spot_img
spot_img

ಆಧ್ಯಾತ್ಮಿಕ ಚಿಂತನವು ಬದುಕಿನಲ್ಲಿ ಶಾಂತಿ, ನೆಮ್ಮದಿ ನೀಡುತ್ತದೆ

Must Read

ಮೂಡಲಗಿ: ಮೂಡಲಗಿಯ ಕೆಇಬಿ ಪ್ಲಾಟ್‍ದಲ್ಲಿಯ ಶ್ರೀ ಮಾರ್ತಂಡ ಮಲ್ಲಯ್ಯ ಹಾಗೂ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಆವರಣದಲ್ಲಿ 11ನೇ ಶಿವಾನುಭವ ಗೋಷ್ಠಿ ಜರುಗಿತು.

ಬೀಳಗಿ ತಾಲ್ಲೂಕಿನ ಚಿಕ್ಕ ಹಂಚಿನಾಳದ ಶಾಂತಾನಂದ ಸ್ವಾಮೀಜಿ ಶಿವಾನುಭವ ಗೋಷ್ಠಿಯನ್ನು ಉದ್ಘಾಟಿಸಿ ಮಾತನಾಡಿ ‘ಆಧ್ಯಾತ್ಮಿಕ ಚಿಂತನೆಯು ಮನುಷ್ಯನಿಗೆ ಬದುಕಿನಲ್ಲಿ ಶಾಂತಿ, ನೆಮ್ಮದಿಯನ್ನು ನೀಡುವುದು’ ಎಂದರು.

ಇಟ್ನಾಳದ ಸಿದ್ಧೇಶ್ವರ ಶರಣರು ಮಾತನಾಡಿ ಬಡತನ, ಸಿರಿತನ, ಅಧಿಕಾರ ಇವು ಶಾಶ್ವತ ಅಲ್ಲ. ಬಡತನ, ಶ್ರೀಮಂತಿಕೆಯನ್ನು ಸಮಾನವಾಗಿ ಕಂಡುಕೊಂಡಾಗ ಮಾತ್ರ ಬದುಕಿನಲ್ಲಿ ನೆಮ್ಮದಿ. ಸಂಸಾರವನ್ನು ಸರಳವಾಗಿ ಮಾಡಿಕೊಂಡು ಜೀವನವನ್ನು ಸಾರ್ಥಕವಾಗಿಸಿಕೊಳ್ಳಬೇಕು’ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದ ದುಂಡಪ್ಪ ಮಹಾರಾಜರು ಮಾತನಾಡಿ, ‘ಭಕ್ತರು ಮತ್ತು ವಿವಿಧ ಮಠಗಳ ಶ್ರೀಗಳ ಸಹಕಾರದಿಂದ ದೇವಸ್ಥಾನ ಕಟ್ಟಡ ನಿರ್ಮಾಣವು ಸಾಗುತ್ತಲಿದೆ’ ಎಂದರು.

ಸಂಚಾಲಕ ಈಶ್ವರ ಗೊಲಶೆಟ್ಟಿ ಮಾತನಾಡಿ, ಪ್ರತಿ ಅಮಾವಾಸ್ಯೆ ಗೆ ಶಿವಾನುಭವ ಗೋಷ್ಠಿಯನ್ನು ಏರ್ಪಡಿಸುತ್ತಿದ್ದು, ಭಕ್ತರಿಂದ ಉತ್ತಮ ಸ್ಪಂದನೆ ಇದೆ ಎಂದರು.

ನಾಗಪ್ಪ ಯಲ್ಲಟ್ಟಿ, ರಾಮಚಂದ್ರ ಬಾಬನ್ನವರ, ಶಿವಾಜಿ ಮೇದಾರ ಮತ್ತಿತರರು ಇದ್ದರು.

ಅನ್ನಸಂತರ್ಪಣೆಯಲ್ಲಿ ನೂರಾರು ಭಕ್ತರು ಭಾಗವಹಿಸಿದ್ದರು.

- Advertisement -
- Advertisement -

Latest News

ವಿರಾಟಪುರ ವಿರಾಗಿ ಚಿತ್ರದ ವಾಲ್ ಪೋಸ್ಟರ್ ಬಿಡುಗಡೆ

ಸಿಂದಗಿ: ಹಾನಗಲ್ಲ ಗುರುಕುಮಾರ ಮಹಾಸ್ವಾಮಿಗಳವರ ಉಸಿರೇ ಸಮಾಜವಾಗಿತ್ತು ತಮ್ಮ ಬಗ್ಗೆ ಕಿಂಚಿತ್ತೂ ವಿಚಾರ ಮಾಡಿದವರಲ್ಲ ಎಂದು ಡಾ. ಪ್ರಭುಸಾರಂಗದೇವ ಶಿವಾಚಾರ್ಯರು ಹೇಳಿದರು. ಪಟ್ಟಣದ ಸಾರಂಗಮಠದಲ್ಲಿ ಹಾನಗಲ್ಲ ಶ್ರೀ...
- Advertisement -

More Articles Like This

- Advertisement -
close
error: Content is protected !!