ಮೂಡಲಗಿ – ನೂತನ ಶಿಕ್ಷಣ ನೀತಿ 2020 ರಂತೆ ಶ್ರೀ ಶ್ರೀಪಾದಬೋಧ ಸ್ವಾಮೀಜಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಮೂಡಲಗಿ ಇಲ್ಲಿ 2022-23 ನೇ ಸಾಲಿನ ಪದವಿ ಪ್ರಥಮ ವರ್ಷದ BA, B.Com, BSc, BSW ,BBA ಪ್ರವೇಶಾತಿಗಳು ಪ್ರಾರಂಭಗೊಂಡಿವೆ. ನುರಿತ ಬೋಧಕ ಸಿಬ್ಬಂದಿ ವರ್ಗ, ವಿದ್ಯಾರ್ಥಿ ವೇತನದ ಸೌಲಭ್ಯಗಳು, ವಿದ್ಯಾರ್ಥಿನಿಯರಿಗೆ ಶುಲ್ಕ ವಿನಾಯಿತಿ ಸೌಲಭ್ಯ ಸ್ಮಾರ್ಟ ಕ್ಲಾಸ್ ರೂಮ್ ಸೌಲಭ್ಯ, ಸುಸಜ್ಜಿತ ಕಂಪ್ಯೂಟರ್ ಪ್ರಯೋಗಾಲಯ, ಸುಸಜ್ಜಿತ ತರಗತಿ ಕೊಠಡಿಗಳು, ಉತ್ತಮ ಗ್ರಂಥಾಲಯ ವ್ಯವಸ್ಥೆ , ಡಿಜಿಟಲ್ ಲೈಬ್ರರಿ ಸೌಲಭ್ಯ ಮತ್ತು ವಿಶೇಷಚೇತನ ವಿದ್ಯಾರ್ಥಿಗಳಿಗೆ ವಿಶೇಷ ಸೌಲಭ್ಯಗಳನ್ನು ಕಾಲೇಜು ಒಳಗೊಂಡಿದೆ. ಸೀಟುಗಳು ಮಿತವಾಗಿದ್ದು ವಿದ್ಯಾರ್ಥಿಗಳು ಶೀಘ್ರ ಪ್ರವೇಶಾತಿಯನ್ನು ಪಡೆಯಲು ಕಾಲೇಜಿನ ಪ್ರಾಂಶುಪಾಲರಾದ ಎಸ್.ಡಿ ಗಾಣಿಗೇರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸರ್ಕಾರದ ನಿರ್ದೇಶನದಂತೆ ಈ ವರ್ಷದ ಪ್ರವೇಶಾತಿಯು ಸಂಪೂರ್ಣವಾಗಿ ಯು.ಯು.ಸಿ.ಎಂ.ಎಸ್ ಪೊರ್ಟಾಲ್ ಮೂಲಕ ನಡೆಯಲಿದ್ದು, ವಿದ್ಯಾರ್ಥಿಗಳು https://uucms.karnataka.gov.in/Login/OnlineStudentRegistrationForm ಜಾಲತಾಣದ ಮೂಲಕ ಅರ್ಜಿಯನ್ನು ಸಲ್ಲಿಸಲು ಸೂಚಿಸಲಾಗಿದೆ. ಹೆಚ್ಚಿನ ಮಾಹಿತಿಗೆ ಕಾಲೇಜಿನ ದೂರವಾಣಿ ಸಂಖ್ಯೆ 08334-200083 ಸಂಪರ್ಕಿಸಲು ಸೂಚಿಸಿದೆ.