spot_img
spot_img

ಕ್ರೀಡೆಗಳು ಮನುಷ್ಯನ ಆಯಸ್ಸು ವೃದ್ದಿಸುತ್ತವೆ

Must Read

- Advertisement -

ಸಿಂದಗಿ: ಮನುಷ್ಯನಿಗೆ ವಿದ್ಯೆ ಎಷ್ಟು ಮುಖ್ಯವೋ ಕ್ರೀಡೆಗಳು ಅಷ್ಟೇ ಮುಖ್ಯ. ಸದೃಢ ದೇಹಕ್ಕೆ ಕ್ರೀಡೆಗಳು ಅತ್ಯವಶ್ಯಕ ಎಂದು ತಹಶೀಲ್ದಾರ ಸಂಜೀವಕುಮಾರ  ದಾಸರ ಹೇಳಿದರು.

ಪಟ್ಟಣದ ಬಂದಾರ ರಸ್ತೆಯಲ್ಲಿರುವ ಶ್ರೀಶಾಂತೇಶ್ವರ ಬಡಾವಣೆಯಲ್ಲಿ ವಿಆರ್‍ಜಿ ಬ್ಯಾಡ್ಮಿಂಟನ್ ಇಂಡೋರ ಸ್ಟೇಡಿಯಂ( ಕ್ಲಬ್)ವನ್ನು ಅವರು ಉದ್ಘಾಟಿಸಿ ಮಾತನಾಡಿ, ದಿನದ 24 ಗಂಟೆಗಳಲ್ಲಿ ಒಂದಾದರು ಕ್ರೀಡೆಯಲ್ಲಿ ತೊಡಗಿದರೆ ರೋಗಮುಕ್ತ ಸಮಾಜ ನಿರ್ಮಾಣ ಮಾಡಲು ಸಾಧ್ಯ ಎಂದರು.

ಕಾಂಗ್ರೆಸ್ ಮುಖಂಡ ಅಶೋಕ ಮನಗೂಳಿ ಮಾತನಾಡಿ, ಪಟ್ಟಣದಲ್ಲಿ ಹೆಚ್ಚು ಹೆಚ್ಚು ಆಸ್ಪತ್ರೆಗಳನ್ನು ಕಟ್ಟಿಸುವ ಬದಲು ಕ್ರೀಡಾಂಗಣಗಳು ನಿರ್ಮಿಸಿ ಆಟಗಳಲ್ಲಿ ತೊಡಗಿದರೆ ದೇಹದಲ್ಲಿ ಆಕ್ರಮಿಸುವ ರೋಗವನ್ನು ತಡೆಗಟ್ಟಬಹುದು ಕಾರಣ ಕ್ರೀಡಾಭಿಮಾನಿಗಳು ಹೆಚ್ಚು ಹೆಚ್ಚು ಕ್ರೀಡೆಗಳಲ್ಲಿ ತೊಡಗಿ ಸಮಾಜವನ್ನು ಕಲುಷಿತಗೊಳಿಸುತ್ತಿರುವ ರೋಗಗಳಿಗೆ ಗುಡ್ ಬೈ ಹೇಳಿ ಎಂದು ಸಲಹೆ ನೀಡಿದರು.

- Advertisement -

ಜಿ.ಪಿ.ಪೋರವಾಲ ಕಾಲೇಜಿನ ದೈಹಿಕ ನಿರ್ದೇಶಕ ರವಿ ಗೋಲಾ ಮಾತನಾಡಿ, ಮನುಷ್ಯನ ವಯಸ್ಸಿನ ಮಿತಿಯಿಲ್ಲದೆ ಕ್ರೀಡೆಯಲ್ಲಿ ಎಷ್ಟು ಹೊತ್ತು ತಲ್ಲೀನನಾಗುತ್ತಾನೋ ಅಷ್ಟು ಆರೋಗ್ಯವಂತನಿರಲು ಸಾಧ್ಯ ಅಲ್ಲದೆ ಕ್ರೀಡೆಗಳು ಮನುಷ್ಯನ ಆಯುಷ್ಯವನ್ನು ವೃದ್ಧಿಸುತ್ತದೆ ಎಂದು ತಿಳಿಸಿದರು.

ಸಿಪಿಐ ರವೀಂದ್ರ ಉಕ್ಕಂದ ಶರಣಪ್ಪ ವಾರದ, ವೆಂಕಟೇಶ ಗುತ್ತೇದಾರ, ಶರದ ನಾಡಗೌಡ, ಡಾ. ಮಹೇಶ ಕುಲಕರ್ಣಿ, ಶ್ರೀಶೈಲಗೌಡ ಮಾಗಣಗೇರಿ, ಪುರಸಭೆ ಉಪಾಧ್ಯಕ್ಷ ಹಾಸೀಂ ಆಳಂದ ಹಾಗೂ ಸದಸ್ಯ ಸಂದೀಪ ಚೌರ ಮತ್ತು ಆದರ್ಶ ವಿದ್ಯಾಲಯದ ಮುಖ್ಯೋಪಾಧ್ಯಾಯ ರಮೇಶ ಚಟ್ಟರಕಿ, ಪ್ರಕಾಶ ಹಿರೇಕುರಬರ, ಮಹ್ಮದ ಪಟೇಲ ಬಿರಾದಾರ, ಜಗ್ಗು ಗುತ್ತೆದಾರ, ಬ್ಯಾಡ್ಮಿಂಟನ್ ಅಸೋಸಿಯೇಷನ್  ಅಧ್ಯಕ್ಷ ಅನಂತರಡ್ಡಿ ದೇವರಡ್ಡಿ, ಗಿರೀಶ ದೇಸಾಯಿ, ಪ್ರವೀಣ ಬಿರಾದಾರ ಮತ್ತು ಸದಸ್ಯರುಗಳು ಹಾಗೂ ಆಟಗಾರರು ಭಾಗವಹಿಸಿದ್ದರು.

ಈ ಸಂದರ್ಭದಲ್ಲಿ ಸ್ಟೇಡಿಯಂ ವನ್ನು ಸುಸಜ್ಜಿತವಾಗಿ ನಿರ್ಮಾಣಗೊಳಿಸಿದ ಯುವಕ ಗ್ರೂಪಿನ ಮಾಲೀಕ ವೆಂಕಟೇಶ್ ಗುತ್ತೆದಾರ ಇವರನ್ನು ಸನ್ಮಾನಿಸಲಾಯಿತು.

- Advertisement -
- Advertisement -

Latest News

ಸ್ವಾಮಿ ವಿವೇಕಾನಂದರ ಬೆಳಗಾವಿ ಭೇಟಿಯ ಸ್ಮಾರಕ ಭವನ

ಬೆಳಗಾವಿ- ಭಾರತದ ಶೂರ ಸನ್ಯಾಸಿ ಸ್ವಾಮಿ ವಿವೇಕಾನಂದ ಅವರು ಸನ್ ೧೮೯೨ ರಲ್ಲಿ ಕರ್ನಾಟಕದ ಬೆಳಗಾವಿಗೆ ಭೇಟಿ ಕೊಟ್ಟು ಅಕ್ಟೋಬರ್ ೧೬ ರಿಂದ ೨೭ ರ...
- Advertisement -

More Articles Like This

- Advertisement -
close
error: Content is protected !!
Join WhatsApp Group