spot_img
spot_img

ಶುಕ್ರವಾರ ೨೭ ರಂದು ಶ್ರೀ ಆರ್ಥೋಪೆಡಿಕ್ ಆಸ್ಪತ್ರೆ ಲೋಕಾರ್ಪಣಾ ಸಮಾರಂಭ

Must Read

ಸವದತ್ತಿಃ ಪಟ್ಟಣದ ಶಿವಾಜಿ ವೃತ್ತದ ಬಳಿಯಿರುವ ಡಾ.ಹೇಮಂತ ಭಸ್ಮೆಯವರ ನೂತನ ಶ್ರೀ ಆರ್ಥೋಪೆಡಿಕ್ ಆಸ್ಪತ್ರೆ ಲೋಕಾರ್ಪಣಾ ಸಮಾರಂಭ ಇದೇ ಮೇ ೨೭ ಶುಕ್ರವಾರ ರಂದು ನಡೆಯಲಿದೆ.

ಈ ಸಮಾರಂಭದಲ್ಲಿ ದಿವ್ಯ ಸಾನ್ನಿಧ್ಯವನ್ನು ಬಿದರಿ ಮತ್ತು ಸವದತ್ತಿ ಕಲ್ಮಠದ ಪರಮಪೂಜ್ಯ ಶಿವಲಿಂಗ ಸ್ವಾಮಿಗಳು. ಮುನವಳ್ಳಿ ಭಂಡಾರಹಳ್ಳಿಯ ಸೋಮಶೇಖರ ಮಠದ ಪರಮಪೂಜ್ಯ ಮುರುಘೇಂದ್ರ ಮಹಾಸ್ವಾಮಿಗಳು. ಹೂಲಿ ಅಜ್ಜನ ಮಠದ ಷಟ್‌ಸ್ಥಳ ಬ್ರಹ್ಮ ಉಮೇಶ ಅಜ್ಜನವರು. ಸವದತ್ತಿ ಮೂಲಿಮಠದ ಮ.ಘ.ಚ. ಶ್ರೀ ಮಲ್ಲಿಕಾರ್ಜುನ ಶಿವಾಚಾರ್ಯ ಮಹಾಸ್ವಾಮಿಗಳು. ರಬಕವಿಯ ಬ್ರಹ್ಮಾನಂದ ಆಶ್ರಮದ ಪ.ಪೂ.ಶ್ರೀ ಗುರು ಸಿದ್ದೇಶ್ವರ ಮಹಾಸ್ವಾಮಿಗಳು. ಸವದತ್ತಿ ಗೊರವನಕೊಳ್ಳದ ಬ್ರಹ್ಮಾನಂದ ಆಶ್ರಮದ ಪ.ಪೂ.ಶ್ರೀ ಶಿವಾನಂದ ಮಹಾಸ್ವಾಮಿಗಳು.ಬೆಟಸೂರಮಠದ ವೇದಮೂರ್ತಿ ಅಜ್ಜಯ್ಯ ಮಹಾಸ್ವಾಮಿಗಳು.ಗುರ್ಲಹೊಸೂರಿನ ಚಿದಂಬರೇಶ್ವರ ಮಠದ ಪ.ಪೂ.ಶ್ರೀ ದಂಡಪಾಣಿ ದೀಕ್ಷಿತರು. ಬಳ್ಳಾರಿಯ ಪರಮಪೂಜ್ಯ ಶ್ರೀ ಬಳ್ಳಾರಿ ಅಜ್ಜನವರು ದಿವ್ಯಸಾನ್ನಿಧ್ಯದಲ್ಲಿ ಸವದತ್ತಿ ಮತಕ್ಷೇತ್ರದ ಶಾಸಕರು ಹಾಗೂ ವಿದಾನಸಭಾ ಉಪಸಭಾಧ್ಯಕ್ಷರಾದ ಆನಂದ ಮಾಮನಿ ಉದ್ಘಾಟಿಸುವರು.

ಈ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಬೆಳಗಾವಿ ಲೋಕಸಭಾ ಸದಸ್ಯರಾದ ಶ್ರೀಮತಿ ಮಂಗಳ ಅಂಗಡಿ ಉಪಸ್ಥಿತರಿರುವರು.

ಅತಿಥಿಗಳಾಗಿ ತಹಶೀಲ್ದಾರ ಪ್ರಶಾಂತ ಪಾಟೀಲ, ಪಿ.ಎಲ್.ಡಿ.ಬ್ಯಾಂಕ ಅಧ್ಯಕ್ಷರಾದ ಜಗದೀಶ ಶಿಂತ್ರಿ., ಪುರಸಭೆ ಅಧ್ಯಕ್ಷರಾದ ರಾಜಶೇಖರ ಕಾರದಗಿ, ಉಪಾಧ್ಯಕ್ಷರಾದ ದೀಪಕ ಜಾನ್ವೇಕರ, ಗಣ್ಯ ವರ್ತಕರಾದ ವಿಶ್ವಾಸ ವೈದ್ಯ, ಡಿ.ಸಿ.ಸಿ.ಬ್ಯಾಂಕ್ ನಿರ್ದೇಶಕರಾದ ಪಂಚನಗೌಡ ದ್ಯಾಮನಗೌಡ, ಗಣ್ಯ ವ್ಯಾಪಾರಸ್ಥರಾದ ಬಸವರಾಜ ಕಾರದಗಿ, ಸಹಪ್ರಾಂತ ಸೇವಾ ಪ್ರಮುಖರಾದ ನರಸಿಂಹ ಕುಲಕರ್ಣಿ ಉಪಸ್ಥಿತರಿರುವರು.

ಈ ಆಸ್ಪತ್ರೆಯ ಸಂದರ್ಶಕ ವೈದ್ಯರಾದ ಹುಬ್ಬಳ್ಳಿಯ ಶ್ರೀ ಬಾಲಾಜಿ ಆಸ್ಪತ್ರೆಯ ಡಾ.ಹರಿಕೃಷ್ಣಾ ಎಂ. ಹಾಗೂ ಬೆಂಗಳೂರು ಅಪೋಲೋ ಆಸ್ಪತ್ರೆಯ ಡಾ.ಅಜೀತ.ಕ.ಪ್ರಭು ಉದ್ಘಾಟನಾ ಸಮಾರಂಭದಲ್ಲಿ ಉಪಸ್ಥಿತರಿರುವ ರು ಎಂದು ಡಾ.ಹೇಮಂತ್ ಭಸ್ಮೆ. ಡಾ.ನಯನಾ ಭಸ್ಮೆ.ಶ್ರೀಮತಿ ಮಹಾನಂದಾ ಭಸ್ಮೆ ಕುಟುಂಬದವರು ಪ್ರಕಟಣೆಯಲ್ಲಿ ತಿಳಿಸಿರುವರು.

- Advertisement -
- Advertisement -

Latest News

ಕವಿ ನಾಗೇಶ್ ನಾಯಕಗೆ ಜಿಲ್ಲಾ ಸಾಹಿತ್ಯ ಪ್ರತಿಷ್ಠಾನದ ದತ್ತಿ ಪ್ರಶಸ್ತಿ ಪ್ರದಾನ

ಸವದತ್ತಿಃ ಸಮೀಪದ ಉಡಿಕೇರಿಯ ರಾಮಲಿಂಗೇಶ್ವರ ಪ್ರೌಢಶಾಲೆಯ ಕವಿ, ಶಿಕ್ಷಕ ನಾಗೇಶ್ ಜೆ. ನಾಯಕ ಅವರಿಗೆ ಇತ್ತೀಚೆಗೆ ಬೆಳಗಾವಿ ಹಿಂದವಾಡಿಯ ಐ.ಎಂ.ಇ.ಆರ್. ಸಭಾಭವನದಲ್ಲಿ ಜರುಗಿದ ಬೆಳಗಾವಿ ಜಿಲ್ಲಾ...
- Advertisement -

More Articles Like This

- Advertisement -
close
error: Content is protected !!