರ್ಮತೀರ್ಥರು ಕ್ರಿ.ಶಿ. 1830 ರಲ್ಲಿ ಶ್ರಾವಣ ಬಹುಳ ತ್ರಯೋದಶಿ ಅಂದು ಹೊಳೆಹೊನ್ನೂರಿನಲ್ಲಿ ವೃಂದಾವನಸ್ಥರಾಗುತ್ತಾರೆ.

ಶ್ರೀ ವೃಂದಾವನ ಸನ್ನಿಧಿಯಲ್ಲಿ ವಿಶೇಷ ಸನ್ನಿಧಾನವಿದ್ದು ಗಂಗಾ ಪ್ರತ್ಯಕ್ಷ ಎಂಬ ಪ್ರತೀತಿ ಇದೆ. ಶ್ರೀ ಪಾದಂಗಳವರ ವೃಂದಾವನದ ಕೂರ್ಮಪೀಠದ ಮುಂದೆ ಸ್ವಯಂವ್ಯಕ್ತವಾದ ಎರಡು ಉದ್ಭವ ಶಿವಲಿಂಗಗಳಿವೆ.

ಶ್ರೀ ಮಠದ ಹೊರಗಡೆ ಶ್ರೀ ಪಾದಂಗಳವರ ಸಾಕ್ಷಾಚ್ಚಿಷ್ಯರಾದ ಶ್ರೀ ನರಸಿಂಹ ಒಡೆಯರ್ ರವರ ಮೂಲ ಬೃಂದಾವನವಿದೆ.

ವೃಂದಾವನ ಮಹಿಮೆ:

ಶ್ರೀ ಶ್ರೀ ಸತ್ಯಧರ್ಮತೀರ್ಥರ ವೃಂದಾವನದ ಸೇವೆಯನ್ನು ಶ್ರದ್ದಾ ಭಕ್ತಿಯಿ೦ದ ಮಾಡುವವರಿಗೆ ಉತ್ಕೃಷ್ಟವಾದ ಫಲ ದೊರೆಯುವುದು ಹಾಗೂ ಸಕಲಾಭೀಷ್ಠಗಳೂ ಪ್ರಾಪ್ತವಾಗಿರುತ್ತದೆ.

ಶ್ರೀ ಶ್ರೀ ಸತ್ಯಧರ್ಮತೀರ್ಥರ ವೃಂದಾವನದಲ್ಲಿ ಅನೇಕ ಮಹಿಮೆಗಳೂ ನಡೆದದ್ದು ಇವರ ದರ್ಶನಗೊಸ್ಕರ ಬರುತ್ತಿದ್ದ ಯಾತ್ರಿಕರ ಗುಂಪನ್ನು ದರೋಡೆಕೋರರಿ೦ದ ರಕ್ಷಿಸಿದ ಮಹಿಮೆ ತುಂಬಾ ಪ್ರಸಿದ್ದ.

ಒಮ್ಮೆ ಹೊಳೆಹೊನ್ನೂರು ಗ್ರಾಮವನ್ನು ದೋಚುವ ಉದ್ದೇಶದಿ೦ದ ದರೋಡೆಕೋರರ ಗು೦ಪು ಧಾವಿಸಿ ಬ೦ದಾಗ ಅವರ ಕಣ್ಣಿಗೆ ಆಯುಧ ಪಾಣಿಗಳಾದ ವಿಪ್ರರ ಗು೦ಪು ಎಲ್ಲಾ ಕಡೆ ಕ೦ಡು, ಭಯಭೀತರಾದ ದರೋಡೆಕೋರರು ಅವರ ಹೊಡೆತವನ್ನು ತಾಳಲಾರದೆ ಆ ಗ್ರಾಮದಿ೦ದ ಪಲಾಯನಗೊ೦ಡ ವಿಚಾರವನ್ನು ಕಲ್ಲಾಪುರದ ಶ್ರೀ ರಾಮಚಂದ್ರಾಚಾರ್ಯರು ತಮ್ಮ ಮಹಾಕಾವ್ಯದಲ್ಲಿ ಬಣ್ಣಿಸಿದ್ದಾರೆ.

ಶ್ರೀ ಶ್ರೀ ಸತ್ಯಧರ್ಮತೀರ್ಥರಿಂದ 22 ಕೃತಿಗಳು ರಚಿತವಾಗಿದೆ ಹಾಗೂ 13 ವ್ಯಾಖ್ಯಾನ ಗ್ರಂಥಗಳು:

  1. ಗಂಗಾಲಹರೀ
  2. ಕವಿಕಂಠಮಣೀ
  3. ಯದುವರ ಚರಿತಾಮೃತ ಲಹರೀ
  4. ಬಾಗವದ್ಭಜನಮ್ವಿ
  5. ರಹಿಮೋದಸುಧಾ
  6. ಹಿತೋಪದೇಶ
  7. ಶ್ರೀ ರಂಗೇಶ್ವರ ಶೃಂಗಾರ ಲಹರೀ
  8. ಶ್ರೀ ಲಕ್ಷೀನೃಸಿಂಹಸ್ತೋತ್ರಮ್
  9. ಗೀತಾ ಮಹತ್ಮಸಾರ ಸಂಗ್ರಹ
  10. ನಿತ್ಯ ಸಂಸಾರಿ ಲಿಂಗಭಂಗವಿಚಾರ
  11. ನವಗ್ರಹಸ್ತೋತ್ರಮ್
  12. ಶ್ರೀ ವಾದಿರಾಜ ಸ್ತೋತ್ರಮ್
  13. ಶ್ರೀ ಸತ್ಯವರ
  14. ಶ್ರೀ ಪಾದವಾದುಕ ಸ್ತೋತ್ರಮ್
  15. ಅಂತರ್ಲಾಪಿಕಾ
  16. ಭವಾನೀ (ನದಿ) ಸ್ತೋತ್ರಮ್
  17. ಹೇಮಾವತಿನದಿಸ್ತೋತ್ರಮ್
  18. ಆಶ್ರೀವಚನಮ್
  19. ಕೆಲವು ಶುಭಾಷಿತಗಳು
  20. ಕೆಲವು ಪ್ರಾಕೃತ ಕೃತಿಗಳು
  21. ಶ್ರೀ ಸತ್ಯವರ ಶ್ರೀವಾದಪಾದುಕಾ ಸ್ತೋತ್ರ (ಲಘು)
  22. ಗುರ್ವಷ್ಟಕಮ್.

ವ್ಯಾಖ್ಯಾನ ಗ್ರಂಥಗಳು:

  1. ತತ್ವ ಸಂಖ್ಯಾ ವ ಟಿಪ್ಪಣಮ್
  2. ಲಲಿತ ಪದ ಮ೦ಜರೀ (ನಮಕ ಚಮಕ ವ್ಯಾಖ್ಯಾ)
  3. ಶ್ರೀಮದ್ಭಾಗವತ ಟಿಪ್ಪಣೀ
  4. ವಿರಾಟ ಪರ್ವ ಟಿಪ್ಪಣೀ
  5. ಉದ್ಯೋಗ ಪರ್ವ ಟಿಪ್ಪಣೀ
  6. ರಾಮಾಯಣ ಟಿಪ್ಪಣೀ
  7. ವಿರಹಿಮೋದ ಸುಧಾ ವ್ಯಾಖ್ಯಾ
  8. (ಶ್ರೀ ಸತ್ಯವರ) ಶ್ರೀಪಾದ ಪಾದುಕಾ ಸ್ತೋತ್ರ ವ್ಯಾಖ್ಯಾನಮ್
  9. ತರ೦ಗಿಣೀ ಶ್ಲೋಕ ವಾಖ್ಯಾ
  10. ವಿಷ್ಣು ತತ್ತ್ವ ವಿನಿರ್ಣಯ ಟೀಕಾ ಟಿಪ್ಪಣಿ
  11. ಭಾಷ್ಯ ದೀಪಿಕಾ ಯುಕ್ತ ವಾಕ್ಯಾ (ಗುರು, ಲಘು)ಗುರುಗಳು ಕನ್ನಡದಲ್ಲಿ ಹಾಡುಗಳನ್ನು ರಚಿಸಿದ್ದು ಇ೦ದು ಅದು ಲಭ್ಯವಿಲ್ಲ

ಕೃಪೆ: ಪಂಡಿತ ರತ್ನ ವ್ಯಾಸನಕೆರೆ ಪ್ರಭಂಜನಾಚಾರ್ಯರು ಬರೆದಿರುವ ಸತ್ಯಧರ್ಮತೀರ್ಥರ ಗ್ರಂಥದ ಆಧಾರ


ತೀರ್ಥಹಳ್ಳಿ ಅನಂತ ಕಲ್ಲಾಪುರ

- Advertisement -
- Advertisement -

Latest News

ಎಮ್ಮೆ ತಮ್ಮನ ಕಗ್ಗದ ತಾತ್ಪರ್ಯ

  ಉಪ್ಪಿಷ್ಟು ಹುಳಿಯಿಷ್ಟು ಸಿಹಿಯಿಷ್ಟು ಖಾರಿಷ್ಟು ಸೇರಿದರೆ ಬಹಳರುಚಿ ಮಾಡಿದಡಿಗೆ ಅಳುನಗುವು ಸುಖದುಃಖ ನೋವ್ನಲಿವು ಸೇರಿದರೆ ಅನುಭಾವದಡಿಗೆ ರುಚಿ - ಎಮ್ಮೆತಮ್ಮ ಶಬ್ಧಾರ್ಥ ಅನುಭಾವ = ಅತೀಂದ್ರಿಯವಾದ ಅನುಭವ ತಾತ್ಪರ್ಯ ನಾವು ಮಾಡುವ ಅಡಿಗೆಯಲ್ಲಿ ಷಡ್ರಸಗಳಾದ ಉಪ್ಪು...
- Advertisement -

More Articles Like This

- Advertisement -
close
error: Content is protected !!
Join WhatsApp Group