ಸಿಂದಗಿ: ಎಸ್ ಎಸ್ ಎಲ್ ಸಿ ಪರೀಕ್ಷೆ ದಿನಾಂಕ ಪ್ರಕಟಣೆಯಿಂದ ವಿದ್ಯಾರ್ಥಿಗಳು ಪರೀಕ್ಷೆ ಪೂರ್ವ ಸಿದ್ದತೆಯಿಂದ ಎರಡು ದಿನ ಪರೀಕ್ಷೆ ಬರೆಯಲು ದೈರ್ಯದಿಂದ ಮುಂದಾಗಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ವಿಠ್ಠಲ. ಯ .ದೇವಣಗಾಂವಿ ಹೇಳಿದರು ,
ತಾಲೂಕಿನ ಹೊನ್ನಳ್ಳಿ ಗ್ರಾಮದಲ್ಲಿ ಜಿ ಹೆಚ್ ಎಸ್ ಹೊನ್ನಳ್ಳಿ ಶಾಲೆಯ ಪರವಾಗಿ ಎಸ್ ಎಸ್ ಎಲ್ ಸಿ ಓದುತ್ತಿರುವ ಮಕ್ಕಳ ಮನೆಗೆ ಭೇಟಿ ನೀಡಿ ಪಾಲಕರಿಗೆ ಓ ಎಂ ಆರ್ ಮಾದರಿ ಪ್ರಶ್ನೆ ಪತ್ರಿಕೆ ತೋರಿಸುವ ಮೂಲಕ ಅವರು ಮಾತನಾಡಿ, ಪಾಲಕರು ಹಾಗೂ ವಿದ್ಯಾರ್ಥಿಗಳು ಎಸ್ ಎಸ್ ಎಲ್ ಸಿ ಪರೀಕಾ ಮಂಡಳಿ ವಿಷಯ ತಕ್ಕಂತೆ ಪ್ರಶ್ನೆಗಳ ಸ್ವರೂಪವನ್ನು ಬದಲಿಸಲಾಗಿದೆ ಇದರ ಬಗ್ಗೆ ವಿದ್ಯಾರ್ಥಿಗಳು ಪಾಲಕರು ಪೂರ್ವ ಸಿದ್ದತೆಗಾಗಿ ತಮ್ಮ ಮನೆಯ ಮುಂದೆ ಇಲಾಖೆ ಪರವಾಗಿ ಅಧಿಕಾರಿಗಳು ಹಾಗೂ ಶಿಕ್ಷಕರು ಮಾಹಿತಿ ಒದಗಿಸಲಾಗುತ್ತದೆ.
ಎಸ್ ಎಸ್ ಎಲ್ ಸಿ ಪರೀಕ್ಷೆ ಕೇಂದ್ರದಲ್ಲಿ ಸಾಮಾಜಿಕ ಅಂತರ ಕಾಯ್ದು ಕೊಳ್ಳವುದು ಮತ್ತು ವಿದ್ಯಾರ್ಥಿಗಳು ಹಾಗೂ ಶಿಕ್ಷರಿಗೆ ಮುಖ ಕವಚವನ್ನು ಹಾಕಿ ಕೊಳ್ಳುವುದು ಮೂಲಕ ಪರೀಕ್ಷೆ ಕೇಂದ್ರದಲ್ಲಿ ಹಾಜರಾಗಲು ತಿಳಿಸಲಾಗುತ್ತದೆ , ಎಸ್ ಎಸ್ ಎಲ್ ಸಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಲ್ಲಿ ಆತ್ಮ ವಿಶ್ವಾಸ ತುಂಬುವ ಮೂಲಕ ಪರೀಕ್ಷೆ ಬರೆಯುವಂತೆ ಪ್ರೇರಣೆ ನೀಡಬೇಕು ಎಂದು ಸೂಚಿಸಿದರು.
ಎಸ್ ಎಸ್ ಎಲ್ ಸಿ ಪರೀಕ್ಷೆ ಅತ್ಯಂತ ಪಾರರ್ಶಕವಾಗಿ ನಡೆಯುವುದರಿಂದ ವಿದ್ಯಾರ್ಥಿಗಳು ದೈರ್ಯದಿಂದ ಪರೀಕ್ಷೆ ಬರೆಯಬೇಕು ಎಂದರು , ವಿದ್ಯಾರ್ಥಿಗಳಿಗೆ ಪೋಷಕರು ಆತ್ಮ ವಿಶ್ವಾಸ ತುಂಬುವ ಮೂಲಕ ಸಹಕಾರ ನೀಡಬೇಕು ಎಂದರು.
ಈ ಸಂದರ್ಭದಲ್ಲಿ ವಲಯದ ಸಿ ಆರ್ ಪಿ ರವಿ ರಾಠೋಡ , ಜಿ.ಹೆಚ್.ಎಸ್ ಶಾಲೆಯ ಮುಖ್ಯಗುರು ಎ ಆರ್ ಹತ್ತಿ, ದೈ. ಶಿ. ಆರ್ ಜಿ ಪಾಟೀಲ , ಜೆಡ್. ಎಂ .ಮಾಸಳೆ , ಎ.ವ್ಹಿ.ಪಾಟೀಲ , ಎ.ಬಿ.ನಾಯ್ಕ್ , ಎಲ್ ಡಿ ಮುಲ್ಲು , ಗ್ರಾಮದ ಪಾಲಕರು ವಿದ್ಯಾರ್ಥಿಗಳು ಭಾಗವಹಿಸಿದರು.