ಅಧ್ಯಾತ್ಮ ವಿದ್ಯೆ ಮಕ್ಕಳ ಮೂಲ ಶಿಕ್ಷಣವಾಗಬೇಕು

Must Read

ಹೊಸ ಪುಸ್ತಕ ಓದು: ಕನ್ನಡ ಸಾಹಿತ್ಯದಲ್ಲಿ ಅನುಭಾವ

ಕನ್ನಡ ಸಾಹಿತ್ಯದಲ್ಲಿ ಅನುಭಾವ ಪ್ರಧಾನ ಸಂಪಾದಕರು : ಪ್ರೊ. ಬಿ. ಬಿ. ಡೆಂಗನವರ ಪ್ರಕಾಶಕರು : ಬೆಳದಿಂಗಳು ಪ್ರಕಾಶನ, ಬೆಳಗಾವಿ, ೨೦೨೦ ಮೊ: ೯೯೦೨೪೯೫೬೯೫ ‘ಕನ್ನಡದಲ್ಲಿ ಅನುಭಾವ ಸಾಹಿತ್ಯ’ ಇದೊಂದು ಮೌಲಿಕ...

ಸ್ನೇಹಿತರ ದಿನಾಚರಣೆಯ ಶುಭಾಷಯಗಳು

ನಮ್ಮಲ್ಲಿ ಎಷ್ಟೋ ದಿನಾಚರಣೆಗಳಿವೆ. ಇದರಲ್ಲಿ ಸ್ನೇಹಕ್ಕೆ ಕೊಡುವ ಬೆಲೆ ಯಾವುದಕ್ಕೂ ಕೊಡಲಾಗದು ಎನ್ನುತ್ತಾರೆ. ಕಾರಣ ಇಲ್ಲಿ ಸ್ವಾರ್ಥ ಅಹಂಕಾರವಿರದೆ ಶುದ್ದ ಭಾವನೆಗಳ ಸಮ್ಮಿಲನವಿರುತ್ತದೆ. ಬಡವ ಬಡವನನ್ನು...

ಪಿಂಜಾರ ಅಭಿವೃದ್ಧಿ ನಿಗಮ ಸ್ಥಾಪಿಸಲು ಒತ್ತಾಯ

ಸಿಂದಗಿ: ರಾಜ್ಯದಲ್ಲಿ ಪಿಂಜಾರ, ನದಾಫ್ ಸಮುದಾಯಗಳು ಶಿಕ್ಷಣ, ಆರ್ಥಿಕ, ಸಾಮಾಜಿಕ, ರಾಜಕೀಯವಾಗಿ ಹಿಂದುಳಿದಿದ್ದು ಈ ಜನಾಂಗ ಉದ್ದಾರವಾಗಬೇಕಾದರೆ ಪಿಂಜಾರ್ ಅಭಿವೃದ್ಧಿ ನಿಗಮ ಅವಶ್ಯಕತೆ ಇದೆ. ಪ್ರವರ್ಗ...

ಭೂಮಿಯ ಮೇಲಿರುವ ಮಾಯೆ ಎಲ್ಲರಿಗೂ ಮಂಕು ಮಾಡುತ್ತದೆ ಎನ್ನುವುದಕ್ಕೆ ನಮ್ಮ ಅನುಭವವೇ ಸಾಕ್ಷಿ. ಇಲ್ಲಿ ಯಾರೋ ಹಿಂದೆ ಅನುಭವಿಸಿ, ಹೇಳಿ, ಬರೆದಿಟ್ಟ ಸತ್ಯವನ್ನು ನಾವು ಬಹಳ ಬೇಗ ನಂಬುತ್ತೇವೆ.

ಆದರೆ, ನಮ್ಮದೇ ಆದ ಅಂತಹ ಅನುಭವವನ್ನು ನಮ್ಮವರೊಡನೆ ಹಂಚಿಕೊಂಡು ಜೀವನ ನಡೆಸಲು ಕಷ್ಟಪಡುತ್ತೇವೆ. ಈ ಕಾರಣಕ್ಕಾಗಿಯೇ ಮಾನವ ಜನ್ಮ ಜನ್ಮಕ್ಕೂ ತನ್ನದೇ ಕರ್ಮ ಹಾಗು ಋಣವನ್ನರಿಯದೆ ಪರರ ಹಿಂದುಳಿದು ಬೇ ಡೋದು ತಪ್ಪುತ್ತಿಲ್ಲ.

ಇದಕ್ಕೆ ಒಂದೇ ಮಾರ್ಗ ನಿನ್ನೊಳಗಿರುವ ಸತ್ಯ ಬಿಡದೆ ಧರ್ಮ ಮಾರ್ಗ ಹಿಡಿಯಲು ಸ್ವತಂತ್ರವಾಗಿ ,ಸರಳವಾಗಿ,ಸಾಮಾನ್ಯಜ್ಞಾನ ಬಳಸಿ ಸ್ವಾಭಿಮಾನದಿಂದಿರಲು ಪ್ರಯತ್ನಪಡೋದು. ಬರೆದಿಟ್ಟಂತೆ ಬದುಕಲಾಗಲ್ಲವೆಂದ ಮೇಲೆ ಬದುಕುವುದಕ್ಕೆಬ ರವಣಿಗೆಯಾಗಬಾರದು. ಬದುಕು- ಬರಹ ಒಂದೇ ಸಮ ಇರಬೇಕಾದರೆ ಅನುಭವ ಜ್ಞಾನ ಅಗತ್ಯ.

- Advertisement -

ಹಿಂದಿನ ಮಹಾತ್ಮರುಗಳಲ್ಲಿ ನಡೆ ನುಡಿ ಒಂದಾಗಿತ್ತು. ಹೀಗಾಗಿ ನಮಗೀಗ ಅವರೆ ತತ್ವಜ್ಞಾನಿಗಳು. ತತ್ವಜ್ಞಾನ ವನ್ನು ಅಳವಡಿಸಿಕೊಂಡಾಗಲೆ ಅನುಭವಜ್ಞಾನ ಹೆಚ್ಚಾಗುತ್ತದೆ. ಸಮಸ್ಯೆಗಳಿಗೆ ಮೂಲ ಕಾರಣವೆ ಸಾಮಾನ್ಯಜ್ಞಾನದ ಕೊರತೆ. ಇದು ಮಾನವನೊಳಗಿರುತ್ತದೆ.

ಉತ್ತಮವಾಗಿ ಬಳಸಿಕೊಂಡು ಎಲ್ಲರೊಳಗೊಂದಾಗಿ ಬದುಕಲು ಕಲಿಯಬೇಕಷ್ಟೆ. ಮಕ್ಕಳಿಗೆ ಎಷ್ಟು ಪುಸ್ತಕದ ವಿಷಯ ತಲೆಗೆ ತುಂಬಿದ್ದೇವೆನ್ನುವುದರ ಮೇಲೆ ಜ್ಞಾನವಿಲ್ಲ. ಯಾವ ಪುಸ್ತಕದ ವಿಚಾರ ತಲೆಯಲ್ಲಿದೆ ಅದನ್ನು ಎಷ್ಟು ಅಳವಡಿಸಿಕೊಂಡಿದ್ದಾರೆ, ಅದರಿಂದ ಎಷ್ಟು ಶಾಂತಿ, ನೆಮ್ಮದಿ,ಸಮಾಧಾನ,ತೃಪ್ತಿ, ಸಂತೋಷ ಜೀವನದಲ್ಲಿ ಸಿಕ್ಕಿದೆ, ಸಿಗುತ್ತಿದೆ, ಸಿಗಬಹುದೆನ್ನುವ ತತ್ವಜ್ಞಾನ ಪೋಷಕರಿಗಿದ್ದರೆ ಉತ್ತಮ ಪ್ರಜೆಗಳನ್ನು ಸೃಷ್ಟಿಸಿದ ಪುಣ್ಯ ಸಿಗುತ್ತದೆ.

ಇದು ಈಗಿನ ಭಾರತೀಯ ಮಕ್ಕಳಿಗೆ ಮುಖ್ಯವಾಗಿದೆ. ಸತ್ವರಹಿತ, ಸತ್ಯವಿಲ್ಲದ ವಿಷಯಗಳನ್ನು ಒತ್ತಾಯದಿಂದ ತಲೆಗೆ ತುಂಬಿ ಮಕ್ಕಳ ಮುಗ್ಧತೆ ಹಾಳು ಮಾಡಿ ಪ್ರಬುದ್ಧತೆ ಬೆಳೆಸಿದರೆ ಮುಂದೆ ಅದೇ ಪೋಷಕರಿಗೆ ಶೋಷಣೆ ಮಾಡೋ‌ಮಟ್ಟಿಗೆ ಬೆಳೆದಾಗ ಏನೂ ಮಾಡಲಾಗದು.

ಶಿಕ್ಷಣ ಆಂತರಿಕವಾಗಿ ಸದೃಢ ವಾಗಿಸಲು ತತ್ವಜ್ಞಾನ ಮುಖ್ಯ.ತಂತ್ರಜ್ಞಾನ ನಂತರ ನಿಧಾನವಾಗಿ ಅಗತ್ಯವಿದ್ದರೆ ಬಳಸಿಕೊಳ್ಳುವ ಸ್ವತಂತ್ರ ಜ್ಞಾನಶಕ್ತಿ ಮಕ್ಕಳಿಗೆ ಬರುತ್ತದೆ. ಹೀಗಾಗಿ ನಿಧಾನವೇ ಪ್ರಧಾನ ವೆಂದರು. ಇಲ್ಲಿ ಆಧ್ಯಾತ್ಮದ ವಿಚಾರಗಳಲ್ಲಿಯೂ ನೇರವಾಗಿ ಪುರಾಣ,ಇತಿಹಾಸ,ಶಾಸ್ತ್ರ, ಸಂಪ್ರದಾಯ, ವೇದಗಳನ್ನು ಮಕ್ಕಳಿಗೆ ತಿಳಿಸಿ ಕಲಿಸಿ ವ್ಯವಹಾರಕ್ಕೆ ಬಳಸಿ, ಸಾಮಾನ್ಯಜ್ಞಾನವಿಲ್ಲವಾದರೆ ವ್ಯರ್ಥ.

ದೇಶ,ಕಾಲಮಾನಕ್ಕೆ ತಕ್ಕಂತೆ ಬದಲಾದರೂ ಅದರ ಮೂಲದ ಸತ್ಯ ಸತ್ವ, ತತ್ವ ಬದಲಾಗದೆ ಸ್ಥಿರವಾಗಿರುತ್ತದೆ. ಹಾಗೆಯೇ ನಮ್ಮ ದೇಹದೊಳಗಿರುವ ಆತ್ಮಕ್ಕೆ ಸಾವಿಲ್ಲ ಜನ್ಮದಿಂದ ಜನ್ಮಕ್ಕೆ ಹೋಗುವ ಈ ಶಕ್ತಿಯನ್ನರಿತು ಜೀವನದ ಮುಖ್ಯ ಗುರಿ ತಲುಪಿಸುವ ಆಧ್ಯಾತ್ಮ ವಿದ್ಯೆ ಮಕ್ಕಳ ಮೂಲ ಶಿಕ್ಷಣವಾದರೆ ಎಲ್ಲಾ ಸಮಸ್ಯೆಗಳಿಗೆ ಕಾರಣ ಮತ್ತು ಪರಿಹಾರವೂ ಒಳಗಿನ ಶಕ್ತಿಯಿಂದ ಸಿಗುತ್ತದೆ.

ಭೌತಿಕ ವಿಜ್ಞಾನ ಹೆಚ್ಚು ಹೆಚ್ಚು ಆಕರ್ಷಿಸುತ್ತದೆ. ಆಧ್ಯಾತ್ಮದ ಜ್ಞಾನ ಇದನ್ನು ನಿರಾಕರಿಸುತ್ತದೆ.ಆದರೆ ಇವೆರಡರ ಮಧ್ಯೆ ಇರುವ‌ ಜೀವನಕ್ಕೆ ಎಷ್ಟು ಬೇಕೋ ಅಷ್ಟು ಪಡೆದು ಎರಡನ್ನೂ ಸಮಾನವಾಗಿಸುವ ಸಾಮಾನ್ಯಜ್ಞಾನ ಮಾನವನಿಗಿದ್ದರೆ ಸಮಾನತೆ, ಶಾಂತಿ ತೃಪ್ತಿ ಸಿಗುತ್ತದೆ.

ಶ್ರೀಮತಿ ಅರುಣ ಉದಯಭಾಸ್ಕರ, ಬೆಂಗಳೂರು

- Advertisement -
- Advertisement -

Latest News

ಹೊಸ ಪುಸ್ತಕ ಓದು: ಕನ್ನಡ ಸಾಹಿತ್ಯದಲ್ಲಿ ಅನುಭಾವ

ಕನ್ನಡ ಸಾಹಿತ್ಯದಲ್ಲಿ ಅನುಭಾವ ಪ್ರಧಾನ ಸಂಪಾದಕರು : ಪ್ರೊ. ಬಿ. ಬಿ. ಡೆಂಗನವರ ಪ್ರಕಾಶಕರು : ಬೆಳದಿಂಗಳು ಪ್ರಕಾಶನ, ಬೆಳಗಾವಿ, ೨೦೨೦ ಮೊ: ೯೯೦೨೪೯೫೬೯೫ ‘ಕನ್ನಡದಲ್ಲಿ ಅನುಭಾವ ಸಾಹಿತ್ಯ’ ಇದೊಂದು ಮೌಲಿಕ...
- Advertisement -

More Articles Like This

- Advertisement -
close
error: Content is protected !!