ಸಿಂದಗಿ; ಪ್ರವಾದಿ ಮಹ್ಮದ ಪೈಗಂಬರರವರ ನಿಂದನೆ ಮಾಡಿರುವ ಯತಿ ನರಸಿಂಹಾನಂದ ಸ್ವಾಮಿ ಹಾಗೂ ಉತ್ತರ ಪ್ರದೇಶದ ಅಮೇಥಿಯಲ್ಲಿ ದಲಿತ ಕುಟುಂಬದ ನಾಲ್ವರ ಸದಸ್ಯರನ್ನು ಗುಂಡಿಕ್ಕಿ ಹತ್ಯೆಗೈದ ಆರೋಪಿ ಚಂದನ ವರ್ಮಾ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಿ ಕಠಿಣ ಶಿಕ್ಷೆಗೆ ಒಳಪಡಿಸುವಂತೆ ಆಗ್ರಹಿಸಿ ದಲಿತ ಸೇನೆಯ ಪದಾಧಿಕಾರಿಗಳು ಪ್ರತಿಭಟನೆ ನಡೆಸಿ ರಾಷ್ಟ್ರಪತಿಗಳಿಗೆ ತಹಶೀಲ್ದಾರರ ಮುಖಾಂತರ ಶಿರಸ್ತೆದಾರ ಇಂದಿರಾಬಾಯಿ ಬಳಗಾನೂರ ಅವರಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ದಲಿತ ಸೇನೆ ರಾಜ್ಯ ಉಪಾಧ್ಯಕ್ಷ ಮಹಿಬೂಬ ಸಿಂದಗಿಕರ ಮಾತನಾಡಿ, ಭಾರತದೇಶ ಜಾತ್ಯತೀತ ರಾಷ್ಟ್ರ ಇಲ್ಲಿ ಎಲ್ಲಾ ಜಾತಿ ಜನಾಂಗದವರು ಶಾಂತಿ ಸೌಹಾರ್ದತೆ ಸಹಬಾಳ್ವೆಯಿಂದ ಸಂವಿಧಾನದ ಅಡಿಯಲ್ಲಿ ಭಯ ಮುಕ್ತವಾಗಿ ಜೀವನ ಸಾಗಿಸುತ್ತಿದ್ದಾರೆ. ಪ್ರಸ್ತುತ ದಿನಮಾನಗಳಲ್ಲಿ ಕೆಲವು ಜಾತಿವಾದಿ ನಾಯಕರುಗಳು ಭಾರತದೇಶದಲ್ಲಿ ಜಾತಿ-ಜಾತಿ ಗಳ ಮಧ್ಯೆ ಧರ್ಮಗಳ ಮಧ್ಯೆ ವಿಷಬಿಜ ಭಿತ್ತಿ ಕೋಮು ಭಾವನೆಗಳನ್ನು ಕೆರಳಿಸಿ ದೇಶಾದ್ಯಂತ ಅಶಾಂತಿಯ ವಾತಾವರಣ ನಿರ್ಮಾಣ ಮಾಡುತ್ತಿದ್ದಾರೆ. ಪ್ರಸ್ತುತ ದೇಶದಲ್ಲಿ ದಲಿತ ಅಲ್ಪಸಂಖ್ಯಾತ, ಹಿಂದುಳಿದ ವರ್ಗ, ಮಹಿಳೆಯರ ಮೇಲೆ, ದಿನೇ ದಿನೇ ವಿವಿಧ ರೀತಿಯ ದೌರ್ಜನ್ಯಗಳು, ಅತ್ಯಾಚಾರ, ಕೊಲೆ, ಬಹಿಷ್ಕಾರದಂತಹ ಅಫರಾಧಿಕ ಕೃತ್ಯಗಳು ಹೆಚ್ಚಾತ್ತಿರುವದು ಇದಕ್ಕೆ ತಾಜಾ ಉದಾಹರಣೆ ಉತ್ತರ ಪ್ರದೇಶ ರಾಜ್ಯದ ೨ ಪ್ರತ್ಯೇಕ ಘಟನೆಗಳು ಜಗತ್ತಿನ ಶಾಂತಿದೂತ ಮನಕುಲದ ಉದ್ದಾರಕ್ಕಾಗಿ ಪ್ರವಾದಿ ಮಹ್ಮದ ಪೈಗಂಬರರವರ ಜೀವನದ ಸಂದೇಶಗಳು ಎಲ್ಲರಿಗೂ ಮಾದರಿ ಪ್ರವಾದಿರವರ ಜೀವನ ಚರಿತ್ರೆ ನೋಡಿದಾಗ ಅವರ ಸಂದೇಶಗಳು ಅನಾಥ ಮಕ್ಕಳ ಮುಂದೆ ತಮ್ಮ ಮಕ್ಕಳನ್ನು ಮುದ್ದಿಸಬಾರದು, ಕಾರ್ಮಿಕರ ಬೆವರು ಆರುವ ಮುನ್ನವೇ ಅವರ ವೇತನವನ್ನು ಅವರ ಕೈಯಲ್ಲಿ ಕೊಡಿ ಎಂಬ ಸಂದೇಶವನ್ನು ಸಾರಿರುವ ಪ್ರವಾದಿಗಳ ಕುರಿತು ಅವಹೇಳನಕಾರಿಯಾಗಿ ಮಾತನಾಡಿರುವ ಯತಿ ನರಸಿಂಹಾನಂದ ಸ್ವಾಮೀ ಇವರ ಮಾತುಗಳಿಂದ ಸಮಸ್ತ ಮುಸ್ಲಿಂ ಸಮಾಜದ ಭಾವನೆಗಳಿಗೆ ಧಕ್ಕೆ ಉಂಟಾಗಿರುತ್ತದೆ. ಇದೇ ತೆರನಾಗಿ ಉತ್ತರ ಪ್ರದೇಶದಲ್ಲಿ ಚಂದನವರ್ಮಾ ಎಂಬ ಕ್ರೂರಿ ದಲಿತ ಕುಟುಂಬದ ನಾಲ್ವರು ಸದಸ್ಯರನ್ನು ಕ್ಷುಲ್ಲಕ ಕಾರಣಕ್ಕಾಗಿ ಹತ್ಯೆ ಮಾಡಿರುತ್ತಾನೆ ಈ ರೀತಿಯ ಘಟನೆಗಳು ದೇಶದಲ್ಲಿ ದಿನೇ ದಿನೇ ಹೆಚ್ಚುತ್ತಿರುವದು ಕಳವಳಕಾರಿ ಸಂಗತಿಯಾಗಿದೆ ಇದರಿಂದ ದೇಶದಲ್ಲಿ ಭಯದ ವಾತಾವರಣ ನಿರ್ಮಾಣವಾಗುತ್ತಿದೆ. ಕಾರಣ ರಾಷ್ಟ್ರಪತಿಗಳು ಮಧ್ಯೆ ಪ್ರವೇಶಿಸಿ ಆರೋಪಿಗಳನ್ನು ಕಠಿಣ ಶಿಕ್ಷೆಗೆ ಗುರಿಪಡಿಸಿ ದೇಶದಲ್ಲಿ ಮತ್ತೊಮ್ಮೆ ಇಂತಹ ಪ್ರಕರಣಗಳು ಮರುಕಳಿಸದಂತೆ ಸೂಕ್ತ ಕ್ರಮ ತೆಗೆದುಕೊಳ್ಳಬೇಕೆಂದು ವಿನಂತಿದರು.
ಈ ಸಂದರ್ಭದಲ್ಲಿ ದಲಿತ ಸೇನೆ ಜಿಲ್ಲಾಧ್ಯಕ್ಷ ಖಾಜು ಹೊಸಮನಿ, ಪ್ರ.ಕಾರ್ಯದರ್ಶಿ ಶಿವಕುಮಾರ ಗೋಲಾ, ತಾಲೂಕ ಉಪಾಧ್ಯಕ್ಷ ಶಾ ಹುಸೇನಿ ಬುಕ್ಕದ್, ಅಬ್ದುಲ್ ರಹೀಮ್ ದುದನಿ, ಮಹಿಬೂಬ್ ಹಸಗುಂಡಗಿ, ಅಬ್ದುಲ್ ಮುಲ್ಲಾ, ಸುಮೀತ್ ಕಕ್ಕಸಗೇರಿ, ಸಫಿಯಾ ಶೈಖ್, ಜಾಫರ್ ಇನಾಮ್ದಾರ್, ಟಿಪ್ಪು ಬನ್ನಟ್ಟಿ, ಜಾವೇದ್ ಕರಜಗಿ, ರಜಾಕ ಸಿಂದಗಿಕರ ಸೇರಿದಂತೆ ಅನೇಕರಿದ್ದರು.