ಚನ್ನಮ್ಮ ತೋಟಗಾರಿಕೆ ಮಹಾವಿದ್ಯಾಲಯದಲ್ಲಿ ವಿಶೇಷ ವಾರ್ಷಿಕ ಶಿಬಿರ

Must Read

ಮೂಡಲಗಿ:- ಕಿತ್ತೂರ ರಾಣಿ ಚನ್ನಮ್ಮ ತೋಟಗಾರಿಕೆ ಮಹಾವಿದ್ಯಾಲಯ, ಅರಭಾವಿಯ ರಾಷ್ಟ್ರೀಯ ಸ್ವಯಂ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರವನ್ನು ಒಂದು ವಾರ ಕಾಲ  ದಿನಾಂಕ: ೨೧.೦೫.೨೦೨೫ ರಿಂದ ೨೭.೦೫.೨೦೨೫ ರ ವರೆಗೆ ಗೋಕಾಕ ತಾಲೂಕಿನ ಹಿರೇನಂದಿ ಗ್ರಾಮದಲ್ಲಿ ಹಮ್ಮಿಕೊಳ್ಳಲಾಗಿದೆ.

ದಿನಾಂಕ ೨೧ ರಂದು ಮೊದಲನೆ ದಿನ ಉದ್ಘಾಟನಾ
ಸಮಾರಂಭವು ಪೂಜ್ಯ ಶ್ರೀ ಮಲ್ಲಯ್ಯ
ಸ್ವಾಮಿಜಿಯವರ ಮಾರ್ಗದರ್ಶನದಲ್ಲಿ ನಡೆಯಿತು. ಪ್ರಾರ್ಥನಾ ಗೀತೆಯೊಂದಿಗೆ ಕಾರ್ಯಕ್ರಮವು ಆರಂಭಗೊಂಡಿತು. ಕಾರ್ಯಕ್ರಮದಲ್ಲಿ ಶ್ರೀ ಸದಾನಂದಯ್ಯ ಬಾಳಯ್ಯ ಪೂಜಾರಿ
ಮತ್ತು ಶ್ರೀ ಶಿವಯ್ಯ ಚ. ಪೂಜಾರಿ ಸ್ವಾಮೀಜಿಗಳ ಸಾನ್ನಿಧ್ಯ ದಲ್ಲಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಾ.
ಎಮ್. ಜಿ. ಕೆರುಟಗಿ, ಡೀನ್ ಕಿತ್ತೂರ ರಾಣಿ ಚನ್ನಮ್ಮ ತೋಟಗಾರಿಕೆ ಮಹಾವಿದ್ಯಾಲಯ, ಅರಭಾವಿ ಇವರು ವಹಿಸಿ ಎನ್.ಎಸ್.ಎಸ್. ಶಿಬಿರದ ಮಹತ್ವ,
ಗ್ರಾಮೀಣ ಭಾಗದ ಬೆಳವಣಿಗೆಯಲ್ಲಿ ಎನ್.ಎಸ್.ಎಸ್.
ಕೊಡುಗೆಯನ್ನು ವಿವರಿಸಿದರು.

ಈ ಕಾರ್ಯಕ್ರಮವನ್ನು ಪ್ರಥಮ ಬಿ.ಎಸ್ಸಿ. ತೋಟಗಾರಿಕೆ ವಿದ್ಯಾರ್ಥಿನಿಯರು ನಡೆಸಿಕೊಟ್ಟರು. ನಂತರ ವೇದಿಕೆ ಮೇಲೆ ಆಸೀನರಿದ್ದ ಗಣ್ಯಮಾನ್ಯರು, ವಿದ್ಯಾರ್ಥಿಗಳು. ಎನ್.ಎಸ್.ಎಸ್. ವಿಭಾಗದ
ಯೋಜನಾಧಿಕಾರಿಗಳು ಜ್ಯೋತಿ ಬೆಳಗಿಸುವ ಮೂಲಕ
ಕಾರ್ಯಕ್ರಮವನ್ನು ಉದ್ಘಾಟಿಸಿದರು. ಕು. ಸವಿತಾ ಸಿ. ಹಾಗೂ ಅಕ್ಷತಾ ಪಿ. ಅನಿಸಿಕೆ ಹೇಳಿದರು. ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ವಹಿಸಿದ್ದ ಶ್ರೀ ಮಲ್ಲಯ್ಯ ಸ್ವಾಮಿಜಿಯವರು ಮಾತೃಭೂಮಿಯ ಹಾಗೂ ಬಸವಾದಿ ಶಿವಶರಣರ ವಚನಗಳ ಮಹತ್ವ ಹಾಗೂ ದೇಶಭಕ್ತಿ ನಮ್ಮೆಲ್ಲರ ಕರ್ತವ್ಯ ದೇಶದ ಭಾವಿ ಪ್ರಜೆಗಳಾದ ನೀವು ಉತ್ತಮ ಗುಣ, ನಡತೆಯನ್ನು ಹೊಂದಬೇಕು ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು.

ಅತಿಥಿಗಳಾಗಿ ಬಸವರಾಜ ಹಾರೋಗೊಪ್ಪ ಮಾಜಿ ಗ್ರಾಮ
ಪಂಚಾಯತ ಅಧ್ಯಕ್ಷರು, ಹಿರೇನಂದಿ, ವಿಶೇಷ
ಆಹ್ವಾನಿತರಾಗಿ ಮಹಾದೇವ ಹೊಸಮನಿ, ಪ್ರಾಚಾರ್ಯರು ಮುರಾರ್ಜಿ ವಸತಿ ಶಾಲೆ ಹಿರೇನಂದಿ , ವಿಠ್ಠಲ ಕೆಂಪಣ್ಣ ಖಿಲಾರಿ ಗ್ರಾಮ ಪಂಚಾಯತ ಸದಸ್ಯರು, ಸಿದ್ದಪ್ಪ ಯ. ಪೂಜಾರಿ ಹಾಗೂ ಅಡಿವೆಪ್ಪ ಅಂಕಲಗಿ ಊರಿನ ಪ್ರಮುಖರು ಭಾಗವಹಿಸಿದ್ದರು.

ರಾಷ್ಟ್ರೀಯ ಸ್ವಯಂ ಸೇವಾ ಯೋಜನಾ ಕಾರ್ಯಕ್ರಮದ
ಅಧಿಕಾರಿಗಳಾದ ಡಾ. ಎಸ್.ಜಿ. ಪ್ರವೀಣಕುಮಾರ, ಡಾ. ಪ್ರತಿಕ್ಷಾ ಡಾ. ರಾಘವೇಂದ್ರ ಕೆ.ಎಸ್., ಡಾ. ವಿಲಾಸ ಡಿ. ಗಸ್ತಿ, ಸಹ ಪ್ರಾಧ್ಯಾಪಕರು ಪಾಲ್ಗೊಂಡಿದ್ದರು. ಡಾ. ಚೈತ್ರಾ ಕುಲಕರ್ಣಿ, ಶಿಬಿರದ ಪೋಷಕ ಸಿಬ್ಬಂದಿಯಾಗಿ ಆಗಮಿಸಿದ್ದರು.

ಈ ಕಾರ್ಯಕ್ರಮವನ್ನು ಮನೋಜಕುಮಾರ
ಹನುಮನಾಳ ಅವರು ನಿರೂಪಿಸಿದರು ಹಾಗೂ ಶ್ರೀಧರ ಮಾವಿನ ಮರದ ಅವರು ಗಣ್ಯರನ್ನು ಸ್ವಾಗತಿಸಿದರು.
ಕಾರ್ಯಕ್ರಮವನ್ನು ಯಶಸ್ವಿಯಾಗಿ ನೇರವೇರಿಸಿ ಕೊಟ್ಟಂತಹ ಗಣ್ಯರಿಗೆ ಹಾಗೂ ಗ್ರಾಮಸ್ತರಿಗೆ ರಾಚಪ್ಪ ಮಠಪತಿ ಇವರು ವಂದಿಸಿದರು.

Latest News

ತೆರಿಗೆಗಳ ಬಗ್ಗೆ ಎಲ್ಲರಲ್ಲಿ ಅರಿವು ಮುಖ್ಯ : ಪ್ರೊ. ಎಂ.ವಾಯ್. ಕಂಬಾರ

ಮೂಡಲಗಿ: ಸರಕು ಮತ್ತು ಸೇವಾ ತೆರಿಗೆ ಚೌಕಟ್ಟು ಭಾರತದಲ್ಲಿ ಜುಲೈ 1, 2017 ರಿಂದ ಜಾರಿಗೆ ಬಂದಿರುವ ಏಕರೂಪದ, ಗುರಿ-ಆಧಾರಿತ, ಪರೋಕ್ಷ ತೆರಿಗೆ ವ್ಯವಸ್ಥೆಯಾಗಿದೆ. ಇದು...

More Articles Like This

error: Content is protected !!
Join WhatsApp Group