ಮೂಡಲಗಿ – ಭಾವೈಕತೆಗೆ ಹೆಸರಾಗಿರುವ ಇಲ್ಲಿಯ ಆರಾಧ್ಯ ದೈವ ಶ್ರೀ ಶಿವಬೋಧಸ್ವಾಮಿಗಳ ಪುಣ್ಯ ತಿಥಿ, ಜಾತ್ರಾ ಮಹೋತ್ಸವವು ಏ. 29 ರಿಂದ ಮೇ.3 ರವರೆಗೆ ನಡೆಯಲಿದೆ ಎಂದು ಪೀಠಾಪತಿಗಳಾದ ಶ್ರೀ ದತ್ತಾತ್ರೇಯಬೋಧ ಸ್ವಾಮೀಜಿ ಹಾಗೂ ಶ್ರೀ ಶ್ರೀಧರಬೋಧ ಸ್ವಾಮೀಜಿಗಳು ತಿಳಿಸಿದ್ದಾರೆ.
ಏ.29 ರಂದು ರಾತ್ರಿ 9 ಗಂಟೆಯಿಂದ ಭಕ್ತರಿಂದ ದೀಡ ನಮಸ್ಕಾರ (ಉರುಳು) ಸೇವೆ ಸಲ್ಲಿಸುವರು.
ಏ.30 ರಂದು ಮಧ್ಯಾಹ್ನ 12 ಗಂಟೆಗೆ ಶ್ರೀ ಶಿವಬೋಧಸ್ವಾಮಿಗಳ ಪಲ್ಲಕ್ಕಿಯ ಉತ್ಸವವು ಸಕಲ ವಾದ್ಯ ವೃಂದಗಳೊಂದಿಗೆ ವಿಜೃಂಭಣೆಯಿಂದ ಮೇಲಿನ ಮಠದಿಂದ ಕೆಳಗಿನ ಮಠಕ್ಕೆ ಹೋಗುವದು. ಮಧ್ಯಾಹ್ನ 3-30 ರಿಂದ 4-30 ರ ವರೆಗೆ ಗುರುಮಂಡಲ ಪೂಜಾ ಹಾಗೂ ವಸಂತ ಪೂಜೆ, ಸಂಜೆ 4.30ರಿಂದ ಮಹಾ ಪ್ರಸಾದ ಪ್ರಾರಂಭವಾಗುವದು. ರಾತ್ರಿ 9.30ರಿಂದ ಕೆಳಗಿನ ಮಠದಲ್ಲಿ ಪಲ್ಲಕ್ಕಿ ಸೇವೆ ಹಾಗೂ ಮಂತ್ರ ಪುಷ್ಪ ನಡೆಯುವದು.
ಮೇ. 01 ರಂದು ಕೆಳಗಿನ ಮಠದಲ್ಲಿ ವೈದಿಕರಿಂದ ವಿವಿಧ ಪಾರಾಯಣಗಳು ನಡೆಯುವದು. ಮಧ್ಯಾಹ್ನ 11ಕ್ಕೆ ಕೆಳಗಿನ ಮಠದಲ್ಲಿ ಮಹಾಪ್ರಸಾದ. ಮಧ್ಯಾಹ್ನ 4ರಿಂದ ವಿವಿಧ ಕಲಾವಿದರಿಂದ ಸಂಗೀತ ಕಾರ್ಯಕ್ರಮಗಳು ರಾತ್ರಿ 10ರವರೆಗೆ ನಡೆಯುವವು. ಕೆಳಗಿನ ಮಠದಲ್ಲಿ ರಾತ್ರಿ 10ರಿಂದ ಪಲ್ಲಕ್ಕಿ ಸೇವೆ ನಡೆಯುವದು.
ಮೇ.02 ರಂದು ಕೆಳಗಿನ ಮಠದಲ್ಲಿ ವೈದಿಕರಿಂದ ವಿವಿಧ ಪಾರಾಯಣಗಳು ನಡೆಯುವದು. ಮುಂಜಾನೆ 11ರಿಂದ ಮಹಾ ಪ್ರಸಾದ ನಂತರ ಭಕ್ತರಿಂದ ಶ್ರೀಫಲ, ಸಕ್ಕರೆ ಹಂಚುವದು. ಮಧ್ಯಾಹ್ನ 4 ಗಂಟೆಯಿಂದ ವಿವಿಧ ಕಲಾವಿದರಿಂದ ವಿವಿಧ ಪ್ರಕಾರದ ಸಂಗೀತ ಸೇವೆ ರಾತ್ರಿ 10ಗಂಟೆಯವರೆಗೆ ಜರುಗುವದು.
ಮೇ. 03 ರಂದು ಬೆಳ್ಳಿಗ್ಗೆ 3ಗಂಟೆಯಿಂದ ಶ್ರೀಗಳವರ ಪಲ್ಲಕ್ಕಿ ಸಕಲ ವಾದ್ಯ ವೃಂದ ಹಾಗೂ ಸಂಗೀತ ಸೇವೆಗಳೊಂದಿಗೆ ಮುಂಜಾನೆ 5 ಗಂಟೆಗೆ ಮರಳಿ ದೇವಸ್ಥಾನಕ್ಕೆ ಬಂದ ಮೇಲೆ ಆರತಿ ಮಾಡಿ ಕೀರ್ತನ ಮತ್ತು ಲಲಿತದ ನಂತರ ಶ್ರೀಗಳಿಂದ ಭಕ್ತರಿಗೆ ಮಂತ್ರಾಕ್ಷತೆ ಹಾಗೂ ಬೇಳೆ ಬೆಲ್ಲ ವಿತರಣೆ ಜೊತೆಗೆ ಉತ್ಸವ ಮಂಗಲಗೊಳ್ಳುವದು.