spot_img
spot_img

“ವಯೋಮಾನ ಮತ್ತು ಫಲವತ್ತತೆ” ದತ್ತಿ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ

Must Read

ಬೆಳಗಾವಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನಿಂದ ದಿನಾಂಕ ೪-೧೧-೨೦೨೨ ರಂದು ಆಂಜನೇಯ ನಗರದ ಎಸ್.ಜಿ.ವಿ.ಮಹೇಶ ಪಿ.ಯು.ಕಾಲೇಜಿನಲ್ಲಿ ಶ್ರೀಮತಿ ಶಾಂತಾದೇವಿ.ಮ.ಬಣಕಾರ ದತ್ತಿನಿಧಿ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿದ ಡಾ॥ ವನಿತಾ ಮೆಟಗುಡ್ಡ ಅವರು ವಯೋಮಾನ ಮತ್ತು ಫಲವತ್ತತೆ ಕುರಿತು ಮಾತನಾಡುತ್ತಾ, ಇಂದು ಹೆಚ್ಚಿನ ತಾಯಂದಿರು ಐ.ವಿ.ಪಿ.ಗೆ ಒಳಗಾಗುತ್ತಿದ್ದಾರೆ.

ಇದರ ಪರಿಣಾಮ ಪ್ರತಿ ವರ್ಷ ಶೇ.೩% ರಷ್ಟು ಚಿಕಿತ್ಸೆ ಪ್ರಮಾಣ ಹೆಚ್ಚಾಗುತ್ತಿದೆ. ಇದು ಕಳವಳಕಾರಿ ವಿಷಯವಾಗಿದೆ. ಪ್ರಸ್ತುತ ಕಾಲದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಯುವಜನಾಂಗ ಉನ್ನತ ಶಿಕ್ಷಣ,ಉದ್ಯೋಗ,ಆರ್ಥಿಕ,ಸ್ವಾತಂತ್ರ್ಯದ ಕಾರಣ ಮಕ್ಕಳನ್ನು ಪಡೆಯುವುದು ವಿಳಂಬವಾಗುತ್ತಿದೆ. ವಯಸ್ಸು ಫಲವತ್ತತೆಯ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿದೆ. ವಯಸ್ಸು ಹೆಚ್ಚಾದಂತೆ ಅಂಡಾಂಶದ ಶಕ್ತಿ ಕಡಿಮೆಯಾಗುವುದು. ಸುಮಾರು ೨೫೦೦ ಅಂಡಾಂಶಗಳಿರುತ್ತವೆ.

ಋತುಬಂಧದ ಹಂತಗಳು ಸೇರಿ ಮೋನೋಪಾಸ್ ಗರ್ಭಾಶಯ ತೀವ್ರವಾಗಿ ಕ್ಷೀಣಿಸುತ್ತದೆ. ಋತುಬಂಧ ( ನಲವತ್ತರಿಂದ ಐವತ್ತು ವರ್ಷದವರೆಗೆ) ಮೋನೋಪಾಸ್ ನಂತರ ಅಂಡಾಂಶದ ವೈಫಲ್ಯ ಕಾಡುತ್ತಿವೆ. ಪರಿಹಾರ ಕ್ರಮವಾಗಿ ಎಚ್.ಆರ್. ಟಿ, ಐ.ವಿ.ಪಿ. ಮತ್ತು ದಾನಿ ಮೊಟ್ಟೆಯೊಂದಿಗೆ ಎಲೆಕ್ಟ್ರಿಕ್ ಎಗ್ ಪ್ರಿಚಿಂಗ್ ಮುಂತಾದ ಚಿಕಿತ್ಸೆಗಳನ್ನು ಪರಿಚಯಿಸಿದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾ ಕ.ಸಾ.ಪ ಅಧ್ಯಕ್ಷರಾದ ಶ್ರೀಮತಿ. ಮಂಗಲಾ ಶ್ರೀ ಮೆಟಗುಡ್ ಅವರು ಸಾಹಿತ್ಯ ಪರಿಷತ್ತಿನಲ್ಲಿಂದು ಲೇಖನ, ಕಥೆ,ಕವನ,ಸಾಹಿತ್ಯ ಕಾರ್ಯಕ್ರಮಗಳಷ್ಟೇ ಅಲ್ಲದೆ ಆರೋಗ್ಯಕ್ಕೆ ಸಂಬಂಧಿಸಿದ ವೈಜ್ಞಾನಿಕ ಸಾಹಿತ್ಯ ಕಾರ್ಯಕ್ರಮಗಳನ್ನು ಉಪನ್ಯಾಸದ ರೂಪದಲ್ಲಿ ನಡೆಸುತ್ತಿದ್ದೇವೆ. ಇದರ ಸದುಪಯೋಗವನ್ನು ಎಲ್ಲರೂ ಪಡೆದುಕೊಳ್ಳಬೇಕೆಂದು ವಿದ್ಯಾರ್ಥಿಗಳಿಗೆ ಅಮೂಲ್ಯವಾದ ಸಲಹೆಯನ್ನು ನೀಡಿದರು.

“ಕಾನನದ ಸಿರಿ”ಎಂಬ ಕೃತಿಗಾಗಿ ಶ್ರೀಮತಿ ಶಬಾನಾ ಅಣ್ಣಿಗೇರಿಯವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಮಹೇಶ ಪಿ. ಯು.ಕಾಲೇಜಿನ ಪ್ರಾಚಾರ್ಯ ಎಂ.ವಿ ಭಟ್ ರವರು ಪಾಲ್ಗೊಂಡಿದ್ದರು.ದತ್ತಿ ಪರಿಚಯವನ್ನು ಭಾರತಿ ಮಠದ ಮಾಡಿಕೊಟ್ಟರು. ಕ.ಸಾ.ಪ ಗೌರವ ಕಾರ್ಯದರ್ಶಿಗಳಾದ ಎಂ.ವೈ.ಮೆಣಸಿನಕಾಯಿ ಕಾರ್ಯಕ್ರಮ ನಿರೂಪಿಸಿದರು. ಪ್ರಭುದೇವ ಹಿರೇಮಠ ಎಲ್ಲರಿಗೂ ವಂದನೆಗಳನ್ನು ಸಲ್ಲಿಸಿದರು.

ಕಾರ್ಯಕ್ರಮದಲ್ಲಿ ಖಾನಾಪುರ ತಾಲೂಕಾ ಕ.ಸಾ.ಪ.ಅಧ್ಯಕ್ಷರಾದ ಬಸವಪ್ರಭು ಹಿರೇಮಠ,ಬೆಳಗಾವಿ ತಾಲೂಕಾ ಕ.ಸಾ.ಪ ಅಧ್ಯಕ್ಷರಾದ ಸುರೇಶ ಹಂಜಿ,ಶಿವಾನಂದ ತಲ್ಲೂರ,ಬಸವರಾಜ ಮಠಪತಿ, ಶ್ರೀಮತಿ. ಸುಮಾ.ಎಸ್.ಬೇವಿನಕೊಪ್ಪಮಠ, ಜಯಶೀಲಾ ಬ್ಯಾಕೋಡ,ನಾಗರತ್ನ ಅರಳಿಮಟ್ಟಿ,ಗುಜನಾಳ ಸುಪ್ರಭಾತ ಬೇಟಗಾರ ಪ್ರಣೋತಿ ಪಾಟೀಲ,ಲಕ್ಷ್ಮೀ ಹಂಚಿನಮನಿ,ಅಡಿವೆಪ್ಪಾ ಇಟಗಿ ಹಾಗೂ ಕಾಲೇಜಿನ ಅನೇಕ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಉಪಸ್ಥಿತರಿದ್ದು ಕಾರ್ಯಕ್ರಮಕ್ಕೆ ಶೋಭೆಯನ್ನು ತಂದರು.

- Advertisement -
- Advertisement -

Latest News

ಜಲಜೀವನ ಮಿಷನ್ ಪ್ರಚಾರ ವಾಹನಕ್ಕೆ ಚಾಲನೆ

ಬೈಲಹೊಂಗಲ: ಕೇಂದ್ರ ಮತ್ತು ರಾಜ್ಯ ಸರ್ಕಾರದ ವತಿಯಿಂದ ಪ್ರತಿ ಮನೆಗೆ ನಲ್ಲಿಯ ಮೂಲಕ ಶುದ್ಧ ಕುಡಿಯುವ ನೀರು ಜಲಜೀವನ ಮಿಷನ್ ಯೋಜನೆ ಕುರಿತು ಆಟೋ ಪ್ರಚಾರ...
- Advertisement -

More Articles Like This

- Advertisement -
close
error: Content is protected !!