Homeಜೋತಿಷ್ಯನಕ್ಷತ್ರ ಮಾಲೆ

ನಕ್ಷತ್ರ ಮಾಲೆ

ಭರಣಿ ನಕ್ಷತ್ರ

🌷ಚಿಹ್ನೆ- ಯೋನಿ

🌷ಆಳುವ ಗ್ರಹ– ಶುಕ್ರ

🌷ಲಿಂಗ– ಹೆಣ್ಣು

🌷ಗಣ– ಮನುಷ್ಯ

🌷ಗುಣ– ರಜಸ್/ ತಮಸ್

🌷ಆಳುವ ದೇವತೆ– ಯಮ

🌷ಪ್ರಾಣಿ– ಆನೆ

🌷ಭಾರತೀಯ ರಾಶಿಚಕ್ರ – 13 ° 20 – 26 ° 40 ಮೇಷ

🌷‘ಸಂಯಮದ ನಕ್ಷತ್ರ’ ಎಂದೇ ಪರಿಗಣಿಸಲಾಗಿದೆ.

🌻ಈ ನಕ್ಷತ್ರದಲ್ಲಿ ಜನಿಸಿದ ವ್ಯಕ್ತಿಗಳಲ್ಲಿ ಸಾಮಾನ್ಯವಾಗಿಯೇ ಬೆಂಕಿಯಂತೆ ಸುಡುವ ಬೃಹತ್ ಚೈತನ್ಯವನ್ನು ಹೊಂದಿರುತ್ತಾರೆ. ಭರಣಿ ನಕ್ಷತ್ರದವರು ಯಾವುದೇ ವಿಷಯಕ್ಕೆ ಸಂಬಂಧಿಸಿದಂತೆ ಒಮ್ಮೆಲೇ ಧುಮುಕುವ ಪ್ರಯತ್ನ ಮಾಡುವುದಿಲ್ಲ. ಧನಾತ್ಮಕ ಮತ್ತು ಋಣಾತ್ಮಕ ರೂಪದಲ್ಲಿ ಆಯ್ಕೆಯನ್ನು ಮಾಡುತ್ತಾರೆ. ನಂತರ ಆ ಹಾದಿಯಲ್ಲಿಯೇ ಮುಂದೆ ಸಾಗುತ್ತಾರೆ.

🌻ಈ ನಕ್ಷತ್ರದಲ್ಲಿ ಜನಿಸಿದ ವ್ಯಕ್ತಿಗಳು ತಮ್ಮ ಜೀವನ ಹಾಗೂ ನಿರ್ಧಾರಗಳನ್ನು ಕೈಗೊಳ್ಳುವ ವಿಷಯದಲ್ಲಿ ಸಾಕಷ್ಟು ಡೋಲಾಯಮಾನ ಭಾವನೆಯನ್ನು ಹೊಂದಿರುತ್ತಾರೆ. ಯೋನಿ ಸಂಕೇತವನ್ನು ಹೊಂದಿರುವ ಭರಣಿ ನಕ್ಷತ್ರದವರು ಜೀವನದಲ್ಲಿ ಸೃಜನಶೀಲತೆ, ಲೈಂಗಿಕತೆ ಹಾಗೂ ಜೀವನದ ಮೂಲಗಳಿಗೆ ಹೆಚ್ಚಿನ ಆದ್ಯತೆಯನ್ನು ನೀಡುವರು. ಒಂದು ಗರ್ಭಾಶಯದಂತೆ ಭರಣಿಯನ್ನು ಪವಿತ್ರ ಎಂದು ಪರಿಗಣಿಸಲಾಗುವುದು. ಅಲ್ಲದೆ ಬೆಳವಣಿಗೆ, ಪೋಷಣೆ ಮತ್ತು ಯೌವ್ವನದ ಕೇಂದ್ರವೆಂದು ಸಹ ಪರಿಗಣಿಸಲಾಗುತ್ತದೆ.

🌻ದೃಢ ವ್ಯಕ್ತಿತ್ವವನ್ನು ಹೊಂದಿರುವವರು ಭರಣಿ ನಕ್ಷತ್ರದವರು. ಇವರು ಅಗತ್ಯಕ್ಕೆ ಅನುಗುಣವಾಗಿ ಉತ್ಸಾಹ, ಬದಲಾವಣೆ ಹಾಗೂ ಪರಿಸ್ಥಿತಿಗೆ ತಕ್ಕಂತೆ ರೂಪಾಂತರಗೊಳ್ಳುವ ಸಾಮರ್ಥ್ಯವನ್ನು ಹೊಂದಿರುತ್ತಾರೆ. ಕಲಿಕೆಯ ವಿಷಯದಲ್ಲಿ ಈ ನಕ್ಷತ್ರದವರು ಉಳಿದ ನಕ್ಷತ್ರದವರಿಗಿಂತ ಹೆಚ್ಚಿನ ಆಸಕ್ತಿಯನ್ನು ಹೊಂದಿರುತ್ತಾರೆ.


🚩ಶ್ರೀ ಭಗವಂತ ಪರಶುರಾಮ🚩
ಇಂತಿ ಜ್ಯೋತಿಷ್ಯ ಸೇವೆಯಲ್ಲಿ ತಮ್ಮವ ಪ್ರಾಚೀನಶಾಸ್ತ್ರಾಸಕ್ತ

L ವಿವೇಕಾನಂದ ಆಚಾರ್ಯ🇮🇳 (Army Rtd) Gubbi.
ph no :9480916387

RELATED ARTICLES

Most Popular

error: Content is protected !!
Join WhatsApp Group