ಬೆಂಗಳೂರು ವಿದ್ಯಾಪೀಠದ ಹತ್ತಿರವಿರುವ ಶ್ರೀಕೃಷ್ಣ ಪದವಿ ಸಂಜೆ ಕಾಲೇಜಿನಲ್ಲಿ ಕರ್ನಾಟಕ ಗಾಂಧಿ ಸ್ಮಾರಕ ನಿಧಿ ರಾಷ್ಟ್ರೀಯ ಸೇವಾ ಯೋಜನೆ ಯುವ ಸಬಲೀಕರಣ ಇಲಾಖೆ ವತಿಯಿಂದ ನಡೆದ ಕಾರ್ಯಕ್ರಮದಲ್ಲಿ ಪ್ರಾಧ್ಯಾಪಕ ಡಾ. ಆರ್ ವಾದಿರಾಜು ರವರು ‘ಯುವಜನತೆಗೆ ಮಹಾತ್ಮಗಾಂಧಿಯವರ ಆದರ್ಶಗಳ ‘ಕುರಿತು ವಿಶೇಷ ಉಪನ್ಯಾಸ ನೀಡಿದರು.
ಶ್ರೀಕೃಷ್ಣ ವಿದ್ಯಾ ಸಂಸ್ಥೆಯ ಆಡಳಿತ ನಿರ್ದೇಶಕ ಪ್ರೊ ಎಸ್ಪಿ ಮನೋಹರ ,ಲೇಖಕ ಡಾ .ಗುರುರಾಜ ಪೋಶೆಟ್ಟಿಹಳ್ಳಿ ವಿಶೇಷ ಆಹ್ವಾನಿತರಾಗಿ ಭಾಗವಹಿಸಿದ್ದರು.
ಗಾಂಧಿ ಭವನದ ಕಾರ್ಯಕ್ರಮ ಸಂಯೋಜಕ ಡಾ. ಎಸ್ ರಾಮಲಿಂಗೇಶ್ವರ (ಸಿಸಿರಾ)ಪ್ರಾಸ್ತಾವಿಕ ನುಡಿಗಳನ್ನಾಡಿದರು .
ಕಾಲೇಜಿನ ಪ್ರಾಂಶುಪಾಲ ಪ್ರೊ ಚಂಗಪ್ಪ ಅಧ್ಯಕ್ಷತೆ ವಹಿಸಿದ್ದರು. ಡಾ. ಚೌಡಯ್ಯ ಕಾರ್ಯಕ್ರಮ ನಿರೂಪಿಸಿದರು.