ಬೆಳಗಾವಿ – ಬೆಳಗಾವಿ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತಿನ ಬೆಳ್ಳಿಹಬ್ಬ ಮತ್ತು ನಾಲ್ಕನೆಯ ಜಿಲ್ಲಾ ಸಮ್ಮೇಳನ 2025 ರ ಫೆಬ್ರುವರಿ ೧೫ ಮತ್ತು ೧೬ ರಂದು ಬೆಳಗಾವಿಯಲ್ಲಿ ನಡೆಯಲಿದ್ದು , ಬೆಳ್ಳಿಹಬ್ಬದ ಅಂಗವಾಗಿ ರಾಜ್ಯ ಮಟ್ಟದ ಚುಟುಕು ವಾಚನ ಸ್ಪರ್ಧೆಯನ್ನು ಏರ್ಪಡಿಸಲಾಗುತ್ತಿದೆ ಮತ್ತು ಪ್ರಾತಿನಿಧಿಕ ಚುಟುಕು ಕಾವ್ಯ ಸಂಕಲನವನ್ನೂ ಹೊರತರಲಾಗುತ್ತಿದೆ ಎಂದು ಚುಸಾಪ ಅಧ್ಯಕ್ಷ ಎಲ್ ಎಸ್ ಶಾಸ್ತ್ರಿ ತಿಳಿಸಿದ್ದಾರೆ.
ಪ್ರಕಟಣೆಯೊಂದರಲ್ಲಿ ಈ ಮಾಹಿತಿ ನೀಡಿರುವ ಅವರು, ಸ್ಪರ್ಧೆಯಲ್ಲಿ ಭಾಗವಹಿಸುವವರು ತಲಾ ಮೂರು ಚುಟುಕುಗಳನ್ನು ಓದಲು ಅವಕಾಶವಿದ್ದು, ಅವನ್ನು ಸಂಕಲನದಲ್ಲಿಯೂ ಪ್ರಕಟಿಸಲಾಗುವುದು. ಭಾಗವಹಿಸಲು ಇಚ್ಛಿಸುವವರು ತಮ್ಮ ಸ್ವರಚಿತ ಮೂರು ಚುಟುಕು, ಪೂರ್ಣ ವಿಳಾಸ ಮತ್ತು ಮೊಬೈಲ್ ವಾಟ್ಸಪ್ ನಂಬರು ಸಹಿತ ಪ್ರಧಾನ ಕಾರ್ಯದರ್ಶಿಗಳಿಗೆ ಜನವರಿ ೨೦ ರೊಳಗೆ ೨೫೦ ರೂ. ಪ್ರತಿನಿಧಿ ಶುಲ್ಕದೊಂದಿಗೆ ಕಳಿಸಿ ಹೆಸರು ದಾಖಲಿಸಿಕೊಳ್ಳಬೇಕು. ವಯೋಮಿತಿಯಿಲ್ಲ. ಪ್ರತಿನಿಧಿಗಳಾದವರಿಗೆ ಎರಡು ದಿನ ಊಟ ಉಪಾಹಾರ, ಚುಟುಕು ಸಂಕಲನ , ಮೊಮೆಂಟೊ ನೀಡಲಾಗುವುದು. ಹೊರಗಿನ ಜಿಲ್ಲೆಗಳಿಂದ ಬರುವವರಿಗೆ ಸಾಮೂಹಿಕ ವಸತಿ ವ್ಯವಸ್ಥೆ ಇರುತ್ತದೆ. ( ಮಹಿಳೆಯರಿಗೆ ಪ್ರತ್ಯೇಕ) ಎಂದು ತಿಳಿಸಿದ್ದಾರೆ.
ಚುಟುಕು ಕಳಿಸುವ ವಿಳಾಸ :
ಬಸವರಾಜ ಗ ಗಾರ್ಗಿ
ಹೊಂಗನಸು # 73
ರಾಣಿ ಚೆನ್ನಮ್ಮ ಹೌಸಿಂಗ್ ಸೊಸೈಟಿ ಶ್ರೀನಗರ
ಬೆಳಗಾವಿ 590017,
..ಮೊ. ನಂ *8762889099* / *8453500025* . ……..
ಬೆಳಗಾವಿ. ಹಣ ಕಳಿಸುವ ಫೋನ್ ಪೇ ನಂಬರು… *9538340284* *ಅನ್ನಪೂರ್ಣ* *ಹಿರೇಮಠ*
ವಾಟ್ಸಪ್ ಗ್ರುಪ್ ರಚನೆ :
ಜಿಲ್ಲಾ / ತಾಲುಕಾ ಚುಟುಕು ಸಾಹಿತ್ಯ ಪರಿಷತ್ತಿನ ಸರ್ವ ಸದಸ್ಯರ ಗಮನಕ್ಕೆ….
**********
ಫೆಬ್ರುವರಿ ೧೫/೧೬/೨೦೨೫ ರಂದು ನಡೆಯಲಿರುವ ಬೆಳ್ಳಿಹಬ್ಬ ಮತ್ತು ೪ ನೇ ಜಿಲ್ಲಾ ಸಮ್ಮೇಳನಕ್ಕೆ ಇನ್ನು ಎರಡು ತಿಂಗಳು ಇದ್ದು ಈ ಸಮಾರಂಭದ ಎಲ್ಲ ಮಾಹಿತಿಗಳನ್ನು ನಿಮ್ಮೊಡನೆ ಹಂಚಿಕೊಳ್ಳಲು, ಮೊನ್ನೆ ಡಿ. ೧೫ ರಂದು ನಡೆದ ಸಭೆಯಲ್ಲಿ ನಿರ್ಣಯಿಸಿದಂತೆ , ಒಂದು ಪ್ರತ್ಯೇಕ ವಾಟ್ಸಪ್ ಗುಂಪು ರಚಿಸಲಾಗುತ್ತಿದೆ. ಅದರಲ್ಲಿ ಪ್ರತಿ ದಿನ ಬೆಳ್ಳಿ ಹಬ್ಬ/ ಸಮ್ಮೇಳನಕ್ಕೆ ಸಂಬಂಧಿಸಿದ ಬೆಳವಣಿಗೆಗಳನ್ನು, ಸದಸ್ಯರು ಮಾಡಬೇಕಾದ ಕೆಲಸ ಕಾರ್ಯಗಳನ್ನು ಹಾಕುವುದರೊಡನೆ ಸದಸ್ಯರ ಸಲಹೆ ಸೂಚನೆಗಳನ್ನು ಸಹ ಸ್ವೀಕರಿಸಲಾಗುವುದು. ಸ್ವಾಗತ ಸಮಿತಿ/ ಜಿಲ್ಲಾ ಸಮಿತಿ/ ತಾಲುಕಾ ಸಮಿತಿಗಳ ನಡುವಿನ ಸಮನ್ವಯದ / ಸಂಪರ್ಕದ ಕೊಂಡಿಯಾಗಿ ಈ ಗುಂಪು ಕಾರ್ಯ ನಿರ್ವಹಿಸಲಿದೆ. ಸಮಾರಂಭದ ಯಶಸ್ಸಿಗೆ ಇದು ಪೂರಕ/ ಪ್ರೇರಕ ಆಗಲಿದೆ ಎಂದು ನಮ್ಮ ಭಾವನೆ.
ಆದರೆ ಇದೇ ವೇಳೆಗೆ ಈ ವಾಟ್ಸಪ್ ಗುಂಪಿನಲ್ಲಿ ಬೆಳ್ಳಿ ಹಬ್ಬ / ಸಮ್ಮೇಳನಗಳ ಸುದ್ದಿ ಹೊರತಾಗಿ ಬೇರೆ ಯಾವ ವಿಷಯವನ್ನೂ ಹಾಕುವಂತಿಲ್ಲ. ಕವನ, ಚುಟುಕು, ಹಾಸ್ಯ, ಶುಭಾಶಯ , ಶುಭೋದಯ ಮುಂತಾದವುಗಳಿಗೆ ನಿಷೇಧವಿದೆ. ಅವಕ್ಕೆಲ್ಲ ಬೇರೆ ವೇದಿಕೆಗಳಿವೆ. ಸಮಾರಂಭದ ಯಶಸ್ಸಿಗೆ ಅಗತ್ಯವಾದ, ಉಪಯುಕ್ತವಾದ ಯಾವುದೇ ಮಾಹಿತಿಗೂ ಸ್ವಾಗತ. ನಮ್ಮ ಪ್ರ. ಕಾರ್ಯದರ್ಶಿ ಬಸವರಾಜ ಗಾರ್ಗಿಯವರು ತಮಗೆಲ್ಲ ಹೊಸ ವಾಟ್ಸಪ್ ಗುಂಪಿನ ಬಗ್ಗೆ ತಿಳಿಸುತ್ತಾರೆ. ಒಂದು ದಿನ ಕಾದು ನೋಡಿ. ಸದಸ್ಯರಾಗಿ ಸೇರಿಕೊಳ್ಳಿ. ಸಹಕರಿಸಿ.
– ಎಲ್. ಎಸ್. ಶಾಸ್ತ್ರಿ
ಅಧ್ಯಕ್ಷ, ಜಿಲ್ಲಾ ಚುಸಾಪ
ಬೆಳಗಾವಿ