ಬೆಂಗಳೂರು : ಹರಿದಾಸ ಕೂಟದಲ್ಲಿ 18 ನೇ ಶತಮಾನದ ಪ್ರಮುಖರಲ್ಲಿ ಶ್ರೀ ವಿಜಯ ದಾಸರು ಆಗ್ರಪಂಕ್ತಿ ಯಲ್ಲಿದ್ದಾರೆ, ಪುರಂದರ ದಾಸರ ನಂತರ ಸುಮಾರು ಒಂದು ಶತಮಾನಗಳಷ್ಟು ಕಾಲ ನೇಪಥ್ಯ ಕ್ಕೆ ಸರಿದಿದ್ದ ದಾಸಸಾಹಿತ್ಯ ವನ್ನು ಉದ್ದೀಪನಗೊಳಿಸಿದ ವಿಜಯದಾಸರು ದಾಸ ಸಾಹಿತ್ಯ ದ ಧ್ರುವ ತಾರೆ ಎಂದು ವಿದ್ವಾನ್ ಕರ್ನೂಲು ಶ್ರೀನಿವಾಸಾಚಾರ್ಯರು ನೆರೆದಿದ್ದ ಭಕ್ತರಿಗೆ ತಿಳಿಸಿದರು.
ನಗರದ ಗಾಂದಿಬಜ಼ಾರ್ ನಲ್ಲಿ ಇರುವ ಶ್ರೀ ವ್ಯಾಸರಾಜಮಠದಲ್ಲಿ ಶ್ರೀ ವಿಜಯದಾಸರ ಪೂರ್ವಾರಾಧನಾ ಮಹೋತ್ಸವ ವನ್ನು ಶ್ರೀವ್ಯಾಸರಾಜ ಮಠಾಧೀಶರಾದ ಪರಮಪೂಜ್ಯ ಶ್ರೀಶ್ರೀ1008 ಶ್ರೀಶ್ರೀ ವಿದ್ಯಾಶ್ರೀಶತೀರ್ಥ ಶ್ರೀಪಾದಂಗಳವರ ಆಜ್ಞಾನುಸಾರ
ದಾಸ ಚತುಷ್ಟಯರಲ್ಲಿ ಒಬ್ಬರಾದ ಸುಳಾದಿದಾಸರೆಂದೇ ಪ್ರಖ್ಯಾತರಾದ, ಭೃಗುಋಷಿಗಳ ಅಂಶರಾದ ಶ್ರೀವಿಜಯದಾಸರ ಪೂರ್ವಾರಾಧನಾ ಮಹೋತ್ಸವವನ್ನು ಕಾರ್ತೀಕ ಶುದ್ಧ ನವಮೀ, ದಿನಾಂಕ 10-11-2024 ಭಾನುವಾರದಂದು ನಡೆಯಿತು.
ಈ ಸಂದರ್ಭದಲ್ಲಿ ನಡೆದ ಪ್ರವಚನ ಕಾರ್ಯಕ್ರಮ ದಲ್ಲಿ ಪ್ರವಚನ ಮಾಡುತ್ತಾ ವಿದ್ವಾನ್. ಕರ್ನೂಲು ಶ್ರೀನಿವಾಸಾಚಾರ್ಯರು ಶ್ರೀ ವಿಜಯದಾಸರ ಕುರಿತು ಹೇಳಿದರು.
ಈ ಆರಾಧನಾ ಮಹೋತ್ಸವದಲ್ಲಿ ಬೆ. 8:00 ಕ್ಕೆ ಗೋಪೂಜೆ, ಮತ್ತು ಯಾಯವಾರ, ನಂತರ ಬೆ. 9:00 – ಮನ್ಯುಸೂಕ್ತ ಹೋಮ ಹಾಗು ಬೆ. 10:00 – ವಿಜಯರಾಯರ ಕವಚ ಸಾಮೂಹಿಕ ಪಾರಾಯಣ, ಭಜನಾ ಕಾರ್ಯಕ್ರಮ
ಪ್ರವಚನ – ವಿದ್ವಾನ್. ಕರ್ನೂಲು ಶ್ರೀನಿವಾಸಾಚಾರ್ಯರಿಂದ
ಮ. 12:00 – ಅಲಂಕಾರ ಬ್ರಾಹ್ಮಣರ ಸಮಾರಾಧನೆ ನಂತರ ತೀರ್ಥಪ್ರಸಾದ ವಿತರಿಸಲಾಯಿತು.
ಸಂ. 6:00 – ಕಾರ್ತೀಕ ದೀಪೋತ್ಸವ, ಸ್ವಸ್ತಿವಾಚನ, ಮಹಾಮಂಗಳಾರತಿ.
ಸಂ. 7.೦೦ ಗಂ – ‘ದಾಸವಾಣಿ’ – ಶ್ರೀಸಮೀರಾಚಾರ್ಯ ಸೋಸಲೆ ದಾಸರ ಪದಗಳನ್ನು ಹಾಡಿದರು.
ತಬಲಾ ದಲ್ಲಿ..ಪ್ರಮತ್ ವಿಠ್ಠಲ್ ಮತ್ತು ಗೋವಿಂದ ಅವರು ಕೀ ಬೋರ್ಡ್ ನುಡಿಸಿದರು.
ಕಾರ್ಯಕ್ರಮದಲ್ಲಿ ಶ್ರೀ ಮಠದ ಮಹಿಳಾ ಸ್ವಯಂ ಸೇವಕರು ಅಂದವಾಗಿ ದೀಪಗಳನ್ನು ನಕ್ಷತ್ರಾಕಾರದಲ್ಲಿ ಜೋಡಿಸಿ ಬೆಳಗಿಸಿದರು. ೯೦ ವರ್ಷ ವಯಸ್ಸಿನ ಶ್ರೀ ನಿವಾಸಾಚಾರ್ಯರು ಕೊಳಲು ನುಡಿಸಿದ್ದು ಕಾರ್ಯಕ್ರಮದ ವಿಶೇಷವಾಗಿತ್ತು. ವ್ಯಾಸತೀರ್ಥ ಭಜನಾ ಮಂಡಳಿಯ ೩೦ ಜನ ಮಹಿಳೆಯರ ತಂಡ, ಆಖಣಾಶ್ಮ ಭಜನಾ ಮಂಡಳಿಯ ೨೦ ಜನ ಮಹಿಳಾ ತಂಡ ಹಾಗೂ ಕತ್ರಿಗುಪ್ಪೆಯ ಚೆನ್ನಮ್ಮನ ಅಚ್ಚುಕಟ್ಟು ಇವರಿಂದ ಭಜನಾ ಕಾರ್ಯಕ್ರಮ ಆಕರ್ಷಕವಾಗಿತ್ತು.
ಪೂರಕ ಮಾಹಿತಿ : ತೀರ್ಥಹಳ್ಳಿ ಅನಂತ ಕಲ್ಲಾಪುರ