spot_img
spot_img

ಚಿತ್ರಕಲಾ ಪರೀಕ್ಷೆಯಲ್ಲಿ ಅಳ್ನಾವರ ಪರೀಕ್ಷಾ ಕೇಂದ್ರದಲ್ಲಿ ಸಾಧನೆ ಮೆರೆದ ಶ್ರೀ ಚನ್ನಬಸವೇಶ್ವರ ಪ್ರೌಢಶಾಲಾ ಮಕ್ಕಳು

Must Read

- Advertisement -

2022 -23ನೇ ಸಾಲಿನ ಪ್ರೌಢಶಾಲಾ ಮಕ್ಕಳಿಗೆ ಶಿಕ್ಷಣ ಇಲಾಖೆಯು ನಡೆಸುವ ಚಿತ್ರಕಲಾ ವಿಭಾಗದ ಹೈಯರ್ ಗ್ರೇಡ್ ಪರೀಕ್ಷೆಯಲ್ಲಿ 600ಕ್ಕೆ 501 ಅಂಕ ಪಡೆದು ಅಳ್ನಾವರ ಪರೀಕ್ಷಾ ಕೇಂದ್ರಕ್ಕೆ ಧಾರವಾಡದ ಶ್ರೀನಗರದ ಶ್ರೀ ಚನ್ನಬಸವೇಶ್ವರ ಪ್ರೌಢಶಾಲೆಯ ವಿದ್ಯಾರ್ಥಿನಿ ಮೇಘಾ ಎಚ್ ಪರಸಪ್ಪನವರ ಪ್ರಥಮ ಸ್ಥಾನ ಪಡೆದಿದ್ದಾಳೆ.      470 ಅಂಕ ಪಡೆದು ದ್ವಿತೀಯ ಸ್ಥಾನವನ್ನು ಇದೇ ಶಾಲೆಯ ಸುಷ್ಮಾ ಸೋಮನಕೊಪ್ಪ ಪಡೆದಿದ್ದಾಳೆ. ಲೋವರ್ ಗ್ರೇಡ್ ಪರೀಕ್ಷೆಯಲ್ಲಿ ಇದೇ ಶಾಲೆಯ ಅಮೃತ ಬ್ಯಾಟನ್ನವರ್  406 ಅಂಕ ಪಡೆದು ಕೇಂದ್ರಕ್ಕೆ ದ್ವಿತೀಯ ಸ್ಥಾನ ಪಡೆದಿದ್ದಾಳೆ.

ಪವಿತ್ರ ಬೆಳ್ಳಿಗಟ್ಟಿ 456, ಲಕ್ಷ್ಮೀ ಬಂದುನವರ 464, ತಾರಾ ಗುಡಸಲಮನಿ 395, ಕರಿಯಪ್ಪ ಅಂಬ್ಲಿನವರ 410 ಅಂಕ ಪಡೆದು ಈ ಮಕ್ಕಳು ಡಿಸ್ಟಿಂಕ್ಷನ್ ನಲ್ಲಿ ಪಾಸಾಗಿದ್ದಾರೆ.

ಈ ಮಕ್ಕಳಿಗೆ ಮಾರ್ಗದರ್ಶನ ಮಾಡಿದ ಚಿತ್ರಕಲಾ ಶಿಕ್ಷಕರಾದ ಬಿ ಆರ್ ಜಕಾತಿ ಅವರಿಗೆ ಹಾಗೂ ಸಾಧನೆ ಮಾಡಿದ ಮುದ್ದು ಮಕ್ಕಳಿಗೆ ಶಾಲಾ ಆಡಳಿತ ಅಧಿಕಾರಿಗಳಾದ ಜಿ.ಎಂ ಹೊಸಮನಿ ಆಯುಕ್ತರ ಕಾರ್ಯಾಲಯದ ಚಿತ್ರಕಲಾ  ವಿಭಾಗದ ಅಧಿಕಾರಿಗಳಾದ ಪಿ ಆರ್ ಬಾರಕೇರ , ಧಾರವಾಡ ಶಹರದ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಗಿರೀಶ ಪದಕಿ, ಶಾಲಾ ಪ್ರಧಾನ ಗುರುಗಳಾದ ಸಿ ಕೆ ಹೆಬಸೂರ ಹಾಗೂ ಶಾಲಾ ಸಿಬ್ಬಂದಿ ಮತ್ತು ಎಲ್ಲಾ ಪಾಲಕರು ಅಭಿನಂದಿಸಿದ್ದಾರೆ.

- Advertisement -

ಕಳೆದ ವರ್ಷವೂ ಕೂಡ ಇದೇ ಶಾಲೆಯ ಮಕ್ಕಳು ಪರೀಕ್ಷಾ ಕೇಂದ್ರಕ್ಕೆ ಪ್ರಥಮ ಸ್ಥಾನ ಪಡೆದಿದ್ದು ಈ ವರ್ಷವೂ ಕೂಡ ಇದೇ ಶಾಲೆಯ ಮಕ್ಕಳು  ಪ್ರಥಮ ಹಾಗೂ ದ್ವಿತೀಯ ಸ್ಥಾನ ಪಡೆದಿದ್ದಕ್ಕೆ ಧಾರವಾಡ ಜಿಲ್ಲಾ ಚಿತ್ರಕಲಾ ಶಿಕ್ಷಕರ ಸಂಘದ ಅಧ್ಯಕ್ಷರಾದ ಎಂ.ಬಿ ಹುಬ್ಬಳ್ಳಿ , ಚಿತ್ರಕಲಾ ವಿಭಾಗದ ರಾಜ್ಯ ಸಂಪನ್ಮೂಲ ವ್ಯಕ್ತಿಗಳಾದ ಬಾಬಾಜಾನ ಮುಲ್ಲಾ ತುಂಬಾ ಹರ್ಷ ವ್ಯಕ್ತಪಡಿಸಿದ್ದಾರೆ. ಧಾರವಾಡ ಜಿಲ್ಲೆಯ ಅಳ್ನಾವರ ಪರೀಕ್ಷಾ ಕೇಂದ್ರದಲ್ಲಿ  ಹೈಯರ್ ಗ್ರೇಡ್ ಪರೀಕ್ಷೆಯಲ್ಲಿ 53 ಮಕ್ಕಳು ಮತ್ತು ಲೋವರ್ ಗ್ರೇಡ್ ಪರೀಕ್ಷೆಯಲ್ಲಿ 54 ಮಕ್ಕಳು ಪರೀಕ್ಷೆ ಬರೆದಿದ್ದರು.ಇದರಲ್ಲಿ ಈ ಮಕ್ಕಳು ತಮ್ಮ ಸಾಧನೆಯನ್ನು ಮಾಡಿದ್ದಾರೆ.     

ಬಿ.ಆರ್.ಜಕಾತಿಯವರ ಕಥೆ-ಚಿತ್ರಕಥೆ-ನಿರ್ದೇಶನದ ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರಶಸ್ತಿಯನ್ನು ಪಡೆದ ಶೈಕ್ಷಣಿಕ ಮತ್ತು ಸಾಮಾಜಿಕ ಕಳಕಳಿಯುಳ್ಳ “ಸಾವಿನ ಮನೆಯಲ್ಲಿ ರಕ್ತದಾನ” ಮತ್ತು “ಅನಾಥರು” ಎಂಬ ಕಿರುಚಲನಚಿತ್ರಗಳಲ್ಲಿಯೂ ಕೂಡ ಈ ಮಕ್ಕಳು ಅಭಿನಯಿಸಿದ್ದಾರೆ.

- Advertisement -
- Advertisement -

Latest News

ಇದು ಇಂದಿನ ಹಾಸ್ಟೆಲ್ ಹುಡುಗ ಹುಡುಗಿಯರಿಗೆ ನಾವೆಲ್ಲ ಹೇಳಬೇಕಾದ ಖಾಸ್ ಬಾತ್

ಸರ್... ಓ ಸರ್...ಕಾಂಬಳೆ ಸರ್  ... ಸರ್ ನಮಸ್ಕಾರ್ರಿ ಆರಾಮ ಅದೀರಿ?? ನಾ ಯಾರ್ ಹೇಳ್ರಿ ಅನ್ನುತ್ತಿದ್ದಂತೆಯೇ ನಿವೃತ್ತಿ ಹೊಂದಿ ಐದಾರು ವರ್ಷ ಆಗಿದ್ದ ಬಿಸಿಎಮ್...
- Advertisement -

More Articles Like This

- Advertisement -
close
error: Content is protected !!
Join WhatsApp Group