ಸಿಂದಗಿ: ತಂಬಾಕು ವಸ್ತುಗಳ ಸೇವನೆಯಿಂದ ದಮ್ಮು, ಕೆಮ್ಮು, ದೇಹದಲ್ಲಿ ಉಸಿರಾಟದ ತೊಂದರೆ ಅಸ್ತಮಾ ಸೇರಿದಂತೆ ಅನೇಕ ರೋಗಗಳಿಗೆ ತುತ್ತಾಗಬೇಕಾಗುತ್ತದೆ ಕಾರಣ ತಂಬಾಕು ಸೇವನೆ ಬಿಡಲು ನಿರ್ಧರಿಸಿರಿ ಮತ್ತು ಅದಕ್ಕೆ ಬದ್ದರಾಗಿರಿ ಅದರಿಂದ ದೂರವಿರಿ ಎಂದು ಸಾರ್ವಜನಿಕರಿಗೆ ತಹಶೀಲ್ದಾರ ಸಂಜೀವಕುಮಾರ ದಾಸರ ಮನವಿ ಮಾಡಿದರು.ಅವರು ಪಟ್ಟಣದಲ್ಲಿ ಜಿಲ್ಲಾ ಮತ್ತು ತಾಲೂಕಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಸರ್ವೇಕ್ಷಣಾಧಿಕಾರಿಗಳ ಕಛೇರಿ ಜಿಲ್ಲಾ ತಂಬಾಕು ನಿಯಂತ್ರಣ ಘಟಕ ಮತ್ತು ತಾಲೂಕಾ ಆಡಳಿತ ಬುಧವಾರ ಹಮ್ಮಿಕೊಂಡಿರುವ ಗುಲಾಬಿ ಆಂದೋಲನಕ್ಕೆ ಚಾಲನೆ ನೀಡಿ ಮಾತನಾಡಿ, ತಂಬಾಕು ಸೇವನೆ ನಮ್ಮ ಆರೋಗ್ಯವನ್ನು ಹಾಳು ಮಾಡುತ್ತದೆ. ಹಸಿವನ್ನು ಕಡಿಮೆ ಮಾಡುತ್ತದೆ ಇದರಿಂದ ಮಾದಕ ವಸ್ತುಗಳ ಸೇವನೆಯಿಂದ ನಾವೆಲ್ಲ ದೂರವಿರಬೇಕು ಎಂದರು.
ಈ ಸಂದರ್ಭದಲ್ಲಿ ಗುಲಾಬಿ ಆಂದೋಲನ ಜಾಥಾ ಮಾರ್ಗದಲ್ಲಿ ಧೂಮಪಾನ ಮಾಡುವ ವ್ಯಕ್ತಿಗಳಿಗೆ ಮತ್ತು ಪಾನ ಬೀಡಾ ಅಂಗಡಿಗಳ ಮಾಲಿಕರಿಗೆ ಗುಲಾಬಿ ಹೂವನ್ನು ನೀಡುತ್ತಾ ಜಾಗೃತಗೊಳಿಸಿದರು.
ಜಾಥಾದಲ್ಲಿ ಆಲಮೇಲ ತಹಶೀಲ್ದಾರ ಗೋವಿಂದರಾಜು, ಜಿಲ್ಲಾ ತಂಬಾಕು ನಿಯಂತ್ರಣ ಘಟಕದ ಜಿಲ್ಲಾ ಸಲಹೆಗಾರ ಡಾ. ಪ್ರಕಾಶ, ಪಿಎಸ್‍ಆಯ್ ನಿಂಗಪ್ಪ ಪೂಜಾರಿ, ಆರೋಗ್ಯ ಇಲಾಖೆಯ ಆರೋಗ್ಯಶಿಕ್ಷಣಾಧಿಕಾರಿ ಎಸ್.ಡಿ.ಕುಲಕರ್ಣಿ, ಶ್ರೀಕಾಂತ ಪೂಜಾರಿ, ಅಬಕಾರಿ ಅಧಿಕಾರಿ ಆರತಿ ಖೈನೂರ, ಬಿ.ವಾಯ್.ಚೌಡಕಿ, ಮಲ್ಲಿಕಾರ್ಜುನ ಸಾವಳಸಂಗ, ಪುರಸಭೆಯ ಅಧಿಕಾರಿಗಳು, ಆಶಾ ಕಾರ್ಯಕರ್ತರು, ತಾರಾ ಪ್ಯಾರಾ ಮೆಡಿಕಲ್ ವಿದ್ಯಾರ್ಥಿಗಳು ಸೇರಿದಂತೆ ಹಲವರು ಜಾಥಾದಲ್ಲಿ ಭಾಗವಹಿಸಿದ್ದರು.