spot_img
spot_img

ಅರಭಾವಿ ಕ್ಷೇತ್ರದಲ್ಲಿ ಕಾಂಗ್ರೆಸ್ ಬಲಪಡಿಸಿ – ಮೃಣಾಲ ಹೆಬ್ಬಾಳಕರ

Must Read

spot_img

ಮೂಡಲಗಿ – ಅರಭಾವಿ ಕ್ಷೇತ್ರದ ಆಶೋತ್ತರಗಳಿಗೆ ಸ್ಪಂದಿಸುವದು ನಮ್ಮ ಕರ್ತವ್ಯವಾಗಿದ್ದು, ಕ್ಷೇತ್ರದಲ್ಲಿಯ ರಸ್ತೆ ಗುಡಿ, ಗುಂಡಾರಗಳಿಗೆ ಯಾವುದೇ ಅಭಿವೃದ್ದಿಕಾರ್ಯಗಳಿಗೆ ವಿಧಾನ ಪರಿಷತ್ ನಿಧಿಯಿಂದ ಕೆಲಸ ಮಾಡುವುದಾಗಿ ಬೆಳಗಾವಿ ಜಿಲ್ಲಾ ಯುವ ಕಾಂಗ್ರೆಸ್ ಉಪಾಧ್ಯಕ್ಷ ಮೃಣಾಲ ಹೆಬ್ಬಾಳ್ಕರ ಹೇಳಿದರು.

ತಾಲೂಕಿನ ಗುರ್ಲಾಪೂರ ಗ್ರಾಮದ ಪ್ರವಾಸಿ ಮಂದಿರಲ್ಲಿ ಅರಭಾವಿ ಬ್ಲಾಕ್ ಕಾಂಗ್ರೆಸ್ ಪಕ್ಷದ ಯುವ ಘಟಕದ ಪೂರ್ವಭಾವೀ ಸಭೆಯಲ್ಲಿ ಮಾತನಾಡಿದರು.

ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ಪ್ರಧಾನ ಕಾರ್ಯದರ್ಶಿ ಬಂಟಿ ಶೇಳಕೆ ಮಾತನಾಡಿ, ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷವನ್ನು ಬಲಪಡಿಸಲು ಯುವಕರು ಮುಂದಾಗಬೇಕು. ಆಡಳಿತ ಬಿಜೆಪಿ ಸರಕಾರದ ವೈಫಲ್ಯಗಳನ್ನು ಜನರಿಗೆ ತಿಳಿಸಿ, ಅರಭಾವಿ ಕ್ಷೇತ್ರದಲ್ಲಿ ರಸ್ತೆಗಳು ಹಾಳಾಗಿ ಗುಂಡಿಗಳಿಂದ ತುಂಬಿದ್ದು ಅವುಗಳ ಕಾರ್ಯ ಆಗುವವರೆಗೂ ಸರಕಾರದ ವಿರುದ್ದ ಯುವ ಕಾರ್ಯಕರ್ತರು ಆಂದೋಲನ ಮಾಡಬೇಕು ಎಂದರು.

ಮಹಾರಾಷ್ಟ್ರದ ಯುವ ಕಾಂಗ್ರೆಸ್‌ ಮುಖಂಡ ಶಂಭುರಾಜೇ ದೇಸಾಯಿ, ಬೆಳಗಾವಿ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಕಾರ್ತಿಕ್ ಪಾಟೀಲ ಮಾತನಾಡಿದರು.

ಅಧ್ಯಕ್ಷತೆ ವಹಿಸಿದ್ದ ಅರಭಾವಿ ಕಾಂಗ್ರೆಸ್ ಪಕ್ಷದ ಮುಖಂಡ ಅರವಿಂದ ದಳವಾಯಿ ಮಾತನಾಡಿ, ಬಿಜೆಪಿ ಸರಕಾರ ಬಂದಾಗಿನಿಂದ ಬೆಲೆ ಏರಿಕೆ ಗಗನಕ್ಕೆ ಏರುತ್ತಿದ್ದು, ನಿತ್ಯ ಬಳಕೆಯ ಹಾಲು ಮೊಸರುಗಳ ಮೇಲೆ ಜಿಎಸ್‍ಟಿ ಹೇರಿ ಬಡಬಗ್ಗರ ಮೇಲೂ ಬೆಲೆ ದಬ್ಬಾಳಿಕೆಯಾಗಿದೆ. ಅರಭಾವಿಯಲ್ಲಿ ಬದಲಾಣೆಯಾಗಬೇಕಾದರೆ, ರಾಜ್ಯದಲ್ಲಿ ಬದಲಾಣೆಯಾಗಬೇಕಾದರೇ, 40% ಕಮಿಷನ್ ಸರಕಾರ ಬದಲಾಣೆಯಾಗಬೇಕಾದರೆ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರುವಲ್ಲಿ ಯುವ ಕಾರ್ಯಕರ್ತರು ಕ್ರಿಯಾಶೀಲರಾಗಿ ಕಾರ್ಯರ್ನಿಹಿಸಬೇಕಾಗಿದೆ ಎಂದರು.

ಸಭೆಯಲ್ಲಿ ಕಾಂಗ್ರೆಸ್ ಯುವ ಘಟಕದ ವಿವಿಧ ಪದಾಧಿಕಾರಿಗಳಿಗೆ ಆದೇಶ ಪತ್ರ ನೀಡಲಾಯಿತು.

ಅಲ್ಪ ಸಂಖ್ಯಾತರ ಘಟಕದ ಅಧ್ಯಕ್ಷ ಸಲೀಂ ಇನಾಮದಾರ, ಅರಭಾವಿ ಯುವ ಘಟಕದ ಅಧ್ಯಕ್ಷ ಇರ್ಷಾದ ಪೈಲವಾನ, ವಿಠಲ ಖಾನಟ್ಟಿ, ವಿರೂಪಾಕ್ಷ ಮುಗಳಖೋಡ, ಬಸಗೌಡ ಪಾಟೀಲ (ಪಟಗುಂದಿ) ಚಂದ್ರು ನಾಯಿಂಗ್ಲಜ ಹಾಗೂ ಯುವ ಕಾರ್ಯಕರ್ತರು, ಮಹಿಳಾ ಕಾರ್ಯಕರ್ತರು ಉಪಸ್ಥಿತರಿದ್ದರು.

- Advertisement -

LEAVE A REPLY

Please enter your comment!
Please enter your name here

- Advertisement -

Latest News

ಸಾಹಿತ್ಯ ಕ್ಷೇತ್ರದಲ್ಲಿ ರಶ್ಮಿಯಾಗಿ ಹೊಳೆದ ವಿ.ಕೃ.ಗೋಕಾಕ್!

ಬೇರೆಯವರ ಮೇಲೆ ಅವಲಂಬಿತವಾದ ಬದುಕು, ಸಾಧನೆ “ಮರವನ್ನು ಆಶ್ರಯಿಸಿ ಬೆಳೆದ ಬಳ್ಳಿಯಂತೆ” ಆಶ್ರಯ ತಪ್ಪಿದಾಗ ಅದು ನೆಲಕಚ್ಚುವುದು ಎಂದವರು ವಿನಾಯಕ ಕೃಷ್ಣ ಗೋಕಾಕ್ (ವಿ.ಕೃ.ಗೋಕಾಕ್). ಕನ್ನಡಕ್ಕೆ...
- Advertisement -

More Articles Like This

- Advertisement -
close
error: Content is protected !!