spot_img
spot_img

ಅ.೩೦ ರಂದು ಶಿಕ್ಷಕರತ್ನ, ಶ್ರಮಿಕರತ್ನ, ಶಾಲಾಸಿರಿ ರಾಜ್ಯ ಪ್ರಶಸ್ತಿ ಪ್ರದಾನ

Must Read

- Advertisement -

೫ ಪುಸ್ತಕಗಳ ಲೋಕಾರ್ಪಣೆ : ಶಿಕ್ಷಕರ ಸಂಘಗಳ ಪರಿಷತ್ತಿನ ಉದ್ಘಾಟನೆ

ಧಾರವಾಡ: ಅಕ್ಷರತಾಯಿ ಲೂಸಿ ಸಾಲ್ಡಾನಾ ಸೇವಾ ಸಂಸ್ಥೆ ಹಾಗೂ ಕರ್ನಾಟಕ ಶಿಕ್ಷಕರ ಸಂಘಗಳ ಪರಿಷತ್ತಿನ ಸಂಯುಕ್ತ ಆಶ್ರಯದಲ್ಲಿ ಅ.೩೦ ರಂದು ಅಪರಾಹ್ನ ೨.೩೦ ಗಂಟೆಗೆ ಶಿಕ್ಷಕ ರತ್ನ, ಶ್ರಮಿಕ ರತ್ನ, ಶಾಲಾಸಿರಿ ರಾಜ್ಯ ಪ್ರಶಸ್ತಿ ಪ್ರದಾನ, ಲೇಖಕ ವೈ.ಬಿ. ಕಡಕೋಳ ಸಂಪಾದನೆಯ ೫ ಕೃತಿಗಳ ಲೋಕಾರ್ಪಣೆ ಹಾಗೂ ಶಿಕ್ಷಕರ ಸಂಘಗಳ ಪರಿಷತ್ತಿನ ವಿಧ್ಯುಕ್ತ ಉದ್ಘಾಟನೆ ಕರ್ನಾಟಕ ವಿದ್ಯಾವರ್ಧಕ ಸಂಘದ ಸಭಾಭವನದಲ್ಲಿ ಜರುಗಲಿದೆ ಎಂದು ಶಿಕ್ಷಕರ ಸಂಘಗಳ ಪರಿಷತ್ತಿನ ಅಧ್ಯಕ್ಷ ಗುರು ತಿಗಡಿ, ಲೂಸಿ ಸಾಲ್ಡಾನಾ ಸೇವಾ ಸಂಸ್ಥೆ ಅಧ್ಯಕ್ಷ ಎಲ್.ಐ. ಲಕ್ಕಮ್ಮನವರ ಹಾಗೂ ಗೌರವಾಧ್ಯಕ್ಷ ಭೀಮಪ್ಪ ಕಾಸಾಯಿ ಜಂಟಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

- Advertisement -

ಉಪ್ಪಿನಬೆಟಗೇರಿ ಮೂರುಸಾವಿರ ವಿರಕ್ತಮಠದ ಶ್ರೀಕುಮಾರ ವಿರುಪಾಕ್ಷ ಸ್ವಾಮಿಗಳ ಸಾನ್ನಿಧ್ಯದಲ್ಲಿ ಜರುಗಲಿರುವ ಈ ರಾಜ್ಯಮಟ್ಟದ ಸಮಾರಂಭವನ್ನು ಶಾಸಕ ಅಮೃತ ದೇಸಾಯಿ ಉದ್ಘಾಟಿಸುವರು. ಅಕ್ಷರತಾಯಿ ಲೂಸಿ ಸಾಲ್ಡಾನಾ ಸೇವಾ ಸಂಸ್ಥೆಯ ಮಹಾಪೋಷಕಿ ಲೂಸಿ ಸಾಲ್ಡಾನಾ ಅಧ್ಯಕ್ಷತೆ ವಹಿಸುವರು. ‘ಶಾಲಾಸಿರಿ’ ಪ್ರಶಸ್ತಿಗಳನ್ನು ಡಿಡಿಪಿಐ ಮೋಹನಕುಮಾರ ಹಂಚಾಟೆ, ‘ಶ್ರಮಿಕರತ್ನ’ ಪ್ರಶಸ್ತಿಗಳನ್ನು ಮಕ್ಕಳ ಸಾಹಿತಿ ಶಂಕರ ಹಲಗತ್ತಿ, ‘ಶಿಕ್ಷಕರತ್ನ’ ಪ್ರಶಸ್ತಿಗಳನ್ನು ಬಿಇಓ ಗಿರೀಶ ಪದಕಿ ಪ್ರದಾನ ಮಾಡುವರೆಂದು ಅವರು ಹೇಳಿದರು.

ಪುಸ್ತಕ ಬಿಡುಗಡೆ

ಲೇಖಕ ವೈ.ಬಿ.ಕಡಕೋಳ ಸಂಪಾದನೆಯ ‘ಸ್ವರ್ಗ ನರಕ’ ಕೃತಿಯನ್ನು ಮೇಲ್ಮನೆ ಶಾಸಕ ಪ್ರೊ. ಎಸ್.ವ್ಹಿ. ಸಂಕನೂರ, ‘ಹಬ್ಬಗಳ ಸಿರಿ’ ಪುಸ್ತಕವನ್ನು ಸಾರ್ವಜನಿಕ ಶಿಕ್ಷಣ ಇಲಾಖೆಯ ಹೆಚ್ಚುವರಿ ಆಯುಕ್ತ ಎಸ್.ಎಸ್. ಬಿರಾದಾರ, ‘ಬದುಕು-ಬರಹ’ ಕೃತಿಯನ್ನು ಪತ್ರಕರ್ತ ಅಜಿತ ಹನುಮಕ್ಕನವರ, ‘ತುಂಬಿದ ಹೊಳೆ’ ಪುಸ್ತಕವನ್ನು ಬಿಇಓ ಉಮೇಶ ಬಮ್ಮಕ್ಕನವರ ಹಾಗೂ ‘ಅಡುಗೆ ವೈವಿಧ್ಯ’ ಕೃತಿಯನ್ನು ಶಿಕ್ಷಣಾಧಿಕಾರಿ ವಿದ್ಯಾ ನಾಡಿಗೇರ ಬಿಡುಗಡೆಗೊಳಿಸುವರು.

ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತಿನ ರಾಜ್ಯಾಧ್ಯಕ್ಷ ಡಾ. ಹುಲಿಕಲ್ ನಟರಾಜ, ಡಯಟ್ ಉಪನ್ಯಾಸಕಿ ಡಾ. ರೇಣುಕಾ ಅಮಲಝರಿ, ‘ಜೀವನ ಶಿಕ್ಷಣ’ ಮಾಸಪತ್ರಿಕೆ ಜಂಟಿ ಸಂಪಾದಕ ಡಾ. ಗುರುಮೂರ್ತಿ ಯರಗಂಬಳಿಮಠ, ಸಾವಯವ ಕೃಷಿ ತಜ್ಞ ಜಿ.ಟಿ. ಶಿರೋಳ, ಶಿಕ್ಷಕ ಸಾಹಿತಿ ವೈ.ಬಿ. ಕಡಕೋಳ ಹಾಗೂ ನವರಸ ವೇದಿಕೆ ಅಧ್ಯಕ್ಷ ಬಾಬಾಜಾನ ಮುಲ್ಲಾ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದು, ರಾಜ್ಯದಲ್ಲಿಯ ೨೦ ವಿವಿಧ ಶಿಕ್ಷಕ ಸಂಘಗಳ ಪ್ರಮುಖ ಪದಾಧಿಕಾರಿಗಳು ಸಮಾರಂಭಕ್ಕೆ ಸಾಕ್ಷಿಯಾಗಲಿದ್ದಾರೆ.

- Advertisement -

‘ಶ್ರಮಿಕರತ್ನ’ ಪ್ರಶಸ್ತಿಗೆ ಆಯ್ಕೆ

ಮುದ್ರಣ ಹಾಗೂ ವಿದ್ಯುನ್ಮಾನ ಮಾಧ್ಯಮಗಳ ಪತ್ರಕರ್ತರಾದ ಶ್ರೀಕಾಂತ ಬೆಟಗೇರಿ, ಡಿ.ವ್ಹಿ. ಕಮ್ಮಾರ, ಜಾವೇದ ಆಧೋನಿ, ಪ್ರಶಾಂತ ದಿನ್ನಿ, ವಿವಿಧ ಕ್ಷೇತ್ರಗಳ ಸಾಧಕರುಗಳಾದ ಮಲ್ಲಿಕಾರ್ಜುನ ರಡ್ಡೇರ, ಮಂಜುನಾಥ ಗದ್ದಿಗೌಡರ(ಕಲಬುರ್ಗಿ), ಎಸ್.ವೈ. ಬಿಜಲಿ, ರಾಜಶ್ರೀ ಮಡಿವಾಳರ, ತನುಜಾಬಿ ನದಾಫ್, ಮನೋಹರ ಹಾತರಕಿ, ಹೂವಪ್ಪ ಜಂಗಣ್ಣವರ, ಅಶೋಕ ಗರಗದ ಅವರು ‘ಶ್ರಮಿಕರತ್ನ’ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

‘ಶಿಕ್ಷಕರತ್ನ’ ಪ್ರಶಸ್ತಿಗೆ ಆಯ್ಕೆ

ಮಲ್ಲಿಕಾರ್ಜುನ ಚರಂತಿಮಠ, ಸುಚೇತಾ ಹೂಗಾರ, ಸಂಜೀವ ಪಾಟೀಲ, ಪಲ್ಲವಿ ಎಂ., ಶ್ರೀಮತಿ ಎಲ್.ಎಸ್. ಕೇಸರಿ, ವಿಠ್ಠಲ ಮಡಿವಾಳರ, ಶೈಲಜಾ ಕೌಜಗೇರಿ, ಅರುಣಾ ಬೆಟಗೇರಿ, ಕಲ್ಪನಾ ಚಂದನಕರ, ಅರುಣ ಜೋಶಿ, ಬಸವರಾಜ ತುರಮರಿ, ಡಾ.ನಾಗೇಂದ್ರ ಛಲವಾದಿ, ಸುರೇಶ ಗೋವಿಂದರೆಡ್ಡಿ, ಶಿವಾಜಿ ಜಾಧವ, ಶೀಲಾ ಪಿ., ಎಸ್.ಬಿ. ಶಿವಸಿಂಪಿ, ಸಂಜಯ ಕೊಡಿ, ರಜಿಯಾ ಭಾಷಾ, ಶ್ರೀಮತಿ ವ್ಹಿ.ಎಂ. ನಾಗನಗೌಡ್ರ, ರೇಣುಕಾ ಸರಾವರಿ, ಎನ್.ಬಿ. ಗಿರಿಯಪ್ಪನವರ, ಪ್ರಭಾವತಿ ಅಂಗಡಿ, ಶೈಲಾ ಕಿತ್ತೂರ, ಸೈಯ್ಯದ್‌ಪೀರ ಕುಪ್ಪೇಲೂರ, ಬಸವರೆಡ್ಡಿ ಮಾಡಳ್ಳಿ ಅವರು ‘ಶಿಕ್ಷಕರತ್ನ’ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆಂದು ಅವರು ತಿಳಿಸಿದರು.

‘ಶಾಲಾಸಿರಿ’ ಪ್ರಶಸ್ತಿಗೆ ಆಯ್ಕೆ

ನಗರದ ಸರಕಾರಿ ಆದರ್ಶ ವಿದ್ಯಾಲಯ ಹಾಗೂ ಕೆಲಗೇರಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ತಾಲೂಕಿನ ಕರಡಿಗುಡ್ಡ ಗ್ರಾಮದ ಕರ್ನಾಟಕ ಪಬ್ಲಿಕ್ ಸ್ಕೂಲ್, ಹುಬ್ಬಳ್ಳಿ ತಾಲೂಕಿನ ಹೆಬಸೂರ ಸರಕಾರಿ ಹಿರಿಯ ಪ್ರಾಥಮಿಕ ಕನ್ನಡ ಹೆಣ್ಣು ಮಕ್ಕಳ ಶಾಲೆ ಹಾಗೂ ಅಳ್ನಾವರದ ಸರಕಾರಿ ಮಾದರಿ ಉರ್ದು ಶಾಲೆಗಳು ‘ಶಾಲಾಸಿರಿ’ ಪ್ರಶಸ್ತಿಗೆ ಆಯ್ಕೆಯಾಗಿವೆ ಎಂದರು.

ಇದೇ ಸಂದರ್ಭದಲ್ಲಿ ಮೇಲಾಟಗಳ ಸಾಧಕಿ ಪ್ರಿಯಾಂಕಾ ಓಲೆಕಾರ, ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ೨ನೇ ರ‍್ಯಾಂಕ್ ಪಡೆದ ಪ್ರೀತಿ ಕೊಟಬಾಗಿ, ಪ್ರಶಸ್ತಿ ಪುರಸೃತ ಹಿರಿಯ ಶಿಕ್ಷಕಿ ಹಸೀನಾ ಸಮುದ್ರಿ, ರಂಗಕಲಾವಿದ ರಾಜೀವಸಿಂಗ್ ಹಲವಾಯಿ ಅವರನ್ನು ಗೌರವಿಸಲಾಗುವುದು.

ಬೆಳಗಾವಿ, ಚಿಕ್ಕಬಳ್ಳಾಪುರ, ಬಾಗಕೋಟ, ಧಾರವಾಡ, ಬೆಂಗಳೂರು ದಕ್ಷಿಣ, ಕಲಬುರ್ಗಿ, ಉತ್ತರಕನ್ನಡ, ಗದಗ, ರಾಯಚೂರು, ಕೋಲಾರ, ಬಳ್ಳಾರಿ, ಬೆಂಗಳೂರು ಉತ್ತರ ಜಿಲ್ಲೆಗಳ ಲೂಸಿ ಸಾಲ್ಡಾನ ಸೇವಾ ಸಂಸ್ಥೆಯ ಜಿಲ್ಲಾ ಸಂಚಾಲಕರು ಹಾಗೂ ಹಲವಾರು ಸಂಘಟನೆಗಳ ಪದಾಧಿಕಾರಿಗಳು ಸಮಾರಂಭದಲ್ಲಿ ಪಾಲ್ಗೊಳ್ಳುವರು.

ಲೂಸಿ ಸಾಲ್ಡಾನ ಸೇವಾ ಸಂಸ್ಥೆಯ ಕಾರ್ಯಾಧ್ಯಕ್ಷ ಅಕ್ಬರಲಿ ಸೋಲಾಪೂರ, ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ತಿಗಡಿ, ಕೋಶಾಧ್ಯಕ್ಷ ಅಜಿತಸಿಂಗ್ ರಜಪೂತ, ಜಿಲ್ಲಾ ಸಂಚಾಲಕ ರುದ್ರೇಶ ಕುರ್ಲಿ ಸುದ್ದಿ ಗೋಷ್ಠಿಯಲ್ಲಿ ಇದ್ದರು.

- Advertisement -
- Advertisement -

Latest News

ಹುಬ್ಬಳ್ಳಿ ಕೊಲೆ ಪ್ರಕರಣ ತನಿಖೆ ಸಿಬಿಐಗೆ ಕೊಡಬೇಕು

ಬೆಂಗಳೂರಿನ ತನ್ನದೆ ಪಕ್ಷದ ಶಾಸಕನ ಮನೆ ಬೆಂಕಿಗೆ ಆಹುತಿಯಾಗುವುದನ್ನು ತಡೆಯದ ಕಾಂಗ್ರೆಸ್, ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ತನ್ನದೆ ಪಕ್ಷದ ನಗರ ಸೇವಕನ ಮಗಳ ಹತ್ಯೆಯನ್ನ...
- Advertisement -

More Articles Like This

- Advertisement -
close
error: Content is protected !!
Join WhatsApp Group