spot_img
spot_img

ಚತುರ್ವಣದ ಕಾಲದಲ್ಲಿ ಶೂದ್ರರನ್ನು ಲಿಂಗಾಯತರನ್ನಾಗಿಸಿ ಉನ್ನತ ಕುಲಕ್ಕೇರಿಸಿದ ಶ್ರೀ ಜಗಜ್ಯೋತಿ ಬಸವಣ್ಣನವರು

Must Read

spot_img
- Advertisement -

ಜುಟ್ಟು ಕಟ್ಟಿ ಖಂಡದ ಸವಿ ಬಲ್ಲವರು
ದೇಹದ ಬೆವರಿನಿಂದ ಮಣ್ಣ್ ಹೊದ್ದು ಮಲಗಿದ್ದವರು
ವೈದಿಕಶಾಹಿಯಿಂದ ಕಾಯವ ದಂಡಿಸಿಸಿದವರು ,
ಶೂದ್ರನಿಂದ ಹೊರ ಬಿದ್ದು ಅಸ್ಪೃಶ್ಯತೆ ಅನುಭವಿಸಿದವರು
ಇಂದಿನ ಉನ್ನತ ಕುಲದ ಲಿಂಗಾಯತರು !

ಪ್ರಾಚೀನತೆ ಮತ್ತು ಆಧುನಿಕತೆ ಎರಡರಲ್ಲೂ ಕೂಡ ತುಂಬಾ ಬದಲಾವಣೆ ಆಗಿದೆ ,ಏನು ಆಗಿದೆ ವಸ್ತುಗಳಲ್ಲಿ ಮಾತ್ರ ಬದಲಾವಣೆ ಆಗಿದೆ ವಿನಃ ,ಹುಟ್ಟಿದ ಮನುಷ್ಯನ ಒಳಗೆ ಯಾವ ಬದಲಾವಣೆ ಆಗಿಲ್ಲ , ಆಗೋದು ಇಲ್ಲ ಕೂಡ.ಅದು ಭಾರತ ದೇಶದಲ್ಲಿ ಬದಲಾವಣೆಯ ಮಾತು ಸಾಧ್ಯವಿಲ್ಲ ಎಂದು ಕೆಲವು ವಿದ್ವಾಂಸರ ಅಭಿಪ್ರಾಯ ಕೂಡ , ಭವ್ಯ ಭಾರತ, ಜಾತ್ಯತೀತ ಭಾರತ, ಸಮಾನತೆ ಭಾರತ,ಏಕತೆಯ ಭಾರತ , ಮಾತೃತ್ವದ ಭಾರತ , ಇನ್ನು ಸಹೋದರತ್ವದ ಭಾರತ ಕೂಡ ಅನ್ವಯಿಸುತ್ತದೆ. ಪ್ರಸ್ತುತ ಸಮಯದಲ್ಲಿ ಸಮುದಾಯಗಳ ಮಧ್ಯೆ ನಡೆಯುವ ಜಾತಿ ಮತ ಪಂಥ ಧರ್ಮಗಳ ಕಿತ್ತಾಟ ಕರುನಾಡಿನಲ್ಲಿ ಉರಿ ಬೆಂಕಿಯಾಗಿ ಸಿಡಿಯುತ್ತಿದೆ.ಹಿಜಾಬ್,ಕೇಸರಿಶಾಲು, ಕಲ್ಲಂಗಡಿ ಹಣ್ಣು, ಹಲಾಲ್, ಹಿಂದೂ ಮುಸ್ಲಿಂ ಧಾರ್ಮಿಕ ಸಂಗಮದ ತೊಡಕು,ಈಗ ಬಂಗಾರದ ಮಾರಾಟದಲ್ಲಿ ಧರ್ಮ , ಬಸವಣ್ಣ, ಅಕ್ಕಮಹಾದೇವಿ, ಕನಕದಾಸರು ಹುಟ್ಟಿದ ಶರಣ ,ದಾಸರ ನಾಡಿನಲ್ಲಿ ಜಾತಿ ಮತ ಪಂಥ ಧರ್ಮಗಳ ನಡುವಿನ ಬೇಧವನ್ನು ಹೆಚ್ಚಾಗಿ ಬೆಳೆಸುವ ನಿಟ್ಟು ನೋಡಿದ್ರೆ ಭಾರತ ದೇಶ ಕೊನೆ ಹಂತದಲ್ಲಿ ಇದೆ ಎಂದು ಅನಿಸುತ್ತದೆ.ವೈದಿಕಶಾಹಿಯಲ್ಲಿ ಬ್ರಾಹ್ಮಣರು ಕೆಳ ಜಾತಿಯವರನ್ನು ನಿಂದಿಸಿದ್ರೆ ,ಇಂದು ಪ್ರಾಚೀನ ಕಾಲದಲ್ಲಿ ಶೂದ್ರರಾಗಿದ್ದ ಲಿಂಗಾಯತರು ಕೆಳ ವರ್ಗದವರನ್ನು ನಿಂದಿಸುತ್ತಿದ್ದಾರೆ, ಇದರಲ್ಲಿ ಬದಲಾವಣೆ ಆಗಿದೆ ಅಷ್ಟೇ,ಮತ್ತೇ ಪ್ರಾಚೀನ ಕಾಲಕ್ಕೆ ಹೋಗದೆ ಸಮಾನತೆಯಿಂದ ಬಾಳಬೇಕು ಬಾಳಿ ಪ್ರೀತಿಸಬೇಕು.

ಇನ್ನು ಬಸವಣ್ಣನವರ ಬಗ್ಗೆ ಕೊನೆಯಲ್ಲಿ ಮಾತನಾಡುವೆ ಏಕೆಂದರೆ ಲಿಂಗಾಯತರು ಬಸವಣ್ಣನವರ ತತ್ವಾದರ್ಶಗಳನ್ನು ಮಾರಿಬಿಟ್ಟಿದ್ದಾರೆ , ಇನ್ನು ಕರ್ನಾಟಕದಲ್ಲಿ ನೂರಾರು ಮಠಗಳು ಇವೆ , ಮಠಗಳು ಎಂದರೆ ದೇವಾಲಯ ಎಂದಂತೆ ಎಂದು ನಂಬುವ ನಾವು ಜಾತಿಯ ಕುಟೀರಗಳು ಎಂದು ಹೇಳಬಹುದು , ಹೋಗಲಿ ಬಿಡಿ ಏನು ಹೇಳಿದ್ರು ಇಲ್ಲಿ ತಪ್ಪು ಹೇಳಿದ್ದಂತೆ ,ನಾನು ನೋಡಿದಂತೆ ಲಿಂಗಾಯತ ಮಠಗಳು ತುಂಬಾ ಇವೆ ಆದ್ರೆ ಕೆಲವು ಮಠಗಳ ಬಗ್ಗೆ ಮಾತ್ರ ಮಾತನಾಡುವೆ, ಪೀಠಗಳು ಯಾವುದೇ ರೀತಿಯ ಸಮಾನತೆ ಸಾರುತ್ತಿಲ್ಲ ಜಾತಿಯನ್ನು ಎತ್ತಿಹಿಡಿಯುವ ಕಾರ್ಯಕ್ಕೆ ಚಾಲನೆ ನೀಡುತ್ತಿರುವರು , ಬಸವಣ್ಣನವರ ಭಾವಚಿತ್ರಗಳು ಮಾತ್ರ ಗೋಡೆಗೆ ಸೀಮಿತವಾಗಿವೆ ,ಆದರೆ ಬಸವಣ್ಣನವರ ತತ್ವಗಳು ಮಾತ್ರ ಬೀದಿಗೆ ಬಿದ್ದಿವೆ.ನೀರು ಕೇಳಿದ್ರೆ ಯಾವ ಜಾತಿ ಲಿಂಗಾಯಿತರೇ ಎಂದು ಕೇಳುವರು ,ಕೆಳ ವರ್ಗದವ ಲಿಂಗಾಯತ ಜಾತಿಯ ಹುಡುಗಿಯನ್ನು ಮದುವೆಯಾಗಲು ಕೇಳಿದ್ರೆ ಕೀಳು ಜಾತಿಯವನು ನೀನು ನಿನಗೆ ಹೆಣ್ಣು ಕೊಡಬೇಕ ಎಂದು ಕೀಳಾಗಿ ಮಾತನಾಡುವರು , ಅದಕ್ಕೂ ಮೀರಿ ಮದುವೆ ಆದ್ರೆ ಜೀವದ ಬೆದರಿಕೆ ಹಾಕಿ ,ಸಾಯಿಸೇ ಬಿಡುವರು ,ನನಗೆ ಈಗಲೂ ಅರ್ಥವಾಗುತ್ತಿಲ್ಲ ಬಸವಣ್ಣನವರು ಭೋದಿಸಿದ ತತ್ವಗಳು ಏನು ಶೂದ್ರರಾಗಿ ಇದ್ದವರನ್ನು ಇಂದು ಉನ್ನತವಾಗಿ ಬದುಕುವಂತೆ ಮಾಡಿದ ಅವರನ್ನೇ ಇಂದು ಫೋಟೋದಲ್ಲೇ ಮುಳುಗಿಸಿ ಬಿಟ್ಟಿದ್ದಾರೆ , ಅಯ್ಯೋ ಹೋಗಲಿ ಬಿಡಿ ಅರ್ಥವಿಲ್ಲದ ಜಾತಿಯಲ್ಲಿ ಅರ್ಥವಿದ್ದ ತತ್ವಗಳನ್ನು ಮೂಲೆ ಗುಂಪಾಗಿ ಮಾಡಿದ್ದಾರೆ.

- Advertisement -

ಈಗ ಬಸವಣ್ಣನವರ ಬಗ್ಗೆ ಮಾತನಾಡೋಣ , ಸಿದ್ಧಗಂಗಾ ಮಠದಲ್ಲಿ ಆರನೇ ತರಗತಿಯನ್ನು ಓದುತ್ತಿದ್ದಾಗ ಮಠದ ಆವರಣದಲ್ಲಿ ಬಸವಣ್ಣನವರ ಬಾಲ್ಯ ಜೀವನದ ಬಗ್ಗೆ ಚಲನಚಿತ್ರವನ್ನು ಹಾಕಿದ್ರು ಜನಿವಾರವ ಕಿತ್ತು ಶೂದ್ರಕೇರಿಗೆ ಓಡಿ ಬಂದ ಹುಡುಗನೇ ಇಂದಿನ ಜಗಜ್ಯೋತಿ ಬಸವೇಶ್ವರರು ಎಂದು ಜಾಸ್ತಿ ಓದಿ ತಿಳಿದಾಗ ಗೊತ್ತಾಯಿತು.”ಶುದ್ದಕೇರಿಯಿಂದ ಅಶುದ್ಧಕೇರಿಗೆ ಓಡಿ ಬಂದು ಹುಡುಗ ” ವೈದಿಕಶಾಹಿಯ ಕಾಲದಲ್ಲಿ ಅನುಭವಿಸಿದ ಎಷ್ಟೋ ಕಷ್ಟಗಳನ್ನು ಇಂದು ಮರೆತು ,ಇಂದು ಕೆಳ ಜಾತಿಯೆಂದು ಹೆಸರಿಸುವ ಕುಲಗಳನ್ನು ಕೀಳಾಗಿ ಕಾಣುವರು, ಬಸವಣ್ಣನವರ ವಚನಗಳು ,ಅವರು ನಡೆದ ದಾರಿ ಈಗ ಎಲ್ಲ ಮರೆಯಾಗಿ ಹೋಗುತ್ತಿದೆ,ಇದರ ಬಗ್ಗೆ ಮಾತನಾಡಿ ಮಾತನಾಡಿ ಏಕೆ ಸುಮ್ಮನೆ ಕೆಟ್ಟವನಾಗಿ, ಬಸವಣ್ಣನವರು ಲಿಂಗಾಯತ ಧರ್ಮಕ್ಕೆ ಮಾತ್ರ ಸೇರಿಲ್ಲ ಇಡೀ ವಿಶ್ವದ ಕಾಯಕಜ್ಯೋತಿ ಅವರು, ಪ್ರಪಂಚದ ಶರಣರು ದಾರ್ಶನಿಕರು ಅವರು.

ಎಂಟನೇ ಶತಮಾನದಲ್ಲಿ ವೈದಿಕ ಶಾಹಿ ಅತ್ಯಂತ ಪ್ರಬಲ ಶಾಲಿಯಾಗಿದ್ದ ಕಾಲವದು , ಬ್ರಾಹ್ಮಣ, ಕ್ಷತ್ರೀಯ, ವೈಶ್ಯ, ಶೂದ್ರರೆಂಬ ಚುತುರ್ವಣಗಳನ್ನು ಮಾಡಿಕೊಂಡು ಈ ನಾಲ್ಕು ವರ್ಣದಿಂದ ಹೊರಗಿರುವವರನ್ನು ಅಸ್ಪೃಶ್ಯತೆರೆಂದು ಕರೆದರು ಆದರೆ ನಿಕೃಷ್ಟವಾಗಿ ಕಾಣುತ್ತಿದ್ದ ಕಾಲವದು , ಆಗ ಬಸವಣ್ಣನವರು ಶೂದ್ರರಿಗೆ ಇಷ್ಟಲಿಂಗ ದೀಕ್ಷೆಯನ್ನು ಕೊಟ್ಟು ಲಿಂಗವಂತವರಾಗಿ ಮಾಡಿದರು , ಮಾಡಿದ್ದಕ್ಕೆ ಇಂದು ಉನ್ನತರಾಗಿ ಜೀವನ ಮಾಡುತ್ತಿರುವರು.ಲಿಂಗಾಯಿತರು ಎಂದರೆ ಜಾತಿಯತೆ , ಅಸಮಾನತೆ, ಅಸ್ಪೃಶ್ಯತೆ , ಮತ್ತು ಶೋಷಣೆ ವಿರುದ್ಧ ಲಿಂಗಾಯತ ಧರ್ಮವು ಸಮಾನತೆ ಸಾರುತ್ತಾ ಭ್ರಾತೃತ್ವ ಮತ್ತು ಸಾಮಾಜಿಕ ನ್ಯಾಯಕ್ಕಾಗಿ ಸಮಾನ ಹಕ್ಕುಗಳನ್ನು , ತತ್ವಗಳನ್ನು, ಎತ್ತಿ ಹಿಡಿಯುವ ಮೂಲಕ ತುಳಿತಕ್ಕೆ ಒಳಗಾದ ದೀನ ದಲಿತರಿಗೆ ,ಸಹಾಯ ಮಾಡಿ ಸಮಾನತೆ ಸಾರುವ ಧರ್ಮವನ್ನು ಬಸವಣ್ಣನವರು ಶರಣರ ಶತಮಾನದಲ್ಲಿ ಸ್ಥಾಪಿಸಿದರು ಆದರೆ ಇಂದು ಯಾವ ತತ್ವಗಳು ಉಳಿದಿಲ್ಲ ಅಂದಿನ ಬ್ರಾಹ್ಮಣನರಂತೆ ಇಂದಿನ ಲಿಂಗಾಯತರು ಮಾಡುತ್ತಿರುವರು.

ಅಯ್ಯೋ ಬಿಡಿ ಸ್ವಾಮಿ ಕಲ್ಲಿನ ಮೇಲೆ ಎಷ್ಟೇ ನೀರು ಹಾಕಿದ್ರು ವ್ಯರ್ಥ ಅದು , ಇನ್ನು ನಾವೆಲ್ಲರೂ ಬಸವ ಜಯಂತಿಯನ್ನು ವಿಜೃಂಭಣೆಯಿಂದ ಆಚರಣೆ ಮಾಡುತ್ತೇವೆ , ನಮ್ಮ ಮನೆಯಲ್ಲಿ ಇರುವ ಎತ್ತು , ಹಸುಗಳನ್ನು ಸ್ನಾನ ಮಾಡಿಸಿ ಕೊಂಬುಗಳಿಗೆ ಬಣ್ಣ ಬಳಿದು ಎತ್ತುಗಳನ್ನು ಅಲಂಕಾರಿಸಿ , ಮನೆಯಲ್ಲಿ ಹೋಳಿಗೆ ತಯಾರಿಸಿ , ಹಣ್ಣು, ತೆಂಗಿನಕಾಯಿ , ಹೂವುಗಳಿಂದ ಪೂಜಿಸಿ , ಎತ್ತುಗಳಿಗೆ ಬಾಳೆಹಣ್ಣು , ಹೋಳಿಗೆಯನ್ನು ತಿನ್ನಿಸುತ್ತಿದ್ದೀವಿ , ಎತ್ತುಗಳನ್ನು ಹಿಡಿದುಕೊಂಡು ಊರೆಲ್ಲಾ ಸುತ್ತಿ ಬರುತ್ತಿದ್ದೀವಿ ಮಾನವನಿಗೆ ಇರುವ ಜಾತಿ ಮೂಕ ಪ್ರಾಣಿಯಾದ ಎತ್ತುಗಳಿಗೆ ಇಲ್ಲ , ಪ್ರೀತಿಯಿಂದ ಸಾಕಿದ ಮಾಲೀಕರಿಗೆ ಸಾಯೋವರಿಗೂ ಹೆಗಲು ಕೊಡುವ ದೈವಗಳು ಅವು ಆದರೆ ಮಾನವ ಜಾತಿ ಮತ ಪಂಥ ಧರ್ಮಗಳಿಂದು ದೂರನೇ ಇರೋಲ್ಲ ಇನ್ನು ಬೆಂಕಿ ಹಚ್ಚುವರು. ಅದಕ್ಕೆ ಮೂಕ ಪ್ರಾಣಿಗಳನ್ನು ಬಸವಣ್ಣನವರಿಗೆ ಹೋಲಿಸಿ ಪೂಜಿಸುವರು ,ಜಾತಿ ಮತ ಪಂಥ ಧರ್ಮಗಳ ಭೇದವಿಲ್ಲದೆ ಭೂಮಿ ಹಸಿವು ನೀಗಿಸಲು ಫಸಲನ್ನು ಕೊಡುತ್ತದೆ ಆದ್ರೆ ಭೂಮಿಯ ಸ್ಪರ್ಶವನ್ನು ಪಡೆಯುವ ಮನುಷ್ಯ ಏಕೆ ಹೀಗೆ ಕುಲ ಕುಲವೆಂದು ಸಾಯುತ್ತಿರುವನು ನನಗೆ ಇನ್ನು ಅರ್ಥವಾಗಿಲ್ಲ , ಬಿಎಂಟಿಸಿ ಡ್ರೈವರ್ ನಟರಾಜ್ ಅವರೇ ಬದಲಾಗಿ ಸತ್ತ ಮೇಲೆ ಯಾವುದೇ ರೀತಿಯ ಜಾತಿ ಬರೋಲ್ಲ , ಕೆಲವು ತಮ್ಮದೇ ಜಾತಿಯ ಸಂಬಂಧಿಗಳು ನಿಮಗೆ ಮಣ್ಣು ಹಾಕುವುದಿಲ್ಲ , ಎಲ್ಲರಿಗೂ ಜೀವ ಒಮ್ಮೆನೇ ಬರೋದು ನಿಮಗೆ ಮಾತ್ರ ಎರಡು ಮೂರು ಸಲ ಬರೋಲ್ಲ ನಿಮಗೂ ಕೂಡ ಜೀವನ ಆಗಲಿ ಜೀವ ಕೂಡ ಒಂದೇ ಸಲ ಬರೋದು ಅರ್ಥ ಮಾಡಿಕೊಂಡು ಬಾಳಿ‌, ಎಲ್ಲರಿಗೂ ಬಸವ ಜಯಂತಿ ಹಬ್ಬದ ಶುಭಾಶಯಗಳು.

ಜೈ ಹಿಂದ್.


- Advertisement -

ಭೋವಿ ರಾಮಚಂದ್ರ
ಹರಪನಹಳ್ಳಿ
8861588118.

- Advertisement -
- Advertisement -

Latest News

ಶರಣರ ಚರಿತ್ರೆ ಆಲಿಸುವದರಿಂದ ಜೀವನ ಪಾವನ; ಹಂಗರಗಿ

ಸಿಂದಗಿ: ಪುರಾಣ ಎಂಬುದು ಪುಂಡರಗೋಷ್ಠಿಯಲ್ಲ ಪುರಾಣ ಎಂದರೆ ಅಧ್ಯಾತ್ಮ ಶರಣರ ಬದುಕಿನ ಅರ್ಥ ತಿಳಿದುಕೊಂಡು ಅವರ ಹಾದಿಯಲ್ಲಿ ಸಾಗುವ ನಡೆ ಕಲಿಸುವ ಧರ್ಮದ ಪಾಠಶಾಲೆ ಇದ್ದಂತೆ...
- Advertisement -

More Articles Like This

- Advertisement -
close
error: Content is protected !!
Join WhatsApp Group