ಸಿಂದಗಿ: ವಿಜಯಪುರ ಜಿಲ್ಲೆಯಲ್ಲಿ ತೋಟಗಾರಿಕೆ ಬೆಳೆಗಳು ಹೆಚ್ಚಿದ್ದು ಅದರಲ್ಲಿ ಇಂಡಿ ಸಿಂದಗಿ ಭಾಗದಲ್ಲಿ ಲಿಂಬೆ ಬೆಳೆ ಹೆಚ್ಚಿಗೆ ಬೆಳೆಯುತ್ತಿರುವುದರಿಂದ ಇಲ್ಲಿ ಲಿಂಬೆ ಅಭಿವೃದ್ಧಿ ಮಂಡಳಿ ಕಾರ್ಯಾಲಯ ಕಟ್ಟಡ ಹಾಗೂ ಸಿಂದಗಿ ಕೋಲ್ಡ್ ಸ್ಟೊರೇಜ್ ನಿರ್ಮಿಸಲು ಸರಕಾರದಿಂದ ಪ್ರಥಮ ಆದ್ಯತೆ ನೀಡುವುದಾಗಿ ತೋಟಗಾರಿಕೆ ಇಲಾಖೆ ಸಚಿವ ಮುನಿರತ್ನ ಭರವಸೆ ನೀಡಿದರು.
ಅವರು ವಿಜಯಪುರ ಜಿಲ್ಲೆಯ ಪ್ರವಾಸ ಸಂದರ್ಭದಲ್ಲಿ ವಿಜಯಪುರದ ಗೋಲಗುಂಬಜ ಐತಿಹಾಸಿಕ ಸ್ಥಳಗಳ ವೀಕ್ಷಣೆ ಮಾಡಿ ಕನ್ನೊಳ್ಳಿಯ ಲಿಂಬೆಯ ಸಾವಯವ ರೈತ ದಶರಥಸಿಂಗ ರಜಪೂತ ತೋಟಕ್ಕೆ ಭೇಟಿ ನೀಡಿ ರೈತರ ಸಮೂಹ ಉದ್ದೇಶಿಸಿ ಮಾತನಾಡಿದರು.
ನಂತರ ಕರ್ನಾಟಕ ರಾಜ್ಯ ಲಿಂಬೆ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಅಶೋಕ ಎಸ್ ಅಲ್ಲಾಪೂರ ರವರ ಮನೆಯಲ್ಲಿ ಆದರ ಆತಿಥ್ಯವನ್ನು ಸ್ವೀಕರಿಸಿದರು. ಈ ಸಂದರ್ಭದಲ್ಲಿ ಹಾವೇರಿಯ ಶ್ರೀ ಗುರೂಜಿಯವರು ಆಗಮಿಸಿದ್ದರು. ಹಿರಿಯರಾದ ಸಿ ಎಸ್ ನಾಗೂರ್, ಎಂ ಎಸ್ ಮಠ, ರಮೇಶ ಪೂಜಾರಿ, ಸುರೇಶ ಮಳಲಿ, ಸಾಯಬಣ್ಣ ದೇವರಮನಿ, ಸಿದ್ದಣ್ಣ ಪೂಜಾರಿ, ರಾಮು ಜೋಶಿ, ಕರಿಯಪ್ಪ ಪೂಜಾರಿ, ಸೇರಿದಂತೆ ಇನ್ನಿತರ ಕಾರ್ಯಕರ್ತರು ಉಪಸ್ಥಿತರಿದ್ದರು.