ಸಿಂದಗಿ: ಮಕ್ಕಳು ಪಠ್ಯ ಚಟುವಟಿಕೆಗಳ ಜೊತೆಗೆ ಕ್ರೀಡೆಗೂ ಮಹತ್ವ ನೀಡಬೇಕು, ಮಕ್ಕಳ ಬೆಳವಣಿಗೆ ಹಾಗೂ ಅವರ ಆರೋಗ್ಯಕರ ಜೀವನಕ್ಕೆ ಕ್ರೀಡೆ ಅತ್ಯಅವಶ್ಯಕ ಎಂದು ಅಭಿವೃದ್ಧಿ ಅಧಿಕಾರಿ ಆರ್ ಎಂ ಚಕ್ರವರ್ತಿ ಹೇಳಿದರು.
ತಾಲೂಕಿನ ಮೋರಟಗಿ ಗ್ರಾಮ ಪಂಚಾಯತಿ ಕೇಂದ್ರದಲ್ಲಿ ಹಮ್ಮಿಕೊಂಡ ಅಂತಾರಾಷ್ಟ್ರೀಯ ಆಟದ ದಿನ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿ, ಒಬ್ಬ ಸಾಮಾನ್ಯ ವ್ಯಕ್ತಿ ಆಗಲಿ ಶ್ರೀಮಂತ ವ್ಯಕ್ತಿ ಆಗಲಿ ಎಷ್ಟು ವರ್ಷ ಬದುಕಿದ್ದಾನೆ ಎನ್ನುವುದು ಮುಖ್ಯವಲ್ಲ ಎಷ್ಟು ಅರೋಗ್ಯವಂತನಾಗಿ ಬದುಕಿದ್ದಾನೆ ಎನ್ನುವುದು ಮುಖ್ಯ ಇಂದಿನ ವಿದ್ಯಾರ್ಥಿಗಳಾದ ತಾವುಗಳು ನಾಳೆ ನಮ್ಮ ದೇಶ ಬೆಳೆಸುವ ಪ್ರಜೆಗಳು ವಿದೇಶಿ ಕ್ರೀಡೆಗಿಂತ ಸ್ವದೇಶಿ ಕ್ರೀಡೆಗಳಿಗೆ ಹೆಚ್ಚಿನ ಆದ್ಯತೆ ನೀಡಿ ಉತ್ತಮ ಗುಣಮಟ್ಟದ ಶಿಕ್ಷಣ ಪಡೆದು ದೇಶ ಮೆಚ್ಚುವ ಮಕ್ಕಳಾಗಿ ಹೊರ ಹೊಮ್ಮಬೇಕು ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ನಂತರ ಗ್ರಾಪಂ ಅಧ್ಯಕ್ಷರ ಪ್ರತಿನಿಧಿ ರವಿಕಾಂತ ನಡುವಿನಕೇರಿ ಮಾತನಾಡಿ ದಿನದಿಂದ ದಿನಕ್ಕೆ ಮೊಬೈಲ್ ಬಳಕೆ ಹೆಚ್ಚಾಗುತ್ತಿದೆ ವಿದ್ಯಾರ್ಥಿಗಳು ಹಾಗೂ ಯುವಕರು ಮೊಬೈಲ್ ಗಿಣಿಯ ಹಿಂದೆ ಬಿದ್ದು ಅದೆಷ್ಟೋ ಜನ ಬಲಿಯಾಗಿದ್ದು ದಿನ ಪತ್ರಿಕೆಗಳಲ್ಲಿ ನೋಡುತ್ತೇವೆ ಹೀಗಾಗಿ ಪಾಲಕರು ಮಕ್ಕಳಿಗೆ ಮೊಬೈಲ್ ಸಲುಗೆ ನೀಡಬಾರದು ಮಕ್ಕಳ ಮೇಲೆ ಮಮತೆಯಿಂದ ಮೊಬೈಲ್ ನೀಡಿದರೆ ರಾತ್ರಿ ಕಂಡ ಬಾವಿ ಹಗಲು ಬಿದ್ದಂತೆ ನಿಮ್ಮ ಮಕ್ಕಳ ಜೀವನ ನೀವೇ ಕೊಂಡಂತೆ ಆಗುತ್ತದೆ ಎಂದರು.
ಸಭೆಯಲ್ಲಿ ಭಾಗವಹಿಸಿದ ಎಲ್ಲರು ಮಕ್ಕಳೊಂದಿಗೆ ಚೆಸ್, ಆಟವನ್ನ ಆಡಿ ಸಂಭ್ರಮಿಸಿದರು.
ಈ ಸಂದರ್ಭದಲ್ಲಿ ಉಪಾಧ್ಯಕ್ಷ ಇಸುಫ್ ಮುಲ್ಲಾ, ಗ್ರಾಪಂ ಕಾರ್ಯದರ್ಶಿ ಸುಭಾಸ್ ಮಿಲಿಟರಿ, ಮಲ್ಲು ದುದ್ದಗಿ, ನೂರಮಹಮದ್ ಕಣ್ಣಿ, ಐಇಸಿ ಸಂಯೋಜಕ ಬಸವರಾಜ ಹುಣಸಗಿ, ಗ್ರಂಥಾಲಯ ಮೇಲ್ವಿಚಾರಕ ಲಕ್ಷ್ಮಣ ಪತ್ತಾರ ಸೇರಿದಂತೆ ಸರ್ಕಾರಿ ಶಾಲೆಯ ಶಿಕ್ಷಕರ ವೃಂದ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.