spot_img
spot_img

ಶ್ರೀ ವ್ಯಾಸರಾಜ ಪ್ರತಿಷ್ಠಾಪಿತ ಹೊಳೆಹೊನ್ನೂರು ಆಂಜನೇಯ ಸ್ವಾಮಿ

Must Read

ಉತಾರಾಧಿ ಮಠಾಧೀಶ್ವರ ಶ್ರೀ ಶ್ರೀ 1008 ಸತ್ಯಾತ್ಮ ತೀರ್ಥ ಶ್ರೀ ಪಾದಂ ಗಳವರ ಅಮೃತ ಹಸ್ತದಿಂದ ಪುನರ್ ಪ್ರತಿಷ್ಠಾಪನೆ

ಹೊಳೆಹೊನ್ನೂರು – ಮುಕ್ಕೋಟಿ ದೇವರನ್ನು ಪೂಜಿಸುವಂತಹ ಹಿಂದೂ ಧರ್ಮದಲ್ಲಿ ಆಂಜನೇಯ ದೇವರನ್ನು ತುಂಬಾ ವಿಶೇಷವಾಗಿ ಪೂಜಿಸಲಾಗುತ್ತದೆ. ಅದರಲ್ಲೂ ಬ್ರಹ್ಮಚಾರಿಯಾಗಿರುವ ಆಂಜನೇಯಸ್ವಾಮಿಯನ್ನು ಹೆಚ್ಚಾಗಿ ಅವಿವಾಹಿತ ಮಹಿಳೆಯರು ಮತ್ತು ಪುರುಷರು ಪೂಜಿಸುವರು. ಹನುಮಂತ ದೇವರು ಬೇಡಿದ ವರವನ್ನು ನೀಡುವವನು ಎನ್ನುವ ಅಚಲ ನಂಬಿಕೆ ಭಕ್ತರಲ್ಲಿ.

ಸನ್ಯಾಸಿಯಾಗಿದ್ದುಕೊಂಡು ವಿಜಯನಗರ ಸಾಮ್ರಾಜ್ಯವನ್ನು ಆಳಿದ ಯತಿ ಶ್ರೀ ವ್ಯಾಸರಾಜರು ಲೋಕ ಕಲ್ಯಾಣಾರ್ಥ ಭಾರತದಾದ್ಯಂತ 734 ಸ್ಥಳಗಳಲ್ಲಿ ಆಂಜನೇಯ ಮೂರ್ತಿ ಪ್ರತಿಷ್ಠಾಪಿಸಿದ್ದರು. ಶ್ರೀ ವ್ಯಾಸರಾಜರು ಪ್ರತಿಷ್ಠಾಪಿಸಿದ್ದ ಶ್ರೀ ಆಂಜನೇಯಸ್ವಾಮಿ ದೇವಸ್ಥಾನ ಮಲೆನಾಡಿನ ಶಿವಮೊಗ್ಗದಿ೦ದ ( ಸಿಹಿಮೊಗ್ಗೆ) 19 ಕಿ.ಮಿ. ಪರಿಕ್ರಮಿಸಿದರೆ ತು೦ಗ – ಭದ್ರ ನದಿಯ ಸ೦ಗಮ ಕ್ಷೇತ್ರ ಕೂಡಲಿ.ಅಲ್ಲಿ೦ದ ಕೇವಲ ಒಂದು ಕಿ.ಮೀ. ಸಾಗಿದರೆ ಸಿಗುವ ಶ್ರೀ ಕ್ಷೇತ್ರ ಶ್ರೀ ವ್ಯಾಸರಾಜ ಪ್ರತಿಷ್ಠಿತ ಹೊಳೆಹೊನ್ನೂರು ಶ್ರೀ ಮುಖ್ಯ ಪ್ರಾಣ ದೇವರ ಸನ್ನಿಧಾನ. ಅಲ್ಲಿ ಮೇ 18 ಮತ್ತು 19 ರಂದು ಪುನರ್ ಪ್ರತಿಷ್ಠಾಪನಾ ಮಹೋತ್ಸವ ವಿಜೃಂಭಯಿಂದ ನೆರವೇರಿತು.

ಶ್ರೀ ವ್ಯಾಸರಾಜರಿಂದ ಪ್ರತಿಷ್ಠೆ ಆಗಿರುವ ಹೊಳೆಹೊನ್ನೂರು ಪಟ್ಟಣದ ಬ್ರಾಹ್ಮಣರ ಬೀದಿಯ ಶ್ರೀ ಆಂಜನೇಯ ಸ್ವಾಮಿ ಸನ್ನಿಧಾನದಲ್ಲಿ ಪಟ್ಟಣದ ಬ್ರಾಹ್ಮಣರ ಬೀದಿಯ ಶ್ರೀ ಆಂಜನೇಯ ಸ್ವಾಮಿ , ನವಗ್ರಹ ದೇವರ ಪುನರ್ ಪ್ರತಿಷ್ಠಾಪನೆ , ನೂತನ ಕಟ್ಟಡ ಉದ್ಘಾಟನೆ ಕಾರ್ಯಕ್ರಮಗಳು ವಿಜೃಂಭಣೆಯಿಂದ ಮೇ 18 ಮತ್ತು 19 ರಂದು ನೆರವೇರಿದವು.

ವಿಶೇಷ ಹೂವಿನ ಅಲಂಕಾರ:

ಶ್ರೀ ಕ್ಷೇತ್ರ ಶ್ರೀ ವ್ಯಾಸರಾಜ ಪ್ರತಿಷ್ಠಿತ ಹೊಳೆಹೊನ್ನೂರು ಶ್ರೀ ಮುಖ್ಯ ಪ್ರಾಣ ದೇವರ ಸನ್ನಿಧಾನ ಅಲ್ಲಿ ಮೇ 18 ಮತ್ತು 19 ರಂದು ಪುನರ್ ಪ್ರತಿಷ್ಠಾಪನಾ ಮಹೋತ್ಸವ ಪ್ರಯುಕ್ತ ಶ್ರೀ ಸ್ವಾಮಿಗೆ ವಿಶೇಷ ಹೂವಿನ ಅಲಂಕಾರವನ್ನು ಮಾಡಲಾಗಿತ್ತು

ಅನುಗ್ರಹ ಸಂದೇಶ:

ಮೇ 19 ರಂದು ಮುಂಜಾನೆ 5.30 ಕ್ಕೆ ಸುಪ್ರಭಾತ , ಬೆಳ್ಳಿಗ್ಗೆ 9 ಕ್ಕೆ ಶ್ರೀ ಸತ್ಯಧರ್ಮತೀರ್ಥ ಶ್ರೀ ಪಾದಂಗಳವರ ಸನ್ನಿಧಾನದಲ್ಲಿ ಪಾದ- ಪೂಜೆ – ಆಜ್ಞಾ ಸ್ವೀಕಾರ, 9. 15 ಕ್ಕೆ ಗಂಗಾ ಪೂಜೆ , ಗಣಪತಿ ಪೂಜೆ, ಕಲಶ ಸ್ಥಾಪನೆ, ಬಿಂಬ ಅವಾಹನ, ಪ್ರತಿಷ್ಟಾಂಗ ಹೋಮ, ಸಂಜೆ 5. 30 ಕ್ಕೆ ಶ್ರೀ ಶ್ರೀ ಸತ್ಯಾತ್ಮ ತೀರ್ಥ ಶ್ರೀ ಪಾದಂಗಳವರ ಆಗಮನ, ಪೂರ್ಣ ಕುಂಭ ಸ್ವಾಗತ ಹಾಗು ಅನುಗ್ರಹ ಸಂದೇಶ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಮೇ 20 ರಂದು ಬೆಳ್ಳಿಗ್ಗೆ 9. 30 ಕ್ಕೆ ಪುನರ್ ಪ್ರತಿಷ್ಠಾಪನೆ ಹಾಗು ಪ್ರಧಾನ ಗೋಪುರ ಕಳಶ ಸ್ಥಾಪನೆ , 10. 30 ಕ್ಕೆ ಪಂಚಾಮೃತ ಅಭಿಷೇಕ , ಮಧ್ಯಾಹ್ನ 12 ಕ್ಕೆ, ಶ್ರೀ ಮೂಲ ದಿಗ್ವಿಜಯರಾಮ ಮಹಾಸಂಸ್ಥಾನ ಪೂಜೆ, ತೀರ್ಥ ಪ್ರಸಾದ , ಸಂಜೆ 4. 30 ಕ್ಕೆ ಶ್ರೀಗಳ ಸಾನ್ನಿಧ್ಯದಲ್ಲಿ ಸಮಾರೋಪ ಅನುಗ್ರಹ ಸಂದೇಶ ಮತ್ತು ಸೇವಾಕರ್ತರಿಗೆ ಮಂತ್ರಾಕ್ಷತೆ ಪ್ರದಾನ ಕಾರ್ಯಕ್ರಮಗಳು ಏರ್ಪಡಿಸಲಾಗಿತ್ತು.

ಜೀರ್ಣೋದ್ಧಾರ – ಇತಿಹಾಸ

ಈ ಪುರಾತನ ದೇವಾಲಯದ ಕೆಲವೊಂದು ಭಾಗವು ಶಿಥಿಲವಾದ ಕಾರಣ ಸುತ್ತಮುತ್ತಲಿನ ಗ್ರಾಮದ ಭಕ್ತಾದಿಗಳು ಹಾಗೂ ದಾನಿಗಳ ಸಹಕಾರದಿಂದ ೨೦೨೦ ನೇ ಇಸವಿಯಲ್ಲಿ ಜೀರ್ಣೋದ್ಧಾರ ಕಾರ್ಯ ಆರಂಭ ಮಾಡಿ ಎಲ್ಲರ ಸಹಕಾರದಿಂದ ರಾಜ ಗೋಪುರವು ನಿರ್ಮಾಣ ಮಾಡಿ ಉತ್ತರಾದಿ ಮಠಾಧೀಶ್ವರರಾದ ಶ್ರೀ ಶ್ರೀ 1008 ಸತ್ಯಾತ್ಮ ತೀರ್ಥ ಶ್ರೀ ಪಾದಂಗಳವರವರು ರಾಜಗೋಪುರದ ಉದ್ಘಾಟನೆ ಮಾಡಿ ಲೋಕಾರ್ಪಣೆ ಮಾಡಿದರು, ದೇವಾಲಯದ ಇನ್ನೂ ಅನೇಕ. ಅಭಿವೃದ್ಧಿ ಕಾರ್ಯಗಳು ನಡೆಯಬೇಕಾಗಿವೆ.

ಶ್ರೀ ಪ್ರಾಣ ದೇವರ ವಿಗ್ರಹವು 5 ಅಡಿ ಎತ್ತರವಿದೆ, ಎಡಕ್ಕೆ ಮುಖ ಮಾಡಿ ಬಲಗೈಯಲ್ಲಿ ಅಭಯ ನೀಡುತ್ತಿದ್ದು , ಎಡಗೈಯಲ್ಲಿ ಸೌಗಂಧಿಕ ಪುಷ್ಪ ಹಿಡಿದು ನಿಂತಿರುವ ಶ್ರೀ ಸ್ವಾಮಿಯನ್ನು ವ್ಯಾಸರಾಜ ರಿಂದ ಪ್ರತಿಷ್ಠಾಪನೆ ಮಾಡಿದ್ದು .ಈ ಸ್ವಾಮಿಯ ವಿಶೇಷವಾಗಿದೆ ಹಾಗು ಉತ್ತರಾದಿ ಮಠಾಧೀಶ್ವರರಾದ ಶ್ರೀ ಶ್ರೀ 1008 ಸತ್ಯಾತ್ಮ ತೀರ್ಥ ಶ್ರೀ ಪಾದಂ ಗಳವರ ಅಮೃತ ಹಸ್ತದಿಂದ ಪುನರ್ ಪ್ರತಿಷ್ಠಾಪನೆ ಮೇ 19 ರ ಇಂದು ನೆರವೇರುತ್ತಿರುವುದು ಬಹಳ ವಿಶೇಷ ಎನ್ನುತ್ತಾರೆ ಹೊಳೆಹೊನ್ನೂರಿನ ಉತಾರಾಧಿಮಠದ ಶ್ರೀನಿವಾಸಾಚಾರ್.

ಶ್ರೀ ವ್ಯಾಸರಾಜ ತೀರ್ಥ (1460-1539) : ದ್ವೈತ ತತ್ತ್ವಶಾಸ್ತ್ರದ ಪ್ರಮುಖ ಸಂತರಲ್ಲಿ ಒಬ್ಬರಾಗಿದ್ದಾರೆ ಮತ್ತು ಎಲ್ಲಾ ಮಠಾಧೀಶರ ಶ್ರೇಣಿಯಲ್ಲಿ ಉನ್ನತ ಸ್ಥಾನವನ್ನು ಪಡೆದಿದ್ದಾರೆ.

ಅವರು ಶ್ರೀ ಮಧ್ವಾಚಾರ್ಯ ಮತ್ತು ಜಯ ತೀರ್ಥರನ್ನು ಒಳಗೊಂಡ ‘ಮುನಿ ತ್ರಯ’ದಲ್ಲಿ ಒಬ್ಬರು. ಅವರು ಭಗವಾನ್ ಅಂಜನೇಯ ಸ್ವಾಮಿಯ ತೀವ್ರ ಭಕ್ತರಾಗಿದ್ದರು ಮತ್ತು ಭಾರತದಿಂದ ಹೊರಗಿದ್ದರೂ 732 ವಿಗ್ರಹಗಳನ್ನು ಸ್ಥಾಪಿಸಿದ್ದಾರೆ ಎಂದು ನಂಬಲಾಗಿದೆ.


ತೀರ್ಥಹಳ್ಳಿ ಅನಂತ ಕಲ್ಲಾಪುರ
ಮೊಬೈಲ್ – 9480129458

- Advertisement -
- Advertisement -

Latest News

ಮಣ್ಣು ಉಳಿಸಿ ಹೋರಾಟಕ್ಕೆ ಬೆಂಬಲ ನೀಡೋಣ – ಅಶೋಕ ಅಲ್ಲಾಪೂರ

ಸಿಂದಗಿ - ಜಗತ್ತಿನ ಜೀವ ಸಂಕುಲಕ್ಕೆ ಆಶ್ರಯವಾದ ಭೂಮಿಯನ್ನು ಮತ್ತು ಮಣ್ಣನ್ನು ಉಳಿಸಿ ಮುಂದಿನ ಜನಾಂಗಕ್ಕೆ ಫಲವತ್ತಾದ ಭೂಮಿ ನೀಡಲು ಶ್ರೀ ಸದ್ಗುರು ಜಗ್ಗಿ ವಾಸುದೇವ್...
- Advertisement -

More Articles Like This

- Advertisement -
close
error: Content is protected !!