spot_img
spot_img

ಆಧ್ಯಾತ್ಮಿಕ ದಿವ್ಯ ಸ್ಪಂದನ ನೀಡುವ ಸುಕ್ಷೇತ್ರ – ಹತ್ತರಗಿ ಶ್ರೀಹರಿಮಂದಿರ

Must Read

- Advertisement -

ಮನದಲ್ಲಿ ನೆಮ್ಮದಿ, ಮಾತಿನಲ್ಲಿ ಸಿದ್ಧಿ, ಮನೆಯಲ್ಲಿ ಸಮೃದ್ಧಿ ಬೇಕೆ? ಹಾಗಿದ್ದರೆ ಬನ್ನಿ ಇಲ್ಲಿಗೆ ಎಂದು ಭಕ್ತಾದಿಗಳನ್ನು ಕೈಬೀಸಿ ಕರೆಯುತ್ತ ಇದೆ ಈ ತಾಣ.

ಬೆಳಗಾವಿ ಜಿಲ್ಲೆ ಹುಕ್ಕೇರಿ ತಾಲೂಕಿನ ಯಮಕನಮರಡಿ ಧಾರ್ಮಿಕ ಸೊಗಡಿನ ಚಾರಿತ್ರಿಕ, ಪೌರಾಣಿಕ ನೆಲೆಯೆಂದು ಜನಪ್ರಿಯವಾದ ಸುಮಾರು 800 ವರ್ಷ ಇತಿಹಾಸ ಹೊಂದಿರುವ ಒಂದು ಗೃಹಸ್ಥ ಮಠವಿದೆ.

ಅದೇ ಅದೇ ಹರಿಕಾಕ ಗೋಸಾವಿ ಋಗ್ವೇದಿ ಭಾಗವತ (ವೈಷ್ಣವ) ಮಠ. ಕಾಲಕ್ಕೆ ತಕ್ಕಂತೆ ಕೊಂಚ ಆಧುನಿಕತೆಯ ಲೇಪವಿದ್ದರೂ ಗ್ರಾಮೀಣ ಸಂಸ್ಕೃತಿಯಿಂದ ಬೇರ್ಪಟ್ಟಿಲ್ಲ. ಒಂದು ಊರಿನ ಇತಿಹಾಸವೆಂದರೆ ಅದು ಜನತೆಯ ಇತಿಹಾಸ, ಅವರು ಬಾಳಿ ಬದುಕಿದ ರೀತಿ, ಅನುಸರಿಸಿದ ಧರ್ಮ, ಸಾಂಸ್ಕೃತಿಕ ಸಾಮಾಜಿಕ ಪ್ರಜ್ಞೆ, ಜೀವನ ಮೌಲ್ಯಗಳನ್ನು ಇಲ್ಲಿ ಕಾಣಬಹುದು.

- Advertisement -

ಶ್ರೀ ವೇಣುಗೋಪಾಲ ಇಲ್ಲಿ ಆರಾಧ್ಯ ದೇವರು. ಈ ಮಠವು ಮೂಲತಃ ಅಶ್ವಲಾಯನ ಸೂತ್ರ , ಶಾಕಲ ಋಗ್ವೇದಿ ದ್ವೈತ ಸಂಪ್ರದಾಯದ ಆಧ್ಯಾತ್ಮಿಕ ಕೇಂದ್ರ. ಈ ಮಠದ ಮೂಲ ಇಂದಿನ ಮಹಾರಾಷ್ಟ್ರದ ಪೈಠಣ (ಪ್ರತಿಷ್ಠಾನ) ಅಂದರೆ ಶ್ರೀ ಮಧ್ವಾಚಾರ್ಯರ ಮೊದಲನೇ ಶಿಷ್ಯರಾದ ಶ್ರೀ ಪದ್ಮನಾಭ ತೀರ್ಥರ ಗ್ರಾಮ ಹಾಗು ನಂಟು ಇರುವ ಗೃಹಸ್ಥ ಮಠ.

ಈ ಮಠದ ಪರಂಪರೆಯಲ್ಲಿ ಮುಖ್ಯವಾಗಿ ನಾಲ್ಕು ಮಂದಿ ಅಂದರೆ ಶ್ರೀ ನರಸಪ್ಪ ಗೋಸಾವಿ, ಶ್ರೀ ದತ್ತಪ್ಪ ಗೋಸಾವಿ, ಶ್ರೀ ಹರಿ ಗೋಸಾವಿ ಹಾಗು ಶ್ರೀ ಏಕನಾಥ ಗೋಸಾವಿ ಪೀಠಾಧಿಪತಿಗಳಾಗಿ ಆಗಿದ್ದಾರೆ. ಶ್ರೀ ನರಸಪ್ಪ ಗೋಸಾವಿರವರು ಬಹಳ ದೊಡ್ಡ ಆಧ್ಯಾತ್ಮ ಸಾಧಕರಾಗಿದ್ದರು.

- Advertisement -

ಹುಕ್ಕೇರಿ ತಾ|| ಪಾಶ್ಚಾಪುರ ಗ್ರಾಮದಲ್ಲಿ ಬಂದಂತಹ ಹುಲಿಯನ್ನುತನ್ನ ಆಧ್ಯಾತ್ಮಿಕ ಶಕ್ತಿಯಿಂದ ಊರುಬಿಟ್ಟು  ಹೋಗುವಂತೆ ಮಾಡಿದ ಕಾರಣ ಗ್ರಾಮಸ್ಥರು ಸುಮಾರು 100 ಎಕರೆ ಹೊಲವನ್ನು ದಾನವಾಗಿ ಕೊಟ್ಟ ಇತಿಹಾಸವಿದೆ.ಅದು ಈಗಲು ‘ಹುಲಿ ಹೊಲ’ ಎಂದು ಕರೆಯಲ್ಪಡುತ್ತದೆ.

ನಿಜಾರ್ಥದಲ್ಲಿ ಈ ಮಠಕ್ಕೆ ಬಹಳಷ್ಟು ಲೌಕಿಕ ಹಾಗು ಆಧ್ಯಾತ್ಮಿಕ ಮಾನ್ಯತೆ ದೊರೆತಿದ್ದು ಶ್ರೀ ಹರಿ ಗೋಸಾವಿರವರ ಕಾಲದಲ್ಲಿ. ಹೀಗಾಗಿ ಈ ಮಠವನ್ನು ಇವರ ಹೆಸರಿನಲ್ಲೆ ಗುರುತಿಸಲಾಗುತ್ತಿದೆ. ಇವರು ಒಬ್ಬ ಪವಾಡಪುರುಷರಾಗಿದ್ದು, 70 ರ ದಶಕದಲ್ಲಿ ಶ್ರೀ  ಮಠವನ್ನು ಯಮಕನಮರಡಿಯಿಂದ ಹತ್ತರಗಿ ಗ್ರಾಮಕ್ಕೆ ಸ್ಥಳಾಂತರಿಸಲಾಯಿತು.

1990 ರಲ್ಲಿ ವೈಕುಂಠವಾಸಿಗಳಾದ ಇವರ ಮೂಲ ಬೃಂದಾವನ ಕೊಲ್ಲಾಪುರ ಜಿಲ್ಲೆಯ ಗಡಹಿಗ್ಲಂಜ ತಾಲೂಕಿನ ಹಿರಲಗಿ ಗ್ರಾಮದಲ್ಲಿದೆ.

ಈ ಮಠದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಬಲು ಭಕ್ತಿಭಾವದಿಂದ ಆಚರಿಸಲಾಗುವುದು , ಅಂದರೆ ಅಷ್ಟಮಿ ಉಪವಾಸ, ನವಮಿ ಪಾರಣೆ , ದಶಮಿ ಗೋಪಲಕಾಲಾ(ಮೊಸರು ಗಡಿಗೆ ಒಡೆಯುವುದು), ಸಾವಿರಾರು ಭಕ್ತಾದಿಗಳು ಭಾಗವಹಿಸುವರು. ಈ ಎಲ್ಲಾ ಉತ್ಸವಗಳ ಮಹಾಸರಣಿಯು ಭಕ್ತ ಬಂಧುಗಳ ಭವ ಬಂಧನಕ್ಕೊಂದು ಆಧ್ಯಾತ್ಮಿಕ ಸ್ಪಂದನ ನೀಡಿ ಇಂದಿನ ಐಟಿ,ಬಿಟಿ ಉದ್ಯೋಗ ಸಂಸ್ಕೃತಿಯಲ್ಲಿ ಹತಾಶೆ, ಉದ್ವಿಗ್ನತೆ ,ಮಾನಸಿಕ ತೊಳಲಾಟಗಳನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಹರಿಕಾಕ ಮಂದಿರವು ಅಗಾಧ ಕೊಡುಗೆ ನೀಡುತ್ತಿದೆ.

ಒಟ್ಟಾರೆ ಈ ದೇಗುಲ ಸಂಕೀರ್ಣ ಕೃಷ್ಣಭಕ್ತಿಗೆ ಪ್ರೇರಕವೆನಿಸುತ್ತದೆ. ಗ್ರಾಮಾಂತರದಲ್ಲಿ ಆಧ್ಯಾತ್ಮಿಕತೆಯನ್ನಾಧರಿಸಿದ ಸಂಘಟನೆ, ಧರ್ಮಸಂಸ್ಕೃತಿ ಜಾಗೃತಿಯೇ ಇಲ್ಲಿ ಪರಮಲಕ್ಷ್ಯವಾಗಿದೆ ನರಸಿಂಹ ಆನಂದ ಗೋಸಾವಿ ತಿಳಿಸಿರುತ್ತಾರೆ.

ಶ್ರೀ ಮಠವು ಮಹಾರಾಷ್ಟ್ರ ಹಾಗು ಕರ್ನಾಟಕದ ಗಡಿ ಭಾಗದಲ್ಲಿ ಇರುವುದರಿಂದ ಎರಡೂ ರಾಜ್ಯದ ಭಕ್ತರ ಕಲ್ಪವೃಕ್ಷವಾಗಿದೆ. ಶ್ರೀ ಮಠಕ್ಕೆ ಮಹಾರಾಷ್ಟ್ರ ಮತ್ತು ಕರ್ನಾಟಕದ ಗಣ್ಯವ್ಯಕ್ತಿಗಳು ಭಕ್ತರಾಗಿದ್ದು ಅವರ ಸೇವೆ ಗಣನೀಯವಾಗಿದೆ. ಪ್ರಸ್ತುತ ಪೀಠಾಧೀಶರಾದ ಅಂದರೆ ನರಸಿಂಹ ಆನಂದ ಗೋಸಾವಿಯವರು ತಮ್ಮ ತಂದೆ ಶ್ರೀ ಏಕನಾಥ ಗೋಸಾವಿಯವರ ಮರಣೋತ್ತರ ಅಂದರೆ 2003 ರಿಂದ ಮಠದ ಉಸ್ತುವಾರಿ ನೋಡುಕೊಳ್ಳುತ್ತಿದ್ದು, ಶೈಕ್ಷಣಿಕವಾಗಿ ಎಂಬಿಎ (ಫೈನಾನ್ಸ್) ಪದವಿಧರರಾಗಿರುತ್ತಾರೆ.

ಇವರ ಇಬ್ಬರು ಪುತ್ರರು ವೇಣುಗೋಪಾಲ ವಕೀಲರಾಗಿದ್ದು; ಚಾರುದತ್ತ ಎಂಸಿಎ ಅಧ್ಯಯನ ಮಾಡಿ ಸಿಎ ಓದುತ್ತಿದ್ದಾರೆ.

(ಪೂರಕ ಮಾಹಿತಿ: ಗೋಪಾಲ ಚಪಣಿ ಮತ್ತು ಸೋಮಶೇಖರ ಹೊರಕೇರಿ)

ಏ. 3 ರಂದು ಸಂತ ಏಕನಾಥ ಮಹಾರಾಜರ 19ನೇ ಪುಣ್ಯತಿಥಿ ವಿದ್ಯಾರ್ಥಿಗಳಿಗೆ ಶಿಷ್ಯ ವೇತನ ವಿತರಣೆ – ಸಂಸ್ಕೃತ ಪಾಠಶಾಲೆ ಉದ್ಘಾಟನೆ ಹಾಗು ಸಾಧಕರಿಗೆ ಪ್ರಶಸ್ತಿ ಪ್ರದಾನ..

ಬೆಳಗಾವಿ ಜಿಲ್ಲೆ ಯಮಕನಮರಡಿಯ ಹತ್ತರಗಿಯ ಶ್ರೀ ಹರಿಕಾಕ ಮಂದಿರದಲ್ಲಿ ಏ. 3 ಭಾನುವಾರದಂದು ಮಧ್ಯಾಹ್ನ 2.00ಗಂಟೆಗೆ ಸಂತ ಏಕನಾಥ ಮಹಾರಾಜರ 19ನೇ ಪುಣ್ಯತಿಥಿ ನಿಮಿತ್ತ ವಿದ್ಯಾರ್ಥಿಗಳಿಗೆ ಶಿಷ್ಯ ವೇತನ ವಿತರಣೆ – ಸಂಸ್ಕೃತ ಪಾಠಶಾಲೆ ಉದ್ಘಾಟನೆ ಹಾಗು ಸಾಧಕರಿಗೆ ಪ್ರಶಸ್ತಿ ಪ್ರದಾನ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ.

ಕಾರ್ಯಕ್ರಮದ ದಿವ್ಯಸಾನ್ನಿಧ್ಯವನ್ನು ಹುಣಸಿಕೊಳ್ಳಮಠದ ಗುರು ರಾಜೋಟೇಶ್ವರ ಮಹಾಸ್ವಾಮಿಗಳು ಹಾಗು ಕಾರೀಮಠದ ಗುರುಸಿದ್ದೇಶ್ವರ ಮಹಾಸ್ವಾಮಿಗಳು ವಹಿಸಲಿದ್ದಾರೆ.

ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಗಣ್ಯರಾದ ಸಂಸ್ಕೃತಿ ಚಿಂತಕ –ಅಂಕಣಕಾರ ಬೆಂಗಳೂರಿನ ಡಾ.ಗುರುರಾಜ ಪೋಶೆಟ್ಟಿಹಳ್ಳಿರವರಿಗೆ ‘ವ್ಯಾಸ ಸಂಪದ ಪುರಸ್ಕಾರ’ ಹುಕ್ಕೇರಿಯ ಕ್ಷೇತ್ರ ಶಿಕ್ಷಣಾಧಿಕಾರಿ ಮೋಹನ ದಂಡಿನ ರವರಿಗೆ ‘ಜ್ಞಾನ ವಿದ್ಯಾಗಿರಿ ‘ಪುರಸ್ಕಾರ , ಬೆಳಗಾವಿಯ ಮಹಿಳಾ ಅರ್ಚಕರಾದ ಭಾರತಿ ಈ ಕುಡಚಿಮಠರವರಿಗೆ ‘ಪುರೋಹಿತ ರತ್ನ ‘ಪುರಸ್ಕಾರ, ಯಮಕನಮರಡಿ ಪೋಲಿಸ್ ಠಾಣೆಯ ಸಿಪಿಐ ಆರ್.ಜಿ.ಛಾಯಾಗೋಳ- ಜನ ಸೇವಾ ಪುರಸ್ಕಾರ, ಪಿಎಸ್ಐ ಬಿ.ವಿ.ನ್ಯಾಮಗೌಡರ – ಬಸವ ಪುರಸ್ಕಾರ, ಪ್ರಾ.ಕ.ಪ ಸಂಘ ಅಧ್ಯಕ್ಷ ಸುಹಾಸ ಜೋಷಿ- ಸಹಕಾರ ರತ್ನ, ಹತ್ತರಗಿ ಗ್ರಾ.ಪಂ ಮಾಜಿ ಅಧ್ಯಕ್ಷ – ಹಾಲಿ ಸದಸ್ಯ ಮಹಾದೇವ ಪಟೋಳಿ- ಪ್ರಗತಿ ಪರ್ವ, ಹುಎಸಸಂನಿ ನಿರ್ದೇಶಕ ಸೋಮಲಿಂಗ ಪಟೋಳಿ – ಜ್ಯೋತಿ ಪುರಸ್ಕಾರ, ತಾ.ಸಾಹಿತ್ಯ ಪರಿಷತ್ ಅಧ್ಯಕ್ಷ ಪಿ.ಜಿ.ಅವಲಕ್ಕಿ –ಸಾಹಿತ್ಯ ಸುಮ , ಜಿಲ್ಲಾ ಕರವೇ ಉಪಾಧ್ಯಕ್ಷ ರಾಜು ನಾಶಿಪುಡಿ – ಕನ್ನಡ ಕಣ್ಮಣಿ , ಕೊಲ್ಲಾಪುರ ಮರಾಠಿ ಭಾಷಾ ಸಂವಾದಕ ಯುವರಾಜ ಕದಂ – ಮರಾಠಿ ಭಾಷಾ ಪುರಸ್ಕಾರ ಹಾಗು ಕಲಾವಿದ ಭರತ ಕಲಾಚಂದ್ರ – ಕಲಾಶ್ರೀ ಪ್ರಶಸ್ತಿ ನೀಡಿ ಗೌರವಿಸುವ ಸಮಾರಂಭದ ಅಧ್ಯಕ್ಷತೆಯನ್ನು ಶ್ರೀ ಮಠದ ಉಪಾಧ್ಯಕ್ಷರಾದ ಬೆಳಗಾವಿಯ ನ್ಯಾಯವಾದಿ ಎಸ್ .ಎಂ .ಕುಲಕರ್ಣಿ ವಹಿಸಲಿದ್ದಾರೆಂದು ಕಾರ್ಯಕ್ರಮ ಆಯೋಜಕರಾದ ಹತ್ತರಗಿ ಶ್ರೀಹರಿ ಮಂದಿರರ ಪೀಠಾಧ್ಯಕ್ಷರಾದ ಆನಂದ ಉರ್ಫ ನರಸಿಂಹ ಏಕನಾಥ ಗೋಸಾವಿ ತಿಳಿಸಿದ್ದಾರೆ.


ಡಾ.ಗುರುರಾಜ ಪೋಶೆಟ್ಟಿಹಳ್ಳಿ , ಸಂಸ್ಕೃತಿ ಚಿಂತಕರು, ಬೆಂಗಳೂರು 90356 18076

- Advertisement -
- Advertisement -

Latest News

ನಮ್ಮ ಊರ ಜಾತ್ರೆಯೊಂದನ್ನು ನಿಮ್ಮ ಬದುಕಿನ ಯಾತ್ರೆಗೆ ಹೋಲಿಸುತ್ತ….

ಹಾಯ್, ಹಲೋ, ನಮಸ್ಕಾರ...ಸ್ನೇಹಿತರೆ ನೀವೆಲ್ಲ ಹೇಗಿದ್ದೀರಿ? ಬಹಳಷ್ಟು ಜನ ಪರವಾಗಿಲ್ಲ ಚೆನ್ನಾಗಿದ್ದೀವಿ ಅಂತೀರಿ ಇನ್ನು ಕೆಲವಷ್ಟು ಜನ ಅಯ್ಯೋ ಅದ್ ಏನ್ ಕೇಳ್ತೀರಾ ಬಿಡಿ ಅನ್ನುವಂತಹ...
- Advertisement -

More Articles Like This

- Advertisement -
close
error: Content is protected !!
Join WhatsApp Group