ನಾಗನೂರ ಪಟ್ಟಣದಲ್ಲಿ ಖೋ ಖೋ ಹಬ್ಬ
ಮೂಡಲಗಿ: ಜಿಲ್ಲಾ ಪಂಚಾಯತ ಬೆಳಗಾವಿ, ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕರ ಕಾರ್ಯಾಲಯ ಚಿಕ್ಕೋಡಿ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಮೂಡಲಗಿ ಹಾಗೂ ತಾಲ್ಲೂಕಿನ ಶ್ರೀ ಮಹಾಲಿಂಗೇಶ್ವರ ಶಿಕ್ಷಣ ಸಂಸ್ಥೆ ನಾಗನೂರ ಇವರ ಸಂಯುಕ್ತ ಆಶ್ರಯದಲ್ಲಿ ಅ. 24 ಮತ್ತು 25 ರಂದು ಮುಂಜಾನೆ 10:00 ಗಂಟೆಗೆ ನಾಗನೂರ ಪಟ್ಟಣದಲ್ಲಿ 14-17 ವರ್ಷದೊಳಗಿನ ಬಾಲಕ ಬಾಲಕಿಯರ ವಿಭಾಗ ಮಟ್ಟದ ಹಾಗೂ ರಾಜ್ಯಮಟ್ಟದ 14 ವರ್ಷದೊಳಗಿನ ಬಾಲಕ ಮತ್ತು ಬಾಲಕಿಯರ ಖೋ ಖೋ ಪಂದ್ಯಾವಳಿಯು ಅದ್ದೂರಿಯಾಗಿ ನಡೆಯಲಿದೆ.
ಈ ಟೂರ್ನಿಯಲ್ಲಿ 14 ಮತ್ತು 17 ವರ್ಷದ ಬಾಲಕ ಬಾಲಕಿಯರು ಬೆಳಗಾವಿ ವಿಭಾಗದಿಂದ ಚಿಕ್ಕೋಡಿ, ಬೆಳಗಾವಿ, ಬಾಗಲಕೋಟ, ವಿಜಯಪುರ, ಧಾರವಾಡ, ಹಾವೇರಿ, ಗದಗ, ಶಿರಸಿ,ಹಾಗೂ ಕಾರವಾರ ಸೇರಿದಂತೆ 9 ಜಿಲ್ಲೆಗಳಿಂದ ಹಾಗೂ ರಾಜ್ಯಮಟ್ಟದ ಖೋಖೋ ಪಂದ್ಯಾವಳಿಗೆ ಬೆಳಗಾವಿ, ಬೆಂಗಳೂರು , ಮೈಸೂರು, ಮತ್ತು ಕಲಬುರ್ಗಿ 4 ವಿಭಾಗಗಳಿಂದ 14 ವರ್ಷ ಒಳಗಿನ ಬಾಲಕ-ಬಾಲಕಿಯರು ಸೇರಿದಂತೆ 580 ಕ್ರೀಡಾಪಟುಗಳು, 100 ಕ್ರೀಡಾಧಿಕಾರಿಗಳು, ಉಪನಿರ್ದೇಶಕರುಗಳು 8 ತಾಲ್ಲೂಕಿನ ದೈಹಿಕ ಶಿಕ್ಷಣ ಪರಿವೀಕ್ಷಕರು ಪಾಲ್ಗೊಳ್ಳಲಿದ್ದಾರೆ.
ಎರಡು ದಿನ ಕಾಲ ನಡೆಯುವ ಈ ಟೂರ್ನಿಯು 5 ಅಂಕಣ ಹಾಗೂ ಭವ್ಯ ವೇದಿಕೆಯು ಅಲಂಕೃತಗೊಂಡಿದೆ.
ಬಾಲಕ -ಬಾಲಕಿಯರು ಹಾಗೂ ಕ್ರೀಡಾಧಿಕಾರಿಗಳಿಗೆ ಪ್ರತ್ಯೇಕ ಉಟೋಪಚಾರ ಹಾಗೂ ವಸತಿ ಸೇರಿದಂತೆ ಮೂಲಭೂತ ಸೌಕರ್ಯ ಕಲ್ಪಿಸಲಾಗುವುದು ಎಂದು ಸಂಘಟಕ ರಾಷ್ಟ್ರಮಟ್ಟದ ಖೋ ಖೋ ತರಬೇತಿದಾರ ಈರಣ್ಣ ಹಳಿಗೌಡರ ತಿಳಿಸಿದ್ದಾರೆ .
ಅದ್ದೂರಿ ಉದ್ಘಾಟನಾ ಸಮಾರಂಭ: ಪ್ರಾಥಮಿಕ ಮತ್ತು ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ಬೆಳಗಾವಿ ವಿಭಾಗ ಮಟ್ಟದ ಮತ್ತು 14 ವರ್ಷದೊಳಗಿನ ಬಾಲಕ-ಬಾಲಕಿಯರ ಪ್ರಾಥಮಿಕ ಶಾಲಾ ಮಟ್ಟದ ರಾಜ್ಯಮಟ್ಟದ ಖೋಖೋ ಪಂದ್ಯಾವಳಿ ಉದ್ಘಾಟನಾ ಸಮಾರಂಭ ಶುಕ್ರವಾರ ಬೆಳಗ್ಗೆ 10 ಗಂಟೆಗೆ ನಡೆಯಲಿದೆ.
ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಉದ್ಘಾಟಿಸುವರು. ನಾಗನೂರು ಶ್ರೀ ಮಹಾಲಿಂಗೇಶ್ವರ ಶಿಕ್ಷಣ ಸಂಸ್ಥೆ ಅಧ್ಯಕ್ಷ ಬಸನಗೌಡ ಪಾಟೀಲ ಅಧ್ಯಕ್ಷತೆ ವಹಿಸುವರು. ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಹಾಗೂ ಚಿಕ್ಕೋಡಿ ಸಂಸದೆ ಪ್ರಿಯಾಂಕಾ ಜಾರಕಿಹೊಳಿ ಕ್ರೀಡಾ ಜ್ಯೋತಿ ಸ್ವೀಕರಿಸುವರು.
ಮುಖ್ಯ ಅತಿಥಿಗಳಾಗಿ ಧಾರವಾಡ ಬಾಲ ವಿಕಾಸ ಅಕಾಡೆಮಿ ನಿರ್ದೇಶಕ ಗಜಾನನ ಮನ್ನಿಕೇರಿ, ಚಿಕ್ಕೋಡಿ ಡಿಡಿಪಿಐ ಎಂ. ಸೀತಾರಾಮು , ಮೂಡಲಗಿ ಸಮನ್ವಯಾಧಿಕಾರಿ ರೇಣುಕಾ ಅನಿ, ನಾಗನೂರು ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಶ್ರೀಮತಿ ಚಂದ್ರವ್ವ ಯರಗಣವಿ, ಚಿಕ್ಕೋಡಿ ಜಿಲ್ಲಾ ಡಿಪಿಓ ಜುನೇಧಿ ಪಟೇಲ,, ಮೂಡಲಗಿ ಬಿಇ ಒ ಪ್ರಕಾಶ ಹಿರೇಮಠ, ಮೂಡಲಗಿ ಟಿಪಿಓ ಎಸ್ ಬಿ ಹಳಿಗೌಡರ, ರಾಯಬಾಗ ಟಿಪಿಓ ಮಹಾವೀರ ಜಿರಗ್ಯಾಳ ಆಗಮಿಸಲಿದ್ದಾರೆ ಎಂದು ಶ್ರೀ ಮಹಾಲಿಂಗೇಶ್ವರ ಪ್ರೌಢಶಾಲೆ ಮುಖ್ಯೋಪಾಧ್ಯಾಯ ಎಸ್ ಬಿ ಕೇದಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

