ಸಂಭ್ರಮ ಫೌಂಡೇಶನ್, ಇಟಗಿ ಹಾಗೂ ಜನತಾ ಶಿಕ್ಷಣ ಪ್ರಸಾರ ಸಮಿತಿಯ,ಪದವಿ ಪೂರ್ವ ಕಾಲೇಜು ಮತ್ತು ಪದವಿ ಕಾಲೇಜು ಇಟಗಿ ಸಹಯೋಗದಲ್ಲಿ, ಸ್ವಾತಂತ್ರ್ಯದ ಅಮೃತ ಮಹೋತ್ಸವ ಅಂಗವಾಗಿ ಸ್ವಾತಂತ್ರ್ಯ ಹೋರಾಟದಲ್ಲಿ, ನಂದಗಡದ ಬಸಪ್ಪಣ್ಣ ಅರಗಾಂವಿ ಅವರ ಪಾತ್ರ ಕುರಿತಾಗಿ ‘ಬೆಳ್ಳಿ ಚುಕ್ಕಿ’ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಚೆನ್ನಮ್ಮ ರಾಣಿ ಸ್ಮಾರಕ ಸಂಯುಕ್ತ ಪದವಿ ಪೂರ್ವ ಕಾಲೇಜು ಸಭಾ ಭವನ ಇಟಗಿಯಲ್ಲಿ ದಿನಾಂಕ 09.07.2022 ರಂದು ಶನಿವಾರ. ಸಮಯ ಬೆಳಗ್ಗೆ 10 ಗಂಟೆಗೆ ಹಮ್ಮಿಕೊಳ್ಳಲಾಗಿರುತ್ತದೆ.
ಸದರಿ ಕಾರ್ಯಕ್ರಮವು ಚ ರಾ ಸ್ಮಾ ಸಂ ಪ ಪೂ ಕಾಲೇಜು ಇಟಗಿ ಪ್ರಾಚಾರ್ಯರಾದ ಎಸ್ ಎಸ್ ಶಾಸ್ತ್ರಿ ಇವರ ಅಧ್ಯಕ್ಷತೆಯಲ್ಲಿ ಜರುಗಲಿದ್ದು, ಉಪನ್ಯಾಸಕರಾಗಿ ವಿಜಯ ಪೂಜಾರ ಸಹಾಯಕ ಪ್ರಾಧ್ಯಾಪಕರು, ಕೆಎಲ್ಇ ಪದವಿ ಕಾಲೇಜು ಖಾನಾಪುರ ಇವರು ಆಗಮಿಸುತ್ತಿದ್ದಾರೆ. ಮುಖ್ಯ ಅತಿಥಿಗಳಾಗಿ ವಿಜಯ ಬಿ ಸಾಣಿಕೊಪ್ಪ ಚೇರಮನ್ನರು, ಜೆ ಎಸ್ ಪಿ ಎಸ್ ಇಟಗಿ ಮತ್ತು ವಿ.ಬಿ.ಅರಗಾಂವಿ ಕಾರ್ಯದರ್ಶಿಗಳು, ರೂರಲ್ ಎಜುಕೇಶನ್ ಸೊಸೈಟಿ ನಂದಗಡ ಇವರು ಆಗಮಿಸಲಿದ್ದು, ಆರ್ ಬಿ ಹುಣಸಿಕಟ್ಟಿ ಪ್ರಾಚಾರ್ಯರು, ಪದವಿ ಕಾಲೇಜು ಇಟಗಿ ಇವರ ಉಪಸ್ಥಿತಿ ಇರುತ್ತದೆ.
ವಿಶೇಷ ಆಮಂತ್ರಿತರಾದ ಜೆ ಎಸ್ ಪಿ ಎಸ್ ಇಟಗಿ ಆಡಳಿತ ಮಂಡಳಿಯ ಸರ್ವ ಸದಸ್ಯರ ಹಾಗೂ ಸಾಹಿತ್ಯ, ಸಂಸ್ಕೃತಿ, ಕಲಾರಾಧಕರ ಉಪಸ್ಥಿತಿಯಲ್ಲಿ “ಬೆಳ್ಳಿಚುಕ್ಕಿ” ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿರುತ್ತದೆ ಎಂದು ‘ಸಂಭ್ರಮ ಫೌಂಡೇಶನ್’,ಇಟಗಿ ಅಧ್ಯಕ್ಷರಾದ, ಕಿರಣ ಕಲ್ಲಪ್ಪ ಗಣಾಚಾರಿ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ಅದೇ ರೀತಿ ಸಂಭ್ರಮ ಫೌಂಡೇಶನ್ ಇಟಗಿಯ ಸರ್ವ ಸದಸ್ಯರು ಹಾಗೂ ಸಿ ಆರ್ ಎಸ್ ಎಚ್ ಪದವಿ ಪೂರ್ವ ಕಾಲೇಜು ಮತ್ತು ಬಿ ಎಂ ಎಸ್ ಪದವಿ ಕಾಲೇಜಿನ ಉಪನ್ಯಾಸಕರು, ಪ್ರಾಧ್ಯಾಪಕರು ಹಾಗೂ ಸಿಬ್ಬಂದಿ ವರ್ಗ, ಕಾರ್ಯಕ್ರಮಕ್ಕೆ ಆಗಮಿಸಬೇಕೆಂದು ಹೃತ್ಪೂರ್ವಕವಾಗಿ ಕೋರಿಕೊಂಡಿರುತ್ತಾರೆ.