ಇಂದು ರಾಜ್ಯ ಮಟ್ಟದ ಅಂತರ್ಜಾಲ ರಸಪ್ರಶ್ನೆ ಸ್ಪರ್ಧೆ

Must Read

ಮೂಡಲಗಿ: ಬೆಂಗಳೂರು ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ಮತ್ತು ರಾಜ್ಯದ ಸರ್ವ ಜಿಲ್ಲಾ ಹಾಗೂ ತಾಲ್ಲೂಕು ಸಮಿತಿಯ ಸಹಯೋಗದೊಂದಿಗೆ ರಾಜ್ಯ ಮಟ್ಟದ   ನೈರ್ಮಲ್ಯ ಹಾಗೂ ಆರೋಗ್ಯ ವಿಷಯ ಕುರಿತು ಉಚಿತ “ಅಂತರ್ಜಾಲ ರಸಪ್ರಶ್ನೆ ಸ್ಪರ್ಧೆ”ಯನ್ನು ರಾಜ್ಯದ ಸರ್ಕಾರಿ, ಅನುದಾನಿತ ಹಾಗೂ ಖಾಸಗಿ ಶಾಲೆಗಳ  6, 7, 8 ಮತ್ತು 9ನೆಯ ತರಗತಿಯ  ಶಾಲೆಯ  ಸಮಸ್ತ ವಿದ್ಯಾರ್ಥಿಗಳಿಗೆ ದಿ: 19. 03. 2023 ರ ರವಿವಾರದಂದು ಬೆಳಿಗ್ಗೆ 11.00 ರಿಂದ 11.30 ರವರೆಗೆ ಆಯೋಜಿಸಲಾಗಿದೆ.

ರಾಜ್ಯ ಮಟ್ಟದಲ್ಲಿ ಮೊದಲ ಮೂರು ಸ್ಥಾನಗಳಿಗೆ ಪ್ರಥಮ ರೂ. 5000, ರೂ. ದ್ವಿತೀಯ ರೂ. 4000 ಹಾಗೂ ತೃತೀಯ ರೂ. 3000 ರಂತೆ ಮತ್ತು ಜಿಲ್ಲಾ ಹಂತದಲ್ಲಿ ಮೊದಲ ಎರಡು ಸ್ಥಾನಗಳಿಗೆ ಪ್ರಥಮ ರೂ. 2000, ದ್ವಿತೀಯ ರೂ. 1000 ರಂತೆ ಪ್ರಮಾಣ ಪತ್ರ ಸಹಿತ ಬಹುಮಾನ ನೀಡಲಾಗುವುದು. 

ಭಾಗವಹಿಸಿದ ಪ್ರತಿ ವಿದ್ಯಾರ್ಥಿಗೂ ಪ್ರಮಾಣ ಪತ್ರ ವಿತರಿಸಲಾಗುವುದು. ನೋಂದಾಯಿತ ವಿದ್ಯಾರ್ಥಿ ವೃಂದವು ಸಕಾಲದಲ್ಲಿ ಹಾಜರಾಗಿ ಫಲಾನುಭವಿಗಳಾಗಲು ಈ ಮುಖೇನ ಸೂಚಿಸಲಾಗಿದೆ.

ಸಮಸ್ತ ಶಾಲೆಯ ಮುಖ್ಯೋಪಾಧ್ಯಾಯರು, ಮಾರ್ಗದರ್ಶಿ/ನೋಡಲ್ ಶಿಕ್ಷಕರು ಮೇಲ್ವಿಚಾರಣೆ ವಹಿಸಲು ಕೋರಲಾಗಿದೆ. ಹೆಚ್ಚಿನ ಮಾಹಿತಿಗೆ 9980149774 ಕ್ಕೆ ಸಂಪರ್ಕಿಸಿ ಎಂದು ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ಮೂಡಲಗಿ ತಾಲೂಕಾ ಘಟಕದ ಅಧ್ಯಕ್ಷ ಬಸವರಾಜ ಭಜಂತ್ರಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Latest News

ಸಿಂದಗಿ : ಕ್ರೀಡಾಕೂಟದ ಸಿದ್ಧತೆ ಪರಿಶೀಲಿಸಿದ ಶಾಸಕ ಮನಗೂಳಿ

ಸಿಂದಗಿ; ನಶಿಸಿ ಹೋಗುತ್ತಿರುವ ದೇಶಿಯ ಕ್ರೀಡೆಗಳ ಉತ್ತೇಜನಕ್ಕಾಗಿ ಶಿಕ್ಷಣ ಇಲಾಖೆಗೆ ಮನವಿ ಮಾಡಿಕೊಂಡ ಹಿನ್ನೆಲೆಯಲ್ಲಿ ಇದೇ ಅ. ೨೩,೨೪,೨೫ ರಂದು ಪದವಿಪೂರ್ವ ಕಾಲೇಜುಗಳ ರಾಜ್ಯಮಟ್ಟದ ಕುಸ್ತಿ...

More Articles Like This

error: Content is protected !!
Join WhatsApp Group