spot_img
spot_img

ಡಾ.ಫ ಗು ಹಳಕಟ್ಟಿ ಜಯಂತ್ಯುತ್ಸವ ನಿಮಿತ್ತ ವಚನೋತ್ಸವ ಕಾರ್ಯಕ್ರಮ

Must Read

ಸಿಂದಗಿ: ಶರಣರ ವಚನಗಳನ್ನು ಸಂಗ್ರಹಿಸಿ ತಮ್ಮ ಬಡತನದಲ್ಲೆ ಜಗತ್ತಿಗೆ ಓದಲು ಪಸರಿಸಿದ ವಚನ ಪಿತಾಮಹ ಫ.ಗು.ಹಳಕಟ್ಟಿ ಅವರು ಜನರ ಜೀವನಕ್ಕೆ ದಾರಿದೀಪವಾಗಿದ್ದಾರೆ ಎಂದು ಹಿರಿಯ ಸಾಹಿತಿ ವಿಶ್ರಾಂತ ಪ್ರಾಧ್ಯಾಪಕ ಡಾ.ಎಂ.ಎಂ.ಪಡಶೆಟ್ಟಿ ಹೇಳಿದರು.

ಪಟ್ಟಣದ ಹೊನ್ನಪ್ಪಗೌಡ ಬಿರಾದಾರ ಬಡಾವಣೆಯಲ್ಲಿ ಶರಣ ಸೂಗಪ್ಪ ಬ ಅಂಗಡಿ ಅವರ ಸದನದಲ್ಲಿ ತಾಲೂಕು ಶರಣ ಸಾಹಿತ್ಯ ಪರಿಷತ್ತು ಹಾಗೂ ವಚನೋತ್ಸವ ಸಮಿತಿಯ  148 ನೇ ವಚನೋತ್ಸವ ಅಂಗವಾಗಿ  ಲಿಂ.ನೀಲಗಂಗವ್ವ ಗುರುಲಿಂಗಪ್ಪ ಪಟ್ಟಣಶೆಟ್ಟಿ ,ಲಿಂ.ಗುರುಲಿಂಗಪ್ಪ ಶಿವಸಂಗಪ್ಪ ಪಟ್ಟಣಶೆಟ್ಟಿ ದತ್ತಿ ಸ್ಮರಣೆ ಹಾಗೂ ಡಾ. ಫ.ಗು.ಹಳಕಟ್ಟಿಯವರ 142 ನೇ ಜಯಂತ್ಯುತ್ಸವ ನಿಮಿತ್ತ ದತ್ತಿನಿಧಿ ಉಪನ್ಯಾಸ ಕಾರ್ಯಕ್ರಮವನ್ನು  ಉದ್ಘಾಟಿಸಿ   ಮಾತನಾಡಿ, ಹನ್ನೆರಡನೆಯ ಶತಮಾನದಲ್ಲಿ ಅಣ್ಣ ಬಸವಣ್ಣನವರ ಸಮಕಾಲೀನ ಕೆಲವು ಶರಣರು ವಿಜಯಪುರ ಜಿಲ್ಲೆಯವರು. ಶರಣರು ರಚಿಸಿದ ಸಾವಿರಾರು  ವಚನಗಳನ್ನು ಸಂಗ್ರಹಿಸಿರುವ ವಚನ ಪಿತಾಮಹ ಡಾ.ಫ.ಗು.ಹಳಕಟ್ಟಿಯವರು ತಮ್ಮ ಬಡತನದಲ್ಲೆ ತನು, ಮನ, ಧನದಿಂದ ಶ್ರಮಿಸಿ ಶರಣರ ವಚನಗಳನ್ನು ಓದುಗರಿಗೆ ಪ್ರಚಾರ ಮಾಡಲು ಶಿವಾನುಭವ ತೈಮಾಸಿಕ ಪತ್ರಿಕೆ ಹೊರತರುವ ಮುಖಾಂತರ ವಚನಾಮೃತ ಇಂದು ಓದುಗರ ಕೈಯಲ್ಲಿ ಇವೆ  ಆದ್ದರಿಂದ  ವಚನ ಪಿತಾಮಹರ ಸಾಧನೆ  ದೊಡ್ಡದು ಎಂದರು.

ಅಧ್ಯಕ್ಷತೆ ವಹಿಸಿದ್ದ ಹಿರಿಯ ಸಾಹಿತಿ ಡಾ.ಚನ್ನಪ್ಪ ಕಟ್ಟಿ ಮಾತನಾಡಿ, ಸರಕಾರ ಪರವಾಗಿ  ವಚನ ಪಿತಾಮಹ ಫ.ಗು. ಹಳಕಟ್ಟಿಯವರ  ಜಯಂತಿ ಆಚರಣೆ ಮಾಡಿರುವುದಕ್ಕೆ ಸರಕಾರದ ಕಾರ್ಯ ಅಭಿನಂದನಾರ್ಹ.  ವಚನ ಸಾಹಿತ್ಯ ಹಾಗೂ ಅವರ ಜೀವನ ಚರಿತ್ರೆ ಮಕ್ಕಳಿಗೆ ತಿಳಿಸಿ ಕೂಡುವ ಮೂಲಕ ಅವರ ತತ್ವ ಆದರ್ಶಗಳು  ಜೀವನದಲ್ಲಿ ಅಳವಡಿಸಿ ಕೊಂಡು ಶರಣರ ವಚನಗಳ ಓದುವ ಮೂಲಕ ಸಾತ್ವಿಕ ಜೀವನ ನಡೆಸಬೇಕು ಎಂದು ಕರೆ ನೀಡಿದರು.

ಶ್ರೀಮತಿ ಸಾವಿತ್ರಿ ಮೋದಿ, ತಾ.ಶ.ಸಾ.ಪ.ಅಧ್ಯಕ್ಷ ಚನ್ನಪ್ಪ ಕತ್ತಿ ಮಾತನಾಡಿದರು. ಕಾರ್ಯಕ್ರಮದಲ್ಲಿ ವಿಶ್ರಾಂತ ಪ್ರೊ. ಬಸವರಾಜ ಹನಮಶೆಟ್ಟಿ, ಕಲ್ಲಪ್ಪ ತಾರಾಪೂರ, ದುಂಡಪ್ಪ ಲೋಣಿ, ಬಸವಂತಪ್ಪ ಜೇರಟಗಿ,ಸುರೇಶ ಬಳುಂಡಗಿ, ರಮೇಶ ಪೂಜಾರಿ,ನೀಲಮ್ಮ ಅಂಗಡಿ, ಗೀತಾ ನಂದಗೌಡರ, ಮಹೇಶ,ಮಿನಾಕ್ಷಿ ಅಂಗಡಿ, ನಂದಿತಾ ಸು ಅಂಗಡಿ, ಭಾರತಿ ಅಂಗಡಿ, ನಿಂಗರಾಜ ಗೊರಗುಂಡಗಿ, ಶಿಕ್ಷಕ ಕೆ.ಬಿ.ಕುಸುರಿ, ಶಿಕ್ಷಕ ಬಿ.ಎಂ.ನಾಯಕಲ್, ರಮೇಶ ನಂದಗೌಡರ  ಹಾಗೂ ತಾಲೂಕು ಶರಣ ಸಾಹಿತ್ಯ ಪರಿಷತ್ತಿನ ಎಲ್ಲಾ ಪದಾಧಿಕಾರಿಗಳು ಭಾಗವಹಿಸಿದರು.

ಈ ಸಂದರ್ಭದಲ್ಲಿ ಗುಜರಾತದ ಗ್ರಾನಿಟೋ ಇಂಡಿಯಾ ಲಿ ಉಪಾಧ್ಯಕ್ಷ ದಾನಿ ಬಸವರಾಜ ಪಟ್ಟಣಶೆಟ್ಟಿ ಪರವಾಗಿ ಸಿಹಿ ವಿತರಿಸಲಾಯಿತು.

ಶಿಕ್ಷಕ ಸಾಹಿತಿ ಬಸವರಾಜ ಅಗಸರ ಸ್ವಾಗತಿಸಿದರು. ಶಿಕ್ಷಕ ಶಂಕರ ಕಟ್ಟಿಮನಿ ನಿರೂಪಿಸಿದರು. ಸೂಗಪ್ಪ ಬ ಅಂಗಡಿ ವಂದಿಸಿದರು. ಕುಮಾರ ಮಹೇಶ ನಂದಗೌಡರ ವಚನ ಗಾಯನ ಮಾಡಿದರು. ಶ್ರೀಮತಿ ನಾಗಮ್ಮ ಹಡಪದ ಜಾನಪದ ಗೀತೆಗಳನ್ನು ಹಾಡಿದರು.

- Advertisement -
- Advertisement -

Latest News

ಶ್ರೀ ಕೃಷ್ಣ ಜನ್ಮಾಷ್ಟಮಿ

ಸರ್ವಾಸಾಂ ಜಯಂತೀನಾಂ ಶ್ರೇಷ್ಠಾ ಕೃಷ್ಣಾಷ್ಟಮೀ ಮತಾ ಯಸ್ಮಾತ್ ಸನ್ನಿಹಿತಾತ್ಯಂತಂ ತತ್ರೈವೋಪವಸೇನ್ನರಃ ಸರ್ವಾಸ್ವಪಿ ಜಯಂತೀಷು ಪೂಜಾ ಕಾರ್ಯಾ ವಿಸೇಷತಃ ಸಾನಿಧ್ಯ ಏವ ಕರ್ತವ್ಯ ಉಪವಾಸೋ ನ ದೂರಗಃ ಎಲ್ಲ ಜಯಂತಿಗಳಲ್ಲಿಯೂ ಶ್ರೀ ಕೃಷ್ಣ...
- Advertisement -

More Articles Like This

- Advertisement -
close
error: Content is protected !!