ಗಣಪತಿ ಜೀವನ
ಶಿವನ ಸತಿ ಪಾರ್ವತಿ ಸ್ನಾನ ಮಾಡಲು ಹೊರಡಲು
ಚಿಂತೆಯು ಮೂಡಿತು ಮನಸ್ಸಿಲ್ಲಿ ಬಾಗಿಲ ಕಾಯಲು
ಕಾವಲುಗಾರನನ್ನು ನೇಮಿಸುವ ಅಡೆ-ತಡೆ ಕಾಡಲು
ಮೈಯ ಮಣ್ಣಿನಲ್ಲಿ ಮೂರ್ತಿಯ ಮಾಡಿದಳು.. !!೦೧!!
ಮಣ್ಣಿನ ಮೂರ್ತಿಗೆ ಜೀವವ ತುಂಬಿಸಿ
ಯಾರೆ ಬಂದರೂ ಬಿಡದಿರು ಎಂದು ಆಜ್ಞೆಯಿಸಿ
ಹೊರಟಳು ಪಾರ್ವತಿ ಸ್ನಾನದ ಕೊಣೆಯ ಒಳಗೆ
ಮರುಕ್ಷಣವೇ ಈಶ್ವರ ಬಂದನು ಕೊಣೆಯ ಬಾಗಿಲಿಗೆ.. !!೦೨!!
ಮಗುವನ್ನು ಕಂಡು ಪಾರ್ವತಿ ನೋಡಲು ಕೇಳಿದನು
ಒಳಗಡೆ ಬಿಡಲು ತಡೆದನು ಬಾಲಕ ನೀಲಕಂಠನನ್ನು
ನೇರ ನುಡಿಗೆ ದ್ವಾರದಲ್ಲಿ ಹರಿ ಕೋಪಿಸಿಕೊಂಡನು
ಕೋಪದಿಂದ ವಿಷಕಂಠ ಬಾಲಕನ ತಲೆ ಕತ್ತರಿಸಿದನು.. !೦೩!!
ಪಾರ್ವತಿ ದೇವಿ ಪೂಜೆ ಮಾಡಲು ಅಣಿಯಾದಳು
ಗಣಪತಿ ಮಾತೆ ದು:ಖಿತಳಾಗಿ ರಭಸವಾಗಿ ಬಂದಳು
ಬಾಲಕ ವಿರೂಪಗೊಂಡ ದೇಹದ ರೂಪವ ಕಂಡಳು
ಮರ-ಮರ ನಲುಗಿ ನಾಲಿಗೆ ಕಚ್ಚಿ ನೆಲಕ್ಕೆ ಉರುಳಿದಳು. !!೦೪!!
ಪುತ್ರನನ್ನು ಬದುಕಿಸು ಎಂದು ಬೇಡಿದಳು ಪತಿಯನ್ನು
ಸತಿಯ ತಾಪತ್ರೆ ತಾಳದೆ ಮಂತ್ರಿಗಳನ್ನು ಕರೆಸಿದನು
ಉತ್ತರ ದಿಕ್ಕಿಗೆ ಮಲಗಿದ ಪ್ರಾಣಿ ಶಿರ ತನ್ನಿರಿ ಎಂದನು
ನೋಡುತ ಹೋದ ಸೇವಕ ಆನೆಯ ತಲೆ ತಂದನು.. !!೦೫!!
ಬಾಲಕನಿಗೆ ಆನೆ ತಲೆ ಜೋಡಿಸಿ ಜೀವವ ನೀಡಿದನು
ಚಿಕ್ಕ ಕಣ್ಣಿನ ದೊಡ್ಡ ಹೊಟ್ಟೆಯ ಗಣಪತಿಯಾದನು
ಅಗಲ ಕಿವಿಯ ಉದ್ದದ ಸೊಂಡಿಯ ಗಜಮುಖನದನು
ಒಂದಿನವಾಸಿಸಿ ಭಕ್ತರ ಕೈಯಲ್ಲಿ ನೀರಿಗೆ ಹಾರುವನು.. !!೦೬!!
“ಮದ್ದಾನೆಪ್ಪ ಹೆಚ್ ಮನ್ನಾಪೂರ “
ಸಾ॥ ಕಾಮನೂರು.ತಾ॥ಜಿ॥ಕೊಪ್ಪಳ.
೯೭೪೦೨೧೬೯೭೩,೬೩೬೨೨೯೪೬೮೮.