spot_img
spot_img

110/11 ಕೆವಿ ವಿದ್ಯುತ್ ಪ್ರಸರಣ ಕೇಂದ್ರದ ಕಾಮಗಾರಿಗೆ ಚಾಲನೆ

Must Read

- Advertisement -

ಸಿಂದಗಿ– ತಾಲೂಕಿನ ಗುಬ್ಬೇವಾಡಿ ಗ್ರಾಮದಲ್ಲಿ 110/11ಕೆ. ವಿ. ವಿದ್ಯುತ್ ಪ್ರಸರಣ ಕೇಂದ್ರದ  ಕಾಮಗಾರಿಗೆ ಶಾಸಕ ಅಶೋಕ್ ಮನಗೂಳಿ ಮಂಗಳವಾರ  ಭೂಮಿ ಪೂಜೆ ನೆರವೇರಿಸುವ ಮೂಲಕ ಚಾಲನೆ ನೀಡಿದರು.

ಈ ವೇಳೆ ಅವರು ಮಾತನಾಡಿ, ಈ ಭಾಗದ ರೈತರ ಬಹುದಿನಗಳ ಬೇಡಿಕೆಯಾಗಿರುವ ವಿದ್ಯುತ್ ಪ್ರಸರಣ ಕೇಂದ್ರ ಸ್ಥಾಪನೆಯಾಗುತ್ತಿರುವುದು ಸಂತಸ ತಂದಿದೆ. ಇದು ಯಂಕಂಚಿ ಗ್ರಾಮದಿಂದ ಗುಬ್ಬೇವಾಡ ಗ್ರಾಮದವರೆಗೆ 110ಕೆ. ವಿ ಸುಮಾರು 11 ಕಿಲೋಮೀಟರ್ ವರೆಗೆ ವಿದ್ಯುತ್ ಮಾರ್ಗ ನಿರ್ಮಿಸುವುದು ಹಾಗೂ 10 ಎಮ್. ವಿ. ಎ ವಿದ್ಯುತ್ ಪರಿವರ್ತಕ ಅಳವಡಿಸುವ ಕಾಮಗಾರಿ ಒಟ್ಟು 11.64 ಕೋಟಿ ಹಣವನ್ನ ಒಳಗೊಂಡಿರುವ ಕಾಮಗಾರಿ ಇದಾಗಿದೆ. ಇದರ ನಿರ್ಮಾಣದಿಂದ ಈ ಭಾಗ ಸೇರಿದಂತೆ ಸುತ್ತಮುತ್ತ ಅನೇಕ ಗ್ರಾಮಗಳ  ರೈತರಿಗೆ ಅತ್ಯಂತ ಅನುಕೂಲವಾಗಲಿದೆ. ರೈತರ ಪಂಪ್ಸೆಟ್ಟುಗಳಿಗೆ  ದಿನಕ್ಕೆ ಏಳು ಗಂಟೆ ವಿದ್ಯುತ್ ಪೂರೈಕೆ,  ಹೈ ವೋಲ್ಟೇಜ್ ವಿದ್ಯುತ್ ಪೂರೈಕೆ ಈ ಕೇಂದ್ರದಿಂದ ನೆರವೇರಲಿದೆ ಎಂದು ಶಾಸಕ ಅಶೋಕ್ ಮನಗೂಳಿ ಹೇಳಿದರು.

ಈ ವೇಳೆ ಸಂಸದ ರಮೇಶ್ ಜಿಗಜಿಣಗಿ, ಮಾಜಿ ಶಾಸಕ ರಮೇಶ್ ಭೂಸನೂರ ಮಾತನಾಡಿ, ವಿದ್ಯುತ್ ಪ್ರಸರಣ ಕೇಂದ್ರ ನಿರ್ಮಾಣದಿಂದ ಹೆಚ್ಚು ಅನುಕೂಲವಾಗಲಿದೆ. ರೈತರು ಇದರ ಉಪಯೋಗವನ್ನು ಪಡೆದುಕೊಳ್ಳಬೇಕು ಎಂದು ಮಾತನಾಡಿದರು.

- Advertisement -

ಕಾರ್ಯಕ್ರಮದಲ್ಲಿ ಬಾಗಲಕೋಟದ ಕೆಪಿಟಿಸಿಎಲ್ ಅಧಿಕಾರಿಗಳಾದ ಕೆ. ಜಿ. ಹಿರೇಮಠ್, ಜಿ. ಕೆ. ಗೋಟ್ಯಾಳ, ವಿಜಯಪುರದ ಕೆಪಿಟಿಸಿಎಲ್ ಅಧಿಕಾರಿಗಳಾದ ಸುನಂದಾ ಜಂಬಗಿ, ಪ್ರಭು ಭಾಗವಹಿಸಿದ್ದರು.

- Advertisement -
- Advertisement -

Latest News

ಸಿಂದಗಿ ಅಧ್ಯಕ್ಷರಾಗಿ ಶಾಂತವೀರ, ಉಪಾಧ್ಯಕ್ಷರಾಗಿ ರಾಜಣ್ಣಿ ಆಯ್ಕೆ

ಸಿಂದಗಿ; ಪಟ್ಟಣದ ಪುರಸಭೆಯ ಅಧ್ಯಕ್ಷ, ಉಪಾದ್ಯಕ್ಷರ ಅವಧಿ ಮುಗಿದು ಹಲವು ವರ್ಷಗಳು ಕಳೆದಿತ್ತು ಅದು ಅ. ೨೮ ರಂದು ಚುನಾವಣೆ ಪ್ರಕ್ರಿಯೆ ಪ್ರಾರಂಭಿಸಿ ಸೆ.೯ ದಿನಾಂಕ...
- Advertisement -

More Articles Like This

- Advertisement -
close
error: Content is protected !!
Join WhatsApp Group