- Advertisement -
ಮಂಗಳೂರು – ಕರ್ನಾಟಕ ಗಜಲ್ ಅಕಾಡೆಮಿ ಹಾಗೂ ಗುಲ್ಬರ್ಗ ವಿ.ವಿಯಿಂದ ಆ. 25 ರಂದು ಅಖಿಲ ಕರ್ನಾಟಕ ಪ್ರಥಮ ಗಜಲ್ ಸಮ್ಮೇಳನವು ಕಲಬುರ್ಗಿಯಲ್ಲಿ ನಡೆಯಲಿದೆ.
ಗಜಲ್ ಗಾರುಡಿಗ ಶಾಂತರಸರ ಹೆಸರಿನ ವೇದಿಕೆಯಲ್ಲಿ ನಡೆಯುವ ಈ ಸಮ್ಮೇಳನದ ಅಧ್ಯಕ್ಷತೆಯನ್ನು ಹಿರಿಯ ಗಜಲ್ ಕಾರ್ತಿ ಪ್ರಭಾವತಿ ದೇಸಾಯಿ ಯವರು ವಹಿಸಲಿರುವರು.
ಈ ಗಜಲ್ ಸಮ್ಮೇಳನವನ್ನು ಸಂಸದ ರಾಧಾಕೃಷ್ಣ ದೊಡ್ಡಮನಿ ಉದ್ಘಾಟಿಸಲಿದ್ದಾರೆ. ರಾಜ್ಯದ ಬಹುತೇಕ ಜಿಲ್ಲೆಗಳ ಗಜಲ್ ಕವಿಗಳು ಭಾಗವಹಿಸುವ ಈ ಸಮಾರಂಭದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಪ್ರತಿನಿಧಿಯಾಗಿ ಮಂಗಳೂರಿನ ವೈದ್ಯ ಹಾಗೂ ಬರಹಗಾರ ಡಾ.ಸುರೇಶ ನೆಗಳಗುಳಿ ಯವರು ಕರ್ನಾಟಕದಲ್ಲಿ ಗಜಲ್ ನಡೆದು ಬಂದ ಹಾದಿ ಎಂಬ ಗೋಷ್ಢಿಯ ಚಾಲನೆ ನೀಡಲಿದ್ದಾರೆ ಹಾಗೂ ಖ್ಯಾತ ಕವಿ ಹಾ.ಮ.ಸತೀಶರವರು ಭಾಗವಹಿಸುವರು ಎಂದು ಸಮ್ಮೇಳನದ ಸಂಚಾಲಕ ಮಹೀಪಾಲ ರೆಡ್ಡಿ ಮುನ್ನೂರ್ ತಿಳಿಸಿರುತ್ತಾರೆ.