Homeಸುದ್ದಿಗಳುಹೃದಯಾಘಾತಕ್ಕೆ ಮಾನಸಿಕ ಒತ್ತಡ ಕಾರಣ.- ಡಾ. ಶ್ರೀಧರ್ ಕುಲಕರ್ಣಿ

ಹೃದಯಾಘಾತಕ್ಕೆ ಮಾನಸಿಕ ಒತ್ತಡ ಕಾರಣ.- ಡಾ. ಶ್ರೀಧರ್ ಕುಲಕರ್ಣಿ

ಧಾರವಾಡ – ಆಧುನಿಕ ತಂತ್ರಜ್ಞಾನದ ಬಳಕೆಯಿಂದ ಜೀವನ ಶೈಲಿ ಬದಲಾಗಿದೆ. ಧಾವಂತ ಜಗತ್ತಿನಲ್ಲಿ ಮಾನಸಿಕ ಒತ್ತಡ ಕೂಸಿನಿಂದ ವಯೋವೃದ್ಧರ ವರೆಗೆ ಸಾಮಾನ್ಯವಾಗಿದೆ. ಇದಕೆ ಪರಿಹಾರ ಸಂಗೀತ, ಧ್ಯಾನ, ಆಹಾರ ಪದ್ಧತಿ ನಿಯಮ ಪಾಲಿಸಬೇಕೆಂದು ಮಾನಸಿಕ ತಜ್ಞರಾದ ಡಾ. ಶ್ರೀಧರ್ ಕುಲಕರ್ಣಿ ಅವರು ಧಾರವಾಡ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಹಾಗೂ ಸರ್ಕಾರಿ ಪದವಿ ಪೂರ್ವ ಕಾಲೇಜು, ಧಾರವಾಡ ಸಂಯುಕ್ತ ಆಶ್ರಯದಲ್ಲಿ ಏರ್ಪಡಿಸಿದ್ದ ಲಿಂ. ಗುರಪ್ಪ ಹಾಗೂ ಗೌರಮ್ಮ ಬೆಲ್ಲದ ದತ್ತಿ, ಶ್ರೀಮತಿ ಶಿವಲಿಂಗಮ್ಮ ಕಟ್ಟಿ ದತ್ತಿ, ಲಿಂ. ವೀರಪ್ಪ ವೀರಭದ್ರಪ್ಪ ಗಡಾದ ದತ್ತಿ ಹಾಗೂ ಶ್ರೀ ಚಂದ್ರಶೇಖರ ಗೌಡ ಬಸನಗೌಡ ಪಾಟೀಲ ದತ್ತಿ ಉಪನ್ಯಾಸ ಕಾರ್ಯಕ್ರಮ ದಲ್ಲಿ ತಿಳಿಸಿದರು.

ಹಿರಿಯ ಪತ್ರಕರ್ತ ಮನೋಜಗೌಡ ಪಾಟೀಲ ಕಾರ್ಯಕ್ರಮ ಉದ್ಘಾಟಿಸಿ, ಇಂದಿನ ಮೊಬೈಲ್ ಯುಗದಲ್ಲಿ ಓದಿನ ಕಡೆ ತಮ್ಮ ಸರ್ವತೋಮುಖ ಅಭಿವೃದ್ಧಿ ಮಾಡಿಕೊಳ್ಳಲು ಕರೆ ನೀಡಿದರು.

ಇದೇ ಸಂದರ್ಭದಲ್ಲಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ ಪರೀಕ್ಷೆ ಯಲ್ಲಿ ಕಲಾ, ವಾಣಿಜ್ಯ ಹಾಗೂ ವಿಜ್ಞಾನ ವಿಭಾಗದಲ್ಲಿ ಕಾಲೇಜಿಗೆ ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನ ಪಡೆದ ವಿದ್ಯಾರ್ಥಿಗಳಿಗೆ ಸನ್ಮಾನ ಮಾಡಿ ಗೌರವಿಸಲಾಯಿತು.‌

ಅದೇ ರೀತಿ ಕರ್ನಾಟಕ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಚಂದ್ರಕಾಂತ ಬೆಲ್ಲದ,  ಗುರು ಹಿರೇಮಠ, ಡಾ. ಶ್ರೀಧರ್ ಕುಲಕರ್ಣಿ,  ಮನೋಜಗೌಡ ಪಾಟೀಲ ಅವರನ್ನು ಸನ್ಮಾನಿಸಲಾಯಿತು.‌ ಶ್ರೀಮತಿ ಪ್ರಮೀಳಾ ಜಕ್ಕನ್ನವರ ಹಾಗೂ ಎಫ್ ಬಿ ಕಣವಿ ಕನ್ನಡ ನಾಡು ನುಡಿ ಗೀತೆಗಳನ್ನು ಪ್ರಸ್ತುತ ಪಡಿಸಿದರು.‌ ಚಂದ್ರಕಾಂತ ಬೆಲ್ಲದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಡಾ. ಲಿಂಗರಾಜ ಅಂಗಡಿ ಸ್ವಾಗತಿಸಿದರು. ಪ್ರೊ. ಕೆ ಎಸ್ ಕೌಜಲಗಿ ನಿರೂಪಿಸಿದರು.‌ ಮಹಾಂತೇಶ ನರೇಗಲ್ ಪ್ರಾರ್ಥಿಸಿದರು. ಪ್ರೊ.ಶೇಖರ್ ಸಜ್ಜನರ ವಂದಿಸಿದರು.‌

ದತ್ತಿ ದಾನಿಗಳು ಆದ ಚಂದ್ರಶೇಖರ ಪಾಟೀಲ, ಚನ್ನಬಸಪ್ಪ ಧಾರವಾಡ ಶೆಟ್ಟರ್,ಗುರು ತಿಗಡಿ, ಎಚ್ ಎಸ್ ಬಡಿಗೇರ, ಗುರು ಪೋಳ, ವಿಜಯಲಕ್ಷ್ಮೀ ಕಲ್ಯಾಣಶೆಟ್ಟರ, ಶಶಿಕಲಾ ಶಾಸ್ತ್ರಿ ಮಠ, ಮನೋಹರ ವಾಲಗದ, ಅನುರಾಧ ಕುಲಕರ್ಣಿ, ಎಮ್ ಸಿ ಯಲಿಗಾರ, ಎಮ್ ಎ ಭಾವಿಕಟ್ಟಿ, ಎಮ್ ಕೆ ನದಾಫ್, ರೇವಣಸಿದ್ದಪ್ಪ, ಗಂಗಾಧರ ಗಾಡದ , ಸಂಜೀವ ಡುಮಕನಾಳ , ಸುಮಾಂಗಲಾ ದಂಡೀನ , ಗಂಗವ್ವ ಕೋಟಿಗೌಡರ, ಜಿ ಐ ಬುಯ್ಯಾರ ಮುಂತಾದವರು ಉಪಸ್ಥಿತರಿದ್ದರು

RELATED ARTICLES

LEAVE A REPLY

Please enter your comment!
Please enter your name here

Most Popular

error: Content is protected !!
Join WhatsApp Group