Homeಸುದ್ದಿಗಳುಸೆ.೯ರಂದು ಶ್ರೀ ಉ.ವೇ.ವೇಲುಕ್ಕುಡಿ ಕೃಷ್ಣನ್ ಸ್ವಾಮಿ ಅವರಿಂದ ‘ಅಘಟಿತ ಘಟನಾ’ ವಿಶೇಷ ಉಪನ್ಯಾಸ

ಸೆ.೯ರಂದು ಶ್ರೀ ಉ.ವೇ.ವೇಲುಕ್ಕುಡಿ ಕೃಷ್ಣನ್ ಸ್ವಾಮಿ ಅವರಿಂದ ‘ಅಘಟಿತ ಘಟನಾ’ ವಿಶೇಷ ಉಪನ್ಯಾಸ

ಮೈಸೂರು -ನಗರದ ಕಾಳಿದಾಸ ರಸ್ತೆಯಲ್ಲಿರುವ ಶ್ರೀ ಲಕ್ಷ್ಮೀನರಸಿಂಹಸ್ವಾಮಿ ದೇವಸ್ಥಾನದಲ್ಲಿ ಯತಿರಾಜ ಮಠ, ಮೈಸೂರು ಶಾಖೆ ಮತ್ತು ಪಂಚಗರುಡೋತ್ಸವ ಸೇವಾ ಸಮಿತಿ, ಮೈಸೂರು ಇವರ ಸಂಯುಕ್ತಾಶ್ರಯದಲ್ಲಿ ಸೆ.೯ರಂದು ಸೋಮವಾರ ಬೆಳಿಗ್ಗೆ ೧೦ರಿಂದ ಮಧ್ಯಾಹ್ನ ೧೨.೩೦ರವರೆಗೆ ಶ್ರೀ ಯದುಗಿರಿ ಯತಿರಾಜ ಜೀಯರ್ ಸ್ವಾಮೀಜಿಯವರ ಅಮೃತ ಮಹೋತ್ಸವ ಅಂಗವಾಗಿ ಶ್ರೀ ಉ.ವೇ.ವೇಲುಕ್ಕುಡಿ ಕೃಷ್ಣನ್ ಸ್ವಾಮಿಯವರಿಂದ ‘ಅಘಟಿತ ಘಟನಾ’ ಎಂಬ ವಿಷಯದ ಕುರಿತು ವಿಶೇಷ ಉಪನ್ಯಾಸವನ್ನು ಏರ್ಪಡಿಸಲಾಗಿದೆ.

ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಇದರ ಸದುಪಯೋಗಪಡಿಸಿಕೊಳ್ಳಬೇಕೆಂದು ದೇವಸ್ಥಾನದ ಮುಖ್ಯಸ್ಥ ಕೆ.ಆರ್.ಯೋಗಾನರಸಿಂಹನ್ (ಮುರುಳಿ ಅಯ್ಯಂಗಾರ್) ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಮಾಹಿತಿಗೆ ಮೊಬೈಲ್ ೯೩೪೨೧೮೮೩೨೩, ೭೫೯೮೮೩೨೨೭೧ ಸಂಪರ್ಕಿಸಬಹುದು.

RELATED ARTICLES

Most Popular

error: Content is protected !!
Join WhatsApp Group